-ಪ್ಲೇ ಆಫ್ ಪ್ರವೇಶಿಸಿದ ಅಯ್ಯರ್ ಪಡೆ
ಶಾರ್ಜಾ: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯದ ಅಂತಿಮ ಓವರಿನಲ್ಲಿ 20 ರನ್ ಸಿಡಿಸಿದ ಡೆಲ್ಲಿ ಆಟಗಾರ ಅಕ್ಷರ್ ಪಟೇಲ್ ತಂಡಕ್ಕೆ 5 ವಿಕೆಟ್‍ಗಳ ರೋಚಕ ಗೆಲುವನ್ನು ತಂದುಕೊಟ್ಟಿದ್ದಾರೆ. ಚೆನ್ನೈ ವಿರುದ್ಧ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಡೆಲ್ಲಿ ಪಡೆ 14 ಅಂಕಗಳನ್ನು ಪಡೆದುಕೊಂಡಿದೆ. ಅಲ್ಲದೇ ಪ್ಲೇ ಆಫ್ ಪ್ರವೇಶಿಸುವುದು ಖಚಿತವಾಗಿದೆ.
ಅಂತಿಮ ಓವರ್ ನಲ್ಲಿ ಡೆಲ್ಲಿ ಗೆಲುವಿಗೆ 17 ರನ್ ಬೇಕಿತ್ತು. ಈ ವೇಳೆ ಬೌಲ್ ಮಾಡಿದ ಜಡೇಜಾ ಬೌಲಿಂಗ್ ಮೊದಲ ಎಸೆತದಲ್ಲಿ ಧವನ್ 1 ರನ್ ಗಳಿಸಿದರೆ, 2ನೇ ಮತ್ತು 3ನೇ ಎಸೆತವನ್ನು ಅಕ್ಷರ್ ಪಟೇಲ್ ಸಿಕ್ಸರ್ ಸಿಡಿಸಿದರು. ಇದರೊಂದಿಗೆ ಚೆನ್ನೈ ತಂಡದ ಸೋಲು ಖಚಿತವಾಗಿತ್ತು. ಓವರಿನ 4ನೇ ಎಸೆತದಲ್ಲಿ 2 ರನ್ ಓಡಿದ ಅಕ್ಷರ್, 5ನೇ ಎಸೆತದಲ್ಲಿ ಮತ್ತೊಂದು ಸಿಕ್ಸರ್ ಸಿಡಿಸಿ ಗೆಲುವು ತಂದುಕೊಟ್ಟರು. ಪರಿಣಾಮ ಡೆಲ್ಲಿ ತಂಡ 19.5 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 185 ರನ್ ಗಳಿಸಿ ಜಯ ಪಡೆಯಿತು.
Advertisement
A victory to relish for the @DelhiCapitals.#Dream11IPL pic.twitter.com/wukj8mFBQs
— IndianPremierLeague (@IPL) October 17, 2020
Advertisement
180 ರನ್‍ಗಳ ಟಾರ್ಗೆಟ್ ಬೆನ್ನಟ್ಟಿದ ಡೆಲ್ಲಿ ತಂಡ ಆರಂಭದಲ್ಲೇ ಎಡವಿತು. ಕಳೆದ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಪೃಥ್ವಿ ಶಾ ಇಂದಿನ ಪಂದ್ಯದಲ್ಲೂ ಶೂನ್ಯ ಸುತ್ತಿ ಪೆವಿಲಿಯನ್ ಸೇರಿದರು. ಇತ್ತ ಮೊದಲ ಓವರ್ ನಲ್ಲಿ ವಿಕೆಟ್ ಪಡೆದಿದ್ದು ಮಾತ್ರವಲ್ಲದೇ ದೀಪಕ್ ಚಹರ್ ಯಾವುದೇ ರನ್ ಬಿಟ್ಟು ಕೊಡದೆ ಮೇಡನ್ ಸಾಧನೆ ಮಾಡಿದರು. 5ನೇ ಓವರಿನ ಮೊದಲ ಎಸೆತದಲ್ಲಿ 10 ಎಸೆತಗಳಲ್ಲಿ 8 ರನ್ ಗಳಿಸಿದ್ದ ರಹಾನೆ ವಿಕೆಟ್ ಪಡೆದ ಚಹರ್ ಡೆಲ್ಲಿಗೆ 2ನೇ ಹೊಡೆತ ನೀಡಿದರು. ಪವರ್ ಪ್ಲೇ ಅಂತ್ಯಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಡೆಲ್ಲಿ 41 ರನ್ ಗಳಿಸಿತ್ತು.
Advertisement
Advertisement
ವಿಕೆಟ್ ಕಳೆದುಕೊಳ್ಳುತ್ತಿದ್ದರು ಮತ್ತೊಂದು ಬದಿಯಲ್ಲಿ ರನ್ ಗಳಿಸುತ್ತಾ ಸಾಗುತ್ತಿದ್ದ ಧವನ್ ಎರಡು ಜೀವದಾನಗಳನ್ನು ಪಡೆಯುವುದರೊಂದಿಗೆ ಅರ್ಧ ಶತಕ ಗಳಿಸಿ ಮುನ್ನುಗುತ್ತಿದ್ದರು. ಪಂದ್ಯದಲ್ಲಿ 3 ಜೀವದಾನ ಪಡೆದ ಧವನ್ ಅಂತಿಮವಾಗಿ 58 ಎಸೆತಗಳಲ್ಲಿ ಸಿಕ್ಸರ್, 14 ಬೌಂಡರಿಗಳೊಂದಿಗೆ 101 ರನ್ ಗಳಿಸಿದರು. ಆ ಮೂಲಕ ಐಪಿಎಲ್ ಟೂರ್ನಿಯಲ್ಲಿ ಮೊದಲ ಶತಕ ಸಿಡಿಸಿದ ಸಾಧನೆ ಮಾಡಿದರು. ಉಳಿದಂತೆ ಡೆಲ್ಲಿ ಪರ ಅಯ್ಯರ್ 23 ರನ್, ಸ್ಟೋಯ್ನಿಸ್ 24 ರನ್, ಅಲೆಕ್ಸ್ ಕ್ಯಾರಿ 4 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ನಡೆಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡುಪ್ಲೆಸಿಸ್ 58 ರನ್, ರಾಯುಡು 45* ರನ್, ರವೀಂದ್ರ ಜಡೇಜಾ 33* ರನ್‍ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ 4 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತ್ತು. ಡೆಲ್ಲಿ ಪರ ಅನ್ರಿಕ್ ನಾಟ್ರ್ಜೆ 2 ವಿಕೆಟ್ ಪಡೆದರೆ, ದೇಶಪಾಂಡೆ ಮತ್ತು ರಬಾಡಾ ತಲಾ 1 ವಿಕೆಟ್ ಪಡೆದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಚೆನ್ನೈ ತಂಡಕ್ಕೆ ಮೊದಲ ಓವರಿನ 3ನೇ ಎಸೆತದಲ್ಲೇ ಶಾಕ್ ಕೊಟ್ಟ ದೇಶಪಾಂಡೆ ಶೂನ್ಯಕ್ಕೆ ಸ್ಯಾಮ್ ಕರ್ರನ್ ರನ್ನು ಪೆವಿಲಿಯನ್‍ಗಟ್ಟಿದರು. ಆ ಬಳಿಕ ಬಂದ ವ್ಯಾಟ್ಸನ್, ಡೆಫ್ಲೆಸಿಸ್ ಜೋಡಿ 2ನೇ ವಿಕೆಟ್‍ಗೆ 87 ರನ್ ಗಳ ಜೊತೆಯಾಟ ನೀಡಿ ಡೆಲ್ಲಿ ಬೌಲರ್ ಗಳನ್ನು ಕಾಡಿತ್ತು. ತಂಡದ ರನ್ ವೇಗ ಹೆಚ್ಚಿಸುವ ಪ್ರಯತ್ನದಲ್ಲಿ ವ್ಯಾಟ್ಸನ್ 36 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 58 ರನ್ ಗಳಿಸಿದ್ದ ಡುಫ್ಲೆಸಿಸ್‍ರ ವಿಕೆಟ್ ಪಡೆದು ರಬಾಡಾ ಮಿಂಚಿದರು.
AXARRRRRR BHAISAAAAABBBBBBB ????????
DC – 177/5 (19.3)#DCvCSK #Dream11IPL #YehHaiNayiDilli pic.twitter.com/4zWiB7KIh5
— Delhi Capitals (Tweeting from ????????) (@DelhiCapitals) October 17, 2020
3 ರನ್ ಗಳಿಸಿ ಔಟಾಗುವ ಮೂಲಕ ಧೋನಿ ನಿರಾಸೆ ಮೂಡಿಸಿದರು. ಈ ವೇಳೆಗೆ ಚೆನ್ನೈ 16.3 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 129 ರನ್ ಗಳಿಸಿತ್ತು. ಸ್ಲಾಗ್ ಓವರ್ ಗಳಲ್ಲಿ ಅಂಬಟಿ ರಾಯುಡು, ಜಡೇಜಾ ಸ್ಫೋಟಕ ಪ್ರದರ್ಶನದಿಂದಾಗಿ ನಿಗದಿತ 29 ಓವರ್ ಗಳಲ್ಲಿ 179 ರನ್ ಗಳಿಸಿತು. ರಾಯುಡು, ಜಡೇಜಾ ಜೋಡಿ 5ನೇ ವಿಕೆಟ್‍ಗೆ 21 ಎಸೆತಗಳಲ್ಲಿ ಅರ್ಧ ಶತಕದ ಜೊತೆಯಾಟ ನೀಡಿತ್ತು.