ಪುಣೆ: ಕೊನೆಯ 60 ಎಸೆತಗಳಲ್ಲಿ ಟೀಂ ಇಂಡಿಯಾ 126 ರನ್ ಚಚ್ಚುವ ಮೂಲಕ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡಿಗೆ 337 ರನ್‌ಗಳ ದೊಡ್ಡ ಗುರಿಯನ್ನು ನೀಡಿದೆ.
40 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 210 ರನ್‌ಗಳಿಸಿದ್ದ ಭಾರತದ ಮೊತ್ತವನ್ನು 300 ರನ್‌ಗಳ ಗಡಿ ದಾಟಿಸಿದ್ದು ರಾಹುಲ್ ಮತ್ತು ಕೊನೆಯಲ್ಲಿ ಸಿಕ್ಸರ್, ಬೌಂಡರಿಗಳ ಸುರಿಮಳೆಗೈದ ಪಂತ್, ಹಾರ್ದಿಕ್ ಪಾಂಡ್ಯ ಜೋಡಿ.
Advertisement
Advertisement
ವಿರಾಟ್ ಕೊಹ್ಲಿ 66 ರನ್( 79 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದು 31.6 ಓವರ್‌ಗಳಲ್ಲಿ ಔಟಾದಾಗ ಭಾರತದ ಸ್ಕೋರ್ 3 ವಿಕೆಟ್ ನಷ್ಟಕ್ಕೆ 158 ಆಗಿತ್ತು. ನಂತರ ಒಂದಾದ ರಾಹುಲ್ ಮತ್ತು ರಿಷಭ್ ಪಂತ್ 4ನೇ ವಿಕೆಟಿಗೆ 80 ಎಸೆತಗಳಲ್ಲಿ 113 ರನ್ ಜೊತೆಯಾಟವಾಡಿದರು.
Advertisement
44.5 ಓವರ್‌ನಲ್ಲಿ ರಾಹುಲ್ 108 ರನ್(114 ಎಸೆತ, 7 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ನಂತರ ಸಿಕ್ಸರ್, ಬೌಂಡರಿಗಳ ಆರ್ಭಟ ಮತ್ತಷ್ಟು ಜಾಸ್ತಿಯಾಯಿತು. ಸ್ಯಾಮ್ ಕರ್ರನ್ ಎಸೆದ 46ನೇ ಓವರ್‌ನಲ್ಲಿ 21 ರನ್ ಬಂತು. ಹಾರ್ದಿಕ್ ಪಾಂಡ್ಯ, ರಿಷಭ್ ಪಂತ್ ಜೋಡಿ 13 ಎಸೆತಗಳಿಗೆ 37 ರನ್ ಚಚ್ಚಿದರು. ಕೊನೆಯಲ್ಲಿ ಕೃನಾಲ್ ಪಾಂಡ್ಯ, ಹಾರ್ದಿಕ್ ಪಾಂಡ್ಯ 19 ಎಸೆತಗಳಿಗೆ 26 ರನ್ ಹೊಡೆದರು.
Advertisement
ರಿಷಭ್ ಪಂತ್ 77 ರನ್(40 ಎಸೆತ, 3 ಬೌಂಡರಿ, 7 ಸಿಕ್ಸರ್) ಹೊಡೆದರೆ ಹಾರ್ದಿಕ್ ಪಾಂಡ್ಯ 35 ರನ್(16 ಎಸೆತ, 1 ಬೌಂಡರಿ, 4 ಸಿಕ್ಸರ್) ಹೊಡೆದು ಔಟಾದರು.
ರನ್ ಏರಿದ್ದು ಹೇಗೆ?
50 ರನ್ – 78 ಎಸೆತ
100 ರನ್ – 133 ಎಸೆತ
150 ರನ್ – 187 ಎಸೆತ
200 ರನ್ – 234 ಎಸೆತ
250 ರನ್ – 256 ಎಸೆತ
300 ರನ್ – 277 ಎಸೆತ
336 ರನ್ – 300 ಎಸೆತ