– ಎಬಿಡಿ ಬ್ಯಾಟಿಂಗ್ ಕ್ರಮಾಂಕ ಬದಲಿಸಿದ್ದರಿಂದ ಸೋಲು?
– ಪಂಜಾಬ್‍ಗೆ 8 ವಿಕೆಟ್‍ಗಳ ಜಯ
ಶಾರ್ಜಾ: 2020ರ ಐಪಿಎಲ್ ಟೂರ್ನಿಯ ಮೊದಲ ಮುಖಾಮುಖಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ 2ನೇ ಪಂದ್ಯದಲ್ಲಿ ರೋಚಕ ಜಯ ಸಾಧಿಸಿದೆ.
ಪಂಜಾಬ್ ಪರ ನಾಯಕ ಕೆಎಲ್ ರಾಹುಲ್ 61 ರನ್, ಗೇಲ್ 53 ಹಾಗೂ ಅಗರ್ವಾಲ್ ಅವರ 45 ರನ್ ಗಳ ಭರ್ಜರಿ ಆಟ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟಿತ್ತು. 20 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡ ಪಂಜಾಬ್ 177 ರನ್ ಗಳಿಸಿತು.
Advertisement
Advertisement
ಶಾರ್ಜಾ ಕ್ರೀಡಾಗಂಣದಲ್ಲಿ 172 ಗಳ ಗುರಿಯನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ನಾಯಕ ಕೆಎಲ್ ರಾಹುಲ್ ಹಾಗೂ ಮಯಾಂಕ್ ಅಗರ್ವಾಲ್ ಭರ್ಜರಿ ಆರಂಭವನ್ನೇ ನೀಡಿದರು. ಆರಂಭದಿಂದಲೇ ಹೊಡಿಬಡಿ ಆಟಕ್ಕೆ ಮುಂದಾದ ಈ ಜೋಡಿ ಪವರ್ ಪ್ಲೇ ಅಂತ್ಯಕ್ಕೆ 56 ರನ್ ಸಿಡಿಸಿತ್ತು. ಈ ಹಂತದಲ್ಲಿ ಉತ್ತಮವಾಗಿ ಆಡುತ್ತಿದ್ದ ಮಯಾಂಕ್ ಭಾರೀ ಹೊಡೆತಕ್ಕೆ ಮುಂದಾಗಿ ಚಹಲ್‍ಗೆ ವಿಕೆಟ್ ಒಪ್ಪಿಸಿದರು. 25 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಗಳೊಂದಿಗೆ 45 ರನ್ ಗಳಿಸಿದ ಮಯಾಂಕ್ ಅರ್ಧ ಶತಕದ ಅಂಚಿನಲ್ಲಿ ಔಟಾದರು.
Advertisement
Advertisement
ರಾಹುಲ್, ಗೇಲ್ ಬೊಂಬಾಟ್ ಆಟ: ಮಯಾಂಕ್ ಔಟಾಗುತ್ತಿದಂತೆ ಕ್ರಿಸ್‍ಗೆ ಬಂದ ಗೇಲ್ ಟೂರ್ನಿಯ ಮೊದಲ ಇನ್ನಿಂಗ್ಸ್ ನಲ್ಲೇ ಭರ್ಜರಿಯಾಗಿ ಬ್ಯಾಟ್ ಬೀಸಿದರು. ವಿಶೇಷ ಎಂದರೇ ಬರೋಬ್ಬರಿ 8 ವರ್ಷಗಳ ಬಳಿಕ ಗೇಲ್ ಒನ್‍ಡೌನ್ ಆಟಗಾರನಾಗಿ ಕಣಕ್ಕಿಳಿದಿದ್ದರು. ಈ ಹಿಂದೆ 2010 ಮತ್ತು 2012 ರಲ್ಲಿ 2 ಬಾರಿ ರಾಜಸ್ಥಾನ ರಾಯಲ್ಸ್ ವಿರುದ್ಧ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ನಡೆಸಿದ್ದರು. 45 ಎಸೆತದಲ್ಲಿ ಬೌಂಡರಿ, 5 ಸಿಕ್ಸರ್ ಸಿಡಿಸಿದ ಗೇಲ್ ಇನ್ನಿಂಗ್ಸ್ ನ ಕೊನೆಯ ಎಸೆತ ಬಾಕಿ ಇರುವ ಸಮಯದಲ್ಲಿ ರನೌಟ್ ಆದ್ರು. ಪಂದ್ಯದಲ್ಲಿ 36 ಎಸೆತಗಳಲ್ಲೇ ಗೇಲ್ ಅರ್ಧ ಶತಕ ಸಿಡಿಸಿ ವೃತ್ತಿ ಜೀವನದ 29ನೇ ಅರ್ಧಗಳಿಸಿ ಗಮನ ಸೆಳೆದರು.
ಇತ್ತ ಪಂದ್ಯ ಆರಂಭದಿಂದಲೂ ನಾಯಕನ ಜವಾಬ್ದಾರಿಯುತ ಆಟವಾಡಿದ ಕೆಎಲ್ ರಾಹುಲ್ 49 ಎಸೆತಗಳಲ್ಲಿ ಬೌಂಡರಿ, 5 ಸಿಕ್ಸರ್ ನೆರವಿನಿಂದ 61 ರನ್ ಗಳಿಸಿ ಅಜೇಯರಾಗಿ ಉಳಿದರು.
ಕೊನೆಯ ಓವರ್‍ನಲ್ಲಿ ಪಂಜಾಬ್ ಗೆಲುವಿಗೆ 2 ರನ್ ಬೇಕಿತ್ತು. ಚಹಲ್ ಎಸೆದ ಮೊದಲ ಎರಡು ಬಾಲ್‍ಗಳಲ್ಲಿ ಯಾವುದೇ ರನ್ ಬರದೇ ಇದ್ದರೆ ಮೂರನೇ ಎಸೆತದಲ್ಲಿ ಒಂದು ರನ್ ಬಂತು. 4ನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. 5ನೇ ಎಸೆತದಲ್ಲಿ ಗೇಲ್ ರನೌಟ್ ಆದರು. ಅಂತಿಮ ಎಸೆತದಲ್ಲಿ ಪಂಜಾಬ್ ಗೆಲುವಿಗೆ 1 ರನ್ ಗಳಿಸುವ ಅಗತ್ಯವಿತ್ತು. ಈ ವೇಳೆ ಕ್ರಿಸ್ ಬಂದ ನಿಕೊಲಸ್ ಪೂರನ್ ಸಿಕ್ಸರ್ ಸಿಡಿಸಿ ಗೆಲುವಿನ ಸಿಹಿ ನೀಡಿದರು.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬೆಂಗಳೂರು ತಂಡಕ್ಕೆ 5ನೇ ಓವರಿನಲ್ಲಿ ಹರ್ಷದೀಪ್ ಶೈನಿ ಮೊದಲ ಅಘಾತ ನೀಡಿದರು. ಟೂರ್ನಿಯಲ್ಲಿ ಸತತ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಪಡಿಕ್ಕಲ್ 12 ಎಸೆತಗಳಲ್ಲಿ 18 ರನ್ ಗಳಿಸಿದ್ದ ಸಂದರ್ಭದಲ್ಲಿ ವಿಕೆಟ್ ಒಪ್ಪಿಸಿದ್ದರು. ಪವರ್ ಪ್ಲೇ ಅಂತ್ಯಕ್ಕೆ ಆರ್ ಸಿಬಿ ತಂಡ ವಿಕೆಟ್ ಕಳೆದುಕೊಂಡು 57 ರನ್ ಗಳಿಸಿತ್ತು. ಈ ಹಂತದಲ್ಲಿ ದಾಳಿ ಗಳಿಸಿದ ಅಶ್ವಿನ್, 20 ರನ್ ಗಳಿಸಿದ್ದ ಫಿಂಚ್ ವಿಕೆಟ್ ಪಡೆದರು. 62 ರನ್ ಗಳಿಸುವ ವೇಳೆ ಆರ್ ಸಿಬಿ ತಂಡದ ಇಬ್ಬರು ಆರಂಭಿಕರು ಪೆವಿಲಿಯನ್‍ಗೆ ಸೇರಿದ್ದರು.
First game of the season and a FIFTY for The Boss ????????#Dream11IPL | @henrygayle pic.twitter.com/xoPrFLgjpS
— IndianPremierLeague (@IPL) October 15, 2020
ಫಿಂಚ್ ಔಟಾದ ಬಳಿಕ ಆರ್ ಸಿಬಿ ರನ್ ವೇಗಕ್ಕೆ ಕಡಿವಾಣ ಹಾಕಲು ಯಶಸ್ವಿಯಾಗಿದ ಪಂಜಾಬ್ ಬೌಲರ್ ಗಳು ಆ ಬಳಿಕ 5 ಓವರ್ ಗಳಲ್ಲಿ ಕೇವಲ 28 ರನ್ ಗಳನ್ನು ಮಾತ್ರ ನೀಡಿದರು. ಆರ್ ಸಿಬಿ ಬ್ಯಾಟಿಂಗ್ ಲೈನ್‍ಅಪ್‍ನಲ್ಲಿ ಬದಲಾವಣೆ ಮಾಡಿ ಸುಂದರ್ ಹಾಗೂ ದುಬೆಗೆ ಎಬಿ ಡಿವಿಲಿಯರ್ಸ್ ಗೂ ಮುನ್ನವೇ ಬ್ಯಾಟಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಉತ್ತಮ ಅವಕಾಶದಲ್ಲಿ ಮಿಂಚಲು ವಿಫಲರಾದ ಸುಂದರ್ 13 ರನ್ ಗಳಿಸಿ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರೆ, 19 ಎಸೆತಗಳಲ್ಲಿ ದುಬೆ 23 ರನ್ ಗಳಿಸಿ ಔಟಾದರು. ಪಂದ್ಯದಲ್ಲಿ ದುಬೆ 2 ಸಿಕ್ಸರ್ ಸಿಡಿಸಿದರು. ಈ ವೇಳೆ 2020ರ ಐಪಿಎಲ್ ಟೂರ್ನಿಯಲ್ಲಿ 400 ಸಿಕ್ಸರ್ ಗಳು ಪೂರ್ಣಗೊಂಡಿದ್ದವು.
6ನೇ ಕ್ರಮಾಂಕಲ್ಲಿ ಎಬಿಡಿ: 2014ರ ಬಳಿಕ ಎಬಿ ಡಿವಿಲಿಯರ್ಸ್ ಮೊದಲ ಬಾರಿಗೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‍ಗೆ ಇಳಿದಿದ್ದರು. ಇನ್‍ಫಾರ್ಮ್ ನಲ್ಲಿದ್ದ ಆಟಗಾರರನ್ನು ಏಕೆ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಲಾಗಿತ್ತು ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಕೇಳುತ್ತಿದ್ದಾರೆ. ಆರ್‍ಸಿಬಿ ಅಚ್ಚರಿಯ ಆಯ್ಕೆಗೆ ಪ್ರತಿಕ್ರಿಯೆ ನೀಡಿರುವ ಆಕಾಶ ಚೋಪ್ರಾ, ಲೆಗ್ ಸ್ಪಿನ್ನರ್ ಗಳಿಗೆ ಕೌಂಟರ್ ನೀಡಲು ಸುಂದರ್ ಅವರಿಗೆ ಪ್ರಮೋಷನ್ ನೀಡಲಾಗಿದೆ. ಆದರೆ ಅವರು ಬಹುಬೇಗ ಔಟಾಗುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದರು.
4500 runs in the IPL for the Universe Boss #Dream11IPL pic.twitter.com/RkwWnMlIyP
— IndianPremierLeague (@IPL) October 15, 2020
ಇತ್ತ ಎಬಿ ಡಿವಿಲಿಯರ್ಸ್ ಕ್ರಮಾಂಕದಲ್ಲಿ ಇಳಿದು 5 ಎಸೆತಗಳಲ್ಲಿ 2 ರನ್ ಗಳಿಸಿ ನಿರ್ಗಮಿಸಿದರು. ಇದರ ಬೆನ್ನಲ್ಲೇ 39 ಎಸೆತಗಳಲ್ಲಿ 3 ಬೌಂಡರಿ ಗಳೊಂದಿಗೆ 48 ರನ್ ಗಳಿಸಿದ್ದ ಕೊಹ್ಲಿ, ಶಮಿಗೆ ವಿಕೆಟ್ ಒಪ್ಪಿಸಿದ್ದರು. ಅಂತಿಮ ಹಂತದಲ್ಲಿ 12 ಎಸೆತಗಳನ್ನು ಎದುರಿಸಿದ ಉದಾನಾ ಮತ್ತು ಮೋರಿಸ್ 35 ರನ್ ಜೊತೆಯಾಟ ನೀಡಿದರು. ಅಂತಿಮ ಓವರಿನಲ್ಲಿ ಆರ್ ಸಿಬಿ ತಂಡ 23 ರನ್ ಗಳಿಸಿ, ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಪೇರಿಸಿತ್ತು.
ಶಮಿ ದಾಖಲೆ: ಬೆಂಗಳೂರು ತಂಡದ ಸ್ಫೋಟಕ ಬ್ಯಾಟಿಂಗ್ ಜೋಡಿ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ವಿಕೆಟ್ ಅನ್ನು ಪಡೆಯುವ ಮೂಲಕ ಮೊಹಮ್ಮದ್ ಶಮಿ ಅಪರೂಪದ ದಾಖಲೆ ಬರೆದರು. 2020ರ ಐಪಿಎಲ್‍ನ ಒಂದೇ ಪಂದ್ಯದಲ್ಲಿ ಇಬ್ಬರು ಆಟಗಾರರ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. ಇದಕ್ಕೂ ಮುನ್ನ 2019ರಲ್ಲಿ ಹರ್ಭಜನ್, ಗೋಪಾಲ್, 2018 ರಲ್ಲಿ ರಾಣಾ, ಗೋಪಾಲ್, 2019 ಸಂದೀಪ್ ಶರ್ಮಾ, 2016 ರಲ್ಲಿ ಕೃನಾಲ್ ಪಾಂಡ್ಯ, 2014 ಮತ್ತು 2015 ರಲ್ಲಿ ನೆಹ್ರಾ ಈ ಸಾಧನೆ ಮಾಡಿದ್ದರು.