ಹಾವೇರಿ: ಕೃಷಿ ಸಚಿವ ಬಿ.ಸಿ.ಪಾಟೀಲ್ ಮೊದಲ ಹಂತದ ಕೊರೊನಾ ಲಸಿಕೆಯನ್ನು ಮನೆಯಲ್ಲಿಯೇ ಪಡೆದುಕೊಂಡಿದ್ದಾಗ ವಿವಾದ ಸೃಷ್ಟಿಯಾಗಿತ್ತು. ಇದೀಗ ಎಚ್ಚೆತ್ತು ಬಿ.ಸಿ.ಪಾಟೀಲ್ ಎರಡನೇ ಹಂತದ ಲಸಿಕೆಯನ್ನು ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಪಡೆದುಕೊಂಡಿದ್ದಾರೆ.
Advertisement
ಮಾರ್ಚ್ 2 ರಂದು ಮೊದಲನೇ ಹಂತದ ಲಸಿಕೆಯನ್ನು ಬಿ.ಸಿ.ಪಾಟೀಲ್ ಹಾಗೂ ಪತ್ನಿ ಮನೆಯಲ್ಲಿ ಲಸಿಕೆ ಹಾಕಿಸಿಕೊಂಡು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಅಲ್ಲದೆ ಮನೆಯಲ್ಲಿಯೇ ವ್ಯಾಕ್ಸಿನ್ ನೀಡಿದ ತಾಲೂಕು ಆರೋಗ್ಯಾಧಿಕಾರಿ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ನೋಟೀಸ್ ನೀಡಿದ ಆರೋಗ್ಯ ಇಲಾಖೆ, ಈಗ ವೈದ್ಯಾಧಿಕಾರಿ ಡಾ.ಝಡ್. ಆರ್. ಮಕಾಂದಾರ್ ಅಮಾನತು ಮಾಡಿ ಆದೇಶ ನೀಡಿದೆ.
Advertisement
Advertisement
ಇಂದು ಹಿರೇಕೆರೂರಿನ ಸರ್ಕಾರಿ ಆಸ್ಪತ್ರೆಯಲ್ಲಿ, ಎರಡನೇ ಹಂತದ ಕೋವಿಡ್ ಲಸಿಕೆಯನ್ನು ಪಡೆದೆನು.
45 ವರ್ಷ ಮೇಲ್ಪಟ್ಟ ಎಲ್ಲ ನಾಗರೀಕರಿಗೂ ಕೊರೊನಾ…
Posted by B.C.Patil on Friday, April 2, 2021
ವಿವಾದದ ನಂತರ ಆಸ್ಪತ್ರೆಗೆ ಹೋಗಿ ಆಸ್ಪತ್ರೆಯಲ್ಲಿ ಎರಡನೇ ಹಂತದ ಲಸಿಕೆಯನ್ನು ಸಚಿವ ಬಿ.ಸಿ. ಪಾಟೀಲ್ ಹಾಕಿಸಿಕೊಂಡಿದ್ದಾರೆ. ಎರಡನೇ ಹಂತದ ಲಸಿಕೆ ಹಾಕಿಸಿಕೊಂಡದ್ದನ್ನು ಫೇಸ್ ಬುಕ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, 45 ವರ್ಷ ಮೇಲ್ಪಟ್ಟ ಎಲ್ಲಾ ನಾಗರಿಕರು ಸ್ವಯಂ ಪ್ರೇರಿತವಾಗಿ ಕೋವಿಡ್ ಲಸಿಕೆಯನ್ನು ಪಡೆದುಕೊಳ್ಳಿ, ಲಸಿಕೆ ಪಡೆದುಕೊಂಡು ಕೊರೊನಾ ಸೋಂಕಿನಿಂದ ದೂರವಿರಿ ಎಂದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.