ಮಡಿಕೇರಿ: ಪ್ರವಾಹದ ಸಾಧ್ಯತೆ ಇರುವ ಸ್ಥಳಗಳಿಗೆ ಇಂದು ಮಡಿಕೇರಿ ಶಾಸಕ ಅಪ್ಪಚು ರಂಜನ್ ಭೇಟಿ ನೀಡಿದ್ರು. ಬಲುಮುರಿ ಗ್ರಾಮದ ಕಾವೇರಿ ನದಿಯಲ್ಲಿ ಭಾರೀ ಪ್ರಮಾಣದ ನೀರು ಹರಿಯುತ್ತಿರುವ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸಿದ ಶಾಸಕ ಅಪ್ಪಚ್ಚು ರಂಜನ್ ನದಿಪಾತ್ರದ ಜನರ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ರು. ಬಳಿಕ ಮಾತಾನಾಡಿದ ಅವರು ತಲಕಾವೇರಿ ಬಾಗಮಂಡಲ ಸುತ್ತಮುತ್ತ ಭಾರೀ ಮಳೆ ಕಳೆದ 24 ಗಂಟೆಯಲ್ಲಿ ಭಾಗಮಂಡಲದಲ್ಲಿ 45.2 ಮಿ.ಮೀಟರ್ ಮಳೆಯಾಗಿದೆ. ಕಾವೇರಿ ನದಿ ನೀರಿನ ಮಟ್ಟದಲ್ಲಿ ಹೆಚ್ಚಳವಾಗಿದೆ.
ಕೊಡಗು ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಮಳೆ ಬಿರುಸು ಪಡೆದುಕೊಂಡಿದು. ಎಡಬಿಡದೆ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿದೆ. ಅಷ್ಟೇ ಅಲ್ಲದೇ ಇದೇ ರೀತಿ ಮಳೆ ಮುಂದುವರಿದರೆ ಕಾವೇರಿ ಉಕ್ಕಿ ಹರಿವ ಸಾಧ್ಯತೆಯು ಹೆಚ್ಚಾಗಿದೆ. ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿಯೂ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಮಡಿಕೇರಿ ತಾಲೂಕಿನ ಬಲುಮುರಿಯ ಕಾವೇರಿ ನದಿಯ ನೀರಿನ ಒಳಹರಿವು ಹೆಚ್ಚಾಗಿದೆ. ಬಲುಮುರಿ ಸೇತುವೆ ಮುಳುಗಡೆಯಾಗಲೂ ಕೇವಲ ಎರಡು ಅಡಿ ಮಾತ್ರ ಬಾಕಿಯಿದೆ.
ಈಗಾಗಲೇ ಜಿಲ್ಲಾಡಳಿತದಿಂದ ಮಳೆಗಾಲವನ್ನು ಎದುರಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಕಾಳಜಿ ಕೇಂದ್ರಗಳ ವ್ಯವಸ್ಥೆ ಅಹಾರ ಪೂರೈಕೆ ಬಗ್ಗೆ ಸಕಲ ರೀತಿಯಲ್ಲಿ ಸಿದ್ಧತೆಗಳು ನಡೆಸಿದೆ. ಜಿಲ್ಲೆಯಲ್ಲಿ ಎನ್‍ಡಿಅರ್ ಎಫ್ ತಂಡ ಬೀಡು ಬಿಟ್ಟಿದೆ. ಯಾವುದರೂ ಅನಾಹುತಗಳು ಸಂಭವಿಸಿದ್ರು. ತಕ್ಷಣವೇ ಕಾರ್ಯಪ್ರವೃತರಾಗುತ್ತಾರೆ. ಇದನ್ನೂ ಓದಿ: ಹಿಂದೂ ಯುವತಿ-ಮುಸ್ಲಿಂ ಯುವಕನ ಮದುವೆ – ಆಹ್ವಾನ ಪತ್ರಿಕೆ ಪ್ರಿಂಟ್ ಬಳಿಕ ವಿವಾಹ ಕ್ಯಾನ್ಸಲ್