ಮಡಿಕೇರಿ: ಮಂಜಿನ ನಗರಿ ಮಡಿಕೇರಿಯಲ್ಲಿ ಮಳೆಗಾಲಕ್ಕೂ ಮೊದಲೇ ಮಳೆಯಾಗುತ್ತಿದೆ. ಬಿಸಿಲಿನ ತಾಪಕ್ಕೆ ಬಳಲಿದ್ದ ಜನರಿಗೆ ಮಳೆರಾಯ ತಂಪು ನೀಡಿದ್ದಾನೆ. ಇಂದು ಮಧ್ಯಾಹ್ನದಿಂದಲೇ ಜಿಲ್ಲೆಯ ವಿವಿಧೆಡೆ ಗಾಳಿ ಸಹಿತ ಮಳೆಯಾಗುತ್ತಿದೆ.
Advertisement
ಸೋಮವಾರಪೇಟೆ ತಾಲೂಕಿನ ತ್ಯಾಗತ್ತೂರು ಗ್ರಾಮದಲ್ಲಿ ಭಾರೀ ಗಾಳಿ ಮಳೆಗೆ ಮುಂಡ್ರಮನೆ ಅಚ್ಚಯ್ಯ ಎಂಬವರ ತೋಟದಲ್ಲಿ ಬೃಹತ್ ಮರವೊಂದು ಲೈನ್ ಮನೆ ಮೇಲೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ, ಮನೆಗೆ ಹಾನಿಯಾಗಿದೆ. ಇನ್ನೂ ಅಕಾಲಿಕ ಮಳೆಯಿಂದ ರೈತರು ಕಂಗಾಲಾಗಿದ್ದಾರೆ. ಈ ತಿಂಗಳಲ್ಲಿ ಕಾಫಿ ಹೂ ಬಿಟ್ಟಿದೆ, ಈ ಅಕಾಲಿಕೆ ಮಳೆ ಬಿದ್ರೆ ಕಾಫಿ ಹೂ ಉದುರುತ್ತದೆ. ಇದರಿಂದ ಮುಂದಿನ ಬೆಳೆಗೆ ಹಾನಿಯಾಗಲಿದೆ ಎಂದು ರೈತರು ಆತಂಕದಲ್ಲಿದ್ದಾರೆ.
Advertisement
Advertisement
ಮಳೆಗಾಲಕ್ಕೂ ಮೊದಲೇ ಮಳೆ ಆರಂಭವಾಗಿದ್ದು, ಭತ್ತ ಕೃಷಿ ಮಾಡಲು ಮಾತ್ರ ಅನುಕೂಲವಾಗಿದೆ. ಮತ್ತೊಂದೆಡೆ ಕೊರೊನಾ ಕರ್ಫ್ಯೂ ಇದ್ರೂ ಆಚೆ ಬರ್ತಿದ್ದ ಜನರೀಗ ಮಳೆರಾಯನಿಗೆ ಹೆದರಿ ಮನೆಯೊಳಗಿದ್ದಾರೆ.
Advertisement