ಮಡಿಕೇರಿ: ಪ್ರಕೃತಿಯ ನಾಡು ದಕ್ಷಿಣ ಕಾಶ್ಮೀರ ಅಂತ ಕರೆಯುವ ಕೊಡಗಿನಲ್ಲಿ ಸತತ ಮೂರು ವರ್ಷದಿಂದ ಸುರಿಯುತ್ತಿರುವ ಮಾಹಾ ಮಳೆಗೆ ನಲುಗಿದ್ದು, ಪ್ರಸ್ತಕ ಸಾಲಿನಲ್ಲಿ ಜಿಲ್ಲಾಡಳಿತದ ಅಂದಾಜಿನಂತೆ 489 ಕೋಟಿ ರೂ. ನಷ್ಟ ಉಂಟಾಗಿದೆ. ಈಗಾಗಲೇ ಅಂದಾಜಿನ ಪಟ್ಟಿಯನ್ನು ಕೊಡಗು ಜಿಲ್ಲಾಡಳಿತ ಸರ್ಕಾರಕ್ಕೆ ಕಳುಹಿಸಿದೆ.
Advertisement
ಕೊಡಗು ಜಿಲ್ಲೆಯಲ್ಲಿ ಅಗಸ್ಟ್ ತಿಂಗಳ ಬಂದರೆ ಇಲ್ಲಿಯ ಜನಗಳಿಗೆ ಅತಂಕ ಮನೆ ಮಾಡುತ್ತದೆ. ಅಲ್ಲದೇ ಈ ಬಾರಿಯೂ ಮಹಾಮಳೆಗೆ ಕೊಡಗಿನ ಗಜಗಿರಿ ಬೆಟ್ಟ ಕುಸಿದ ಪರಿಣಾಮ ಐವರು ಕಣ್ಮರೆಯಾಗಿದ್ದು, ಇಬ್ಬರ ಮೃತದೇಹವೇ ಸಿಗಲಿಲ್ಲ. ಗರಿಷ್ಠ ಪ್ರಯತ್ನದ ನಂತರ ಕಾರ್ಯಾಚರಣೆ ಕೈ ಬಿಡಲಾಗಿದೆ. ಐದು ಪ್ರಾಣ ಹಾನಿಯನ್ನು ಹೊರತುಪಡಿಸಿದಂತೆ ಜಿಲ್ಲೆಯಲ್ಲಿ ಕೋಟ್ಯಂತರ ರೂ. ನಷ್ಟ ಸಂಭವಿಸಿದ್ದು, ಜಿಲ್ಲಾಡಳಿತದಿಂದ ಈಗಾಗಲೇ ಸರ್ಕಾರಕ್ಕೆ ಈ ಬಗ್ಗೆ ಮಾಹಿತಿ ಸಲ್ಲಿಸಿದೆ. ಮಹಾ ಮಳೆಯಿಂದ 5 ಮಂದಿ ಪ್ರಾಣ ಕಳೆದುಕೊಂಡರೆ, 16 ಜಾನುವಾರು ಮೃತಪಟ್ಟಿವೆ. ಕೃಷಿ ಬೆಳೆ ಹಾನಿ ವಿಸ್ತೀರ್ಣ 3,400 ಹೆಕ್ಟೇರ್ ಆಗಿದ್ದು, ತೋಟಗಾರಿಕೆ ಬೆಳೆ ಹಾನಿ ವಿಸ್ತೀರ್ಣ 2,970 ಹೆಕ್ಟೇರ್, ಕಾಫಿ ಬೆಳೆ ಹಾನಿ 28,000 ಹೆಕ್ಟೇರ್. ಒಟ್ಟು 34,170 ಹೆಕ್ಟೇರ್ ನಷ್ಟು ನಷ್ಟ ಸಂಭವಿಸಿದೆ.
Advertisement
Advertisement
ಮಹಾಮಳೆಯಿಂದ ಮೂರು ತಾಲೂಕಿನಲ್ಲಿ ಮನೆಗಳು ಕೂಡ ಕುಸಿದಿದ್ದು, ಮಡಿಕೇರಿಯಲ್ಲಿ 75, ಸೋಮವಾರಪೇಟೆಯಲ್ಲಿ 155, ವಿರಾಜಪೇಟೆಯಲ್ಲಿ 112, ಒಟ್ಟು 342 ಮನೆಗಳಿಗೆ ಹಾನಿಯಾಗಿದೆ. ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದಂತೆ ಮಡಿಕೇರಿ ತಾಲೂಕಿನಲ್ಲಿ 3,733 ಲಕ್ಷ ರೂ, ಸೋಮವಾರಪೇಟೆಯಲ್ಲಿ 2,580 ಲಕ್ಷ ರೂ, ವಿರಾಜಪೇಟೆ ತಾಲೂಕಿನಲ್ಲಿ1,411 ಲಕ್ಷ ರೂ. ಸೇರಿ ಒಟ್ಟು 7,724 ಲಕ್ಷ ರೂ. ನಷ್ಟು ಹಾನಿಯಾಗಿದೆ.
Advertisement
ಗಾಳಿ, ಮಳೆಗೆ ಅಪಾರ ಪ್ರಮಾಣದಲ್ಲಿ ಮರಗಳು ಉರುಳಿದ ಪರಿಣಾಮ ವಿದ್ಯುತ್ ಕಂಬಗಳು, ಲೈನ್‍ಗಳು ನೆಲಕಚ್ಚಿದ್ದು, ಮಡಿಕೇರಿ ತಾಲೂಕಿನಲ್ಲಿ 88.83 ಲಕ್ಷ ರೂ. ಸೋಮವಾರಪೇಟೆ ತಾಲೂಕಿನಲ್ಲಿ 89.91 ಲಕ್ಷ ರೂ, ವಿರಾಜಪೇಟೆ ತಾಲೂಕಿನಲ್ಲಿ 304.81 ಲಕ್ಷ ರೂ. ನಷ್ಟು ಹಾನಿಯಾಗಿದೆ. ನಗರಸಭೆ ವ್ಯಾಪ್ತಿಯಲಿ 473 ಲಕ್ಷ ರೂ, ಕುಶಾಲನಗರ ಪ.ಪಂ. ವ್ಯಾಪ್ತಿಯಲ್ಲಿ 308 ಲಕ್ಷ ರೂ. ನಷ್ಟು ಹಾನಿಯಾಗಿದೆ. ಸೋಮವಾರಪೇಟೆ ಪ.ಪಂ. ವ್ಯಾಪ್ತಿಯಲ್ಲಿ 156 ಲಕ್ಷ ರೂ., ವಿರಾಜಪೇಟೆ ಪ.ಪಂ. ವ್ಯಾಪ್ತಿಯಲ್ಲಿ 640.40 ಲಕ್ಷ ರೂ. ನಷ್ಟು ಹಾನಿಯಾಗಿದೆ.