Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ- ಹುತ್ತರಿ ಆಚರಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | States | Karnataka | ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ- ಹುತ್ತರಿ ಆಚರಣೆ

Karnataka

ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ- ಹುತ್ತರಿ ಆಚರಣೆ

Public TV
Last updated: November 30, 2020 8:10 pm
Public TV
Share
1 Min Read
mdk huttari festival
SHARE

ಮಡಿಕೇರಿ: ಕೊಡಗಿನೆಲ್ಲೆಡೆ ಸುಗ್ಗಿಯ ಸಂಭ್ರಮ ಮನೆ ಮಾಡಿದ್ದು, ಹೊಲಗದ್ದೆಗಳೆಲ್ಲ ಪೈರು, ತೆನೆಗಳಿಂದ ತೂಗುತ್ತಿವೆ. ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳು ಸಡಗರದ ಸುಗ್ಗಿ ಹಬ್ಬವಾಗಿರುವ ಹುತ್ತರಿಯನ್ನು ಸಂಭ್ರಮ ಮತ್ತು ಭಕ್ತಿ ಭಾವದಿಂದ ಆಚರಿಸಲಾಗುತ್ತಿದೆ.

mdk huttari fest 2

ಕೊಡಗು ವಿಶೇಷ ಸಂಸ್ಕೃತಿ ಆಚರಣೆಗಳಿಗೆ ಪ್ರಸಿದ್ಧ. ಕೊಡಗಿನ ಸುಗ್ಗಿ ಹಬ್ಬವಾದ ಹುತ್ತರಿಯಂದು ಧಾನ್ಯ ದೇವತೆಯನ್ನು ಮನೆ ತುಂಬಿಸಿಕೊಳ್ಳಲಾಗುತ್ತದೆ. ರೈತರು ತಾವು ಬೆಳೆದ ದವಸ ಧಾನ್ಯಗಳನ್ನು ಒಕ್ಕಣೆ ಮಾಡಿ ಮನೆಗೆ ತರುವುದಕ್ಕೂ ಮುನ್ನ ಸಂಪ್ರದಾಯ ಬದ್ಧವಾಗಿ ಧಾನ್ಯ ಲಕ್ಷ್ಮಿಗೆ ಪೂಜೆ ಸಲ್ಲಿಸಿದರು. ಈ ಮೂಲಕ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡು ಹುತ್ತರಿ ಆಚರಿಸಲಾಯಿತು.

mdk huttari fest 3

ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಚಿಕ್ಕಬೆಟಗೇರಿಯ ನಾಚಪ್ಪ ಅವರ ನೇತೃತ್ವದಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್‍ನಿಂದ ಸುಗ್ಗಿ ಆಚರಿಸಲಾಯಿತು. ಐದು ಬಗೆಯ ಪತ್ರೆಗಳನ್ನಿಟ್ಟು ಕೊಡಗಿನ ಕುಲದೇವರಾದ ಇಗ್ಗುತ್ತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ನೆರೆ ಕಟ್ಟಿದರು. ಬಳಿಕ ಬೆಳೆಯಿಂದ ತುಂಬಿದ್ದ ಹೊಲಗದ್ದೆಗಳಿಗೆ ಮಂಗಳವಾದ್ಯಗಳಾದ ದುಡಿಕೊಟ್ಟುಪಾಟ್ ಮೂಲಕ ತೆರೆಳಿ ಧಾನ್ಯಲಕ್ಷ್ಮಿಗೆ ಪೂಜೆ ಸಲ್ಲಿಸಿದರು.

mdk huttari fest 7

ವೀರತ್ವದ ಸಂಕೇತವಾಗಿ ಗಾಳಿಯಲ್ಲಿ ಗುಂಡು ಹಾರಿಸಿ ಧಾನ್ಯಲಕ್ಷ್ಮಿಗೆ ಗೌರವ ಸಲ್ಲಿಸಿದರು. ಬಳಿಕ ಕದಿರು ಕೊಯ್ದು ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಒಕ್ಕಣೆ ಕಣಕ್ಕೆ ಕದಿರು ತರಲಾಯಿತು. ಹೀಗೆ ತಂದ ಕದಿರನ್ನು ಕಣದಲ್ಲಿಟ್ಟು ಪೂಜೆ ಸಲ್ಲಿಸಿ ಕೊಡವರ ಸಾಂಪ್ರದಾಯಿಕ ನೃತ್ಯಗಳಾದ ದುಡಿಕೊಟ್ಟು ಪಾಟ್, ಕೋಲಾಟ್ ಮತ್ತು ಪರಿಯಕಳಿ ನೃತ್ಯಗಳನ್ನು ಮಾಡಿ ಸಂಭ್ರಮಿಸಿದರು.

mdk huttari fest 6

ನಂತರ ಕದಿರನ್ನು ಮನೆಗೆ ಕೊಂಡೊಯ್ದು ಸ್ವಾಮಿ ಇಗ್ಗುತಪ್ಪ ಮತ್ತು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ, ಧಾನ್ಯಲಕ್ಷ್ಮಿಯನ್ನು ಮನೆಗೆ ತುಂಬಿಕೊಂಡರು. ಕೊಡವರಿಗೆ ಅಷ್ಟೇ ಅಲ್ಲದೆ ಕೊಡಗಿನ ಎಲ್ಲ ಸಮುದಾಯಗಳು ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಸಿಕೊಳ್ಳಲು ಇರುವ ವಿಶೇಷ ಹಬ್ಬ ಹುತ್ತರಿ. ಕೊಡವರು ಮತ್ತು ಅರೆಗೌಡ ಸಮುದಾಯಗಳಿಗೆ ತುಂಬಾ ವಿಶೇಷ. ಈ ಹಬ್ಬದ ಮೂಲಕ ಇಲ್ಲಿನ ಸಾಂಸ್ಕøತಿಕ ಪರಂಪರೆಯನ್ನು ದೇಶಕ್ಕೆ ತೋರಿಸುವುದೂ ಹೌದು. ಜೊತೆಗೆ ಈ ವಿಶೇಷ ಆಚರಣೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವುದು ಅಗತ್ಯವಾಗಿರುವ ಹಿನ್ನೆಲ್ಲೆಯಲ್ಲಿ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ.

mdk huttari fest 4

TAGGED:cerealcrophuttari festivalKodaguPublic TVworshipಕೊಡಗುಧಾನ್ಯಪಬ್ಲಿಕ್ ಟಿವಿಪೂಜೆಬೆಳೆಹುತ್ತರಿ ಹಬ್ಬ
Share This Article
Facebook Whatsapp Whatsapp Telegram

Cinema news

Rachita Ram
ಸೀರೆಯಲ್ಲಿ ಬೊಂಬೆಯಂತೆ ಮಿಂಚಿದ ರಚ್ಚು!
Cinema Latest Sandalwood South cinema Top Stories
Sholay The Final Cut
ಶೋಲೆಗೆ 50ರ ಸಂಭ್ರಮ – ಪ್ರೇಕ್ಷಕರ ಮುಂದೆ 4Kಯಲ್ಲಿ ಬರಲಿದೆ ರಿಯಲ್‌ ಕ್ಲೈಮ್ಯಾಕ್ಸ್‌!
Bollywood Cinema Latest Top Stories
shah rukh khan kajol statue
ಲಂಡನ್‌ನಲ್ಲಿ ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಶಾರುಖ್-ಕಾಜಲ್
Bollywood Cinema Latest Top Stories
Rashmika mandanna
IMDB ಟಾಪ್-10 ಲಿಸ್ಟ್‌ನಲ್ಲಿ ಕನ್ನಡದ ʻRRRʼ ತಾರೆಯರಿಗೆ ಸ್ಥಾನ
Cinema Latest Sandalwood Top Stories

You Might Also Like

doctor and son commit suicide in shivamogga
Crime

ಶಿವಮೊಗ್ಗ | ಕೋಟಿ ಕೋಟಿ ಇದ್ರೂ ಇಲ್ಲದ ನೆಮ್ಮದಿ – ಖ್ಯಾತ ವೈದ್ಯೆ, ಮಗ ಆತ್ಮಹತ್ಯೆ

Public TV
By Public TV
41 minutes ago
DK Suresh 2
Latest

ಡಿಕೆ ಬ್ರದರ್ಸ್‌ಗೆ ದೆಹಲಿ ಪೊಲೀಸರಿಂದ ನೋಟಿಸ್‌

Public TV
By Public TV
46 minutes ago
Smriti Mandhana
Cricket

ಮದುವೆ ಮುಂದೂಡಿಕೆ ಬಳಿಕ ಸ್ಮೃತಿ ಮಂಧಾನ ಮೊದಲ ಪೋಸ್ಟ್‌ – ಎಂಗೇಜ್‌ಮೆಂಟ್‌ ರಿಂಗ್‌ ಎಲ್ಲಿ ಅಂದ್ರು ಫ್ಯಾನ್ಸ್‌

Public TV
By Public TV
1 hour ago
Flower Girl
Latest

ಪ್ರೀತಿಯೊಂದು ಹೂವಿನ ಹಾಗೇ… ಬಾಡೋ ಮಾತಿಲ್ಲ!

Public TV
By Public TV
1 hour ago
HT Manju
Bengaluru City

KSDL ನಲ್ಲಿ 1,000 ಕೋಟಿ ಅವ್ಯವಹಾರ ನಡೆದಿದೆ – ಜೆಡಿಎಸ್‌ ಶಾಸಕ ಹೆಚ್.ಟಿ ಮಂಜು ಬಾಂಬ್‌

Public TV
By Public TV
2 hours ago
Huttari Festival 7
Districts

ಮೈನಡುಗಿಸುವ ಚಳಿಯಲ್ಲೂ ಬೆಚ್ಚನೆಯ ಸಂಭ್ರಮ – ʻಹುತ್ತರಿʼ ಹಬ್ಬದ ಸಡಗರ; ಕೊಡಗಿನ ವಿವಿಧೆಡೆ ಜನಪದ ಲೋಕ ಸೃಷ್ಟಿ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?