ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕೊರೊನಾ ಅನ್ನೋ ಡೆಡ್ಲಿ ವೈರಸ್‍ನ ಗಾಳಿ ಕ್ಷಣ ಕ್ಷಣಕ್ಕೂ ವೇಗದಲ್ಲಿ ಹರಡುತ್ತಿದೆ. ಅದರಲ್ಲೂ ಸೋಂಕಿತ ಪ್ರಾಥಮಿಕ ಸಂಪರ್ಕದಿಂದಲೇ ವೈರಸ್ ಇಷ್ಟು ವೇಗದಲ್ಲಿ ಹರಡುತ್ತಿರುವುದು ಜಿಲ್ಲೆಯಲ್ಲಿ ಹರಡುತ್ತಿರುವುದು ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ.
ಬೆಳ್ಳಂಬೆಳಗ್ಗೆ 12 ಕೊವಿಡ್ ಹೊಸ ಪ್ರಕರಣಗಳು ದಾಖಲಾಗಿ ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿತ್ತು. ಮಧ್ಯಾಹ್ನದ ಬಳಿಕ ಮತ್ತೆ 13 ಜನರಿಗೆ ಕೊವಿಡ್ ಸೋಂಕು ಇರುವುದು ಪತ್ತೆಯಾಗಿತ್ತು. ಇದೀಗ ಮತ್ತೆ ಸಂಜೆ ವೇಳೆಗೆ ಜಿಲ್ಲೆಯಲ್ಲಿ 8 ಹೊಸ ಪ್ರಕರಣಗಳು ದಾಖಲಾಗಿವೆ.
Advertisement
Advertisement
ಅದರಲ್ಲೂ ಸೋಂಕಿತರ ಪ್ರಾಥಮಿಕ ಸಂಪರ್ಕ ಮತ್ತು ಐಎಲ್‍ಐ ನಿಂದ ಬಳಲುತ್ತಿರುವವರಿಗೆ ಕೊರೊನಾ ಮಹಾಮಾರಿ ಹೆಚ್ಚುತ್ತಿರುವುದು ಜಿಲ್ಲೆಯ ಜನತೆಯನ್ನು ದಂಗು ಬಡಿಸುತ್ತಿದೆ. ಒಟ್ಟಿನಲ್ಲಿ ಒಂದೇ ದಿನ 33 ಜನರಿಗೆ ಮಹಾಮಾರಿ ಹೆಗಲೇರುವ ಮೂಲಕ ಬರೋಬ್ಬರಿ 217 ಜನರಿಗೆ ಸುತ್ತಿಕೊಂಡು ಜಿಲ್ಲೆಯ ಜನರನ್ನು ಆತಂಕಕ್ಕೆ ದೂಡಿದೆ.
Advertisement
ಒಟ್ಟಿನಲ್ಲಿ ಈ 217 ಸೋಂಕಿತರ ಪೈಕಿ 87 ಜನರು ಚಿಕಿತ್ಸೆ ಪಡೆದು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಮಹಾಮಾರಿ ವ್ಯಾಪಕವಾಗಿ ಹರಡಿರುವುದರಿಂದ 95 ಪ್ರದೇಶಗಳನ್ನು ಕಂಟೈನ್ಮೆಂಟ್ ಪ್ರದೇಶಗಳನ್ನಾಗಿ ಮಾಡಲಾಗಿದೆ. ಅಲ್ಲದೆ ಡೆಡ್ಲಿ ವೈರಸ್ ಜಿಲ್ಲೆಯಲ್ಲಿ ಇದುವರೆಗೆ 3 ಜನರ ಉಸಿರು ನಿಲ್ಲಿಸಿದೆ.