ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ದಿನ ಕಳೆದಂತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದೆ. ಇದರಿಂದಾಗಿ ನಗರದ ಬಹುತೇಕ ಜನರು ಮನೆಯಿಂದ ಹೊರಗೆ ಬರುವುದಕ್ಕೂ ಭಯ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೇ ಇಂದು ಕೊಡಗಿನಲ್ಲಿ ಬರೋಬ್ಬರಿ 99 ಕೋವಿಡ್ ಪ್ರಕರಣಗಳು ದಾಖಲಾಗಿದೆ.
Advertisement
ಹೀಗಾಗಿ ಕಳೆದ ಒಂದು ವಾರದಿಂದ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜನರೆ ಸ್ವಯಂ ಪ್ರೇರಿತವಾಗಿ ಸೇಲ್ಫ್ ಲಾಕ್ ಡೌನ್ ಮಾಡಿಕೊಳ್ಳುತ್ತಾ ಇದ್ದಾರೆ. ಹೀಗಾಗಿ ಕೊಡಗಿನಲ್ಲಿ ಬೆರಳೆಣಿಕೆಯಷ್ಟು ಇರುವ ಚಿತ್ರಮಂದಿರಗಳಿಗೆ ಒಂದು ವಾರದಿಂದ ಪ್ರೇಕ್ಷಕರು ಸುಳಿಯುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊಡಗಿನ ಚಿತ್ರಮಂದಿರಗಳಿಗೆ ಕೋವಿಡ್ ಎಫೆಕ್ಟ್ ತಟ್ಟಿದೆ.
Advertisement
Advertisement
ಕೋವಿಡ್‍ಗೆ ಹೆದರಿ ಇದೀಗ ಪ್ರೇಕ್ಷಕರು ಥಿಯೇಟರ್‌ಗಳತ್ತ ಮುಖ ಮಾಡುತ್ತಿಲ್ಲ. ಈಗಾಗಲೇ ಮಂಜಿನ ನಗರಿ ಮಡಿಕೇರಿಯಲ್ಲಿದ್ದ ಒಂದೇ ಒಂದು ಕಾವೇರಿ ಮಹಲ್ ಥಿಯೇಟರ್ ಮುಚ್ಚಿ ಹೋಗಿದೆ. ಅದು ಕೂಡ ಕಳೆದ ಕೋವಿಡ್ ಬಂದ ನಂತರ ಮೊದಲ ಲಾಕ್ ಡೌನ್ ಬಳಿಕ ಪ್ರೇಕ್ಷಕರ ಕೊರತೆ ಎದುರಿಸುತ್ತಿದ್ದ ಕಾವೇರಿ ಮಹಲ್ ಚಿತ್ರಮಂದಿರ ಬಳಿಕ ಅರಂಭವಾಗದೆ ಸಂಪೂರ್ಣವಾಗಿ ಮುಚ್ಚಿಹೋಗಿದೆ.
Advertisement
ಇದೀಗ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದ ಗಣೇಶ್ ಥಿಯೇಟರ್‌ಗೆ ಪ್ರೇಕ್ಷಕರೇ ಇಲ್ಲದೇ ಕಳೆದ ಒಂದು ವಾರದಿಂದ ಒಬ್ಬರೇ ಒಬ್ಬರು ಪ್ರೇಕ್ಷಕರಿಲ್ಲದೆ, ಥಿಯೇಟರ್ ಸಂಪೂರ್ಣವಾಗಿ ಬಂದ್ ಆಗಿದೆ. ವಾರದ ಹಿಂದಿನವರೆಗೆ ಕೇವಲ 25 ರಿಂದ 30 ಪ್ರೇಕ್ಷಕರಿಗೆ ಚಿತ್ರ ಪ್ರದರ್ಶನ ಕಾಣುತ್ತಿತ್ತು.
ಅದರೆ ಇದೀಗ ಕೋವಿಡ್ ಹೆಚ್ಚಿದ್ದರಿಂದ ಥಿಯೇಟರ್ ನತ್ತ ಪ್ರೇಕ್ಷಕರು ಸುಳಿಯುತ್ತಿಲ್ಲ. ಇನ್ನೂ ಕುಶಾಲನಗರದ ಥಿಯೇಟರ್‍ನಲ್ಲೂ ದಿನಕ್ಕೆ ಒಂದು ಶೋ ಮಾತ್ರ ನಡೆಯುತ್ತಿದೆ. ಥಿಯೇಟರ್ ನಡೆಸುತ್ತಿರುವ ಮಾಲೀಕರಿಗೆ ಹಾಗೂ ಸಿಬ್ಬಂದಿಗೆ ಸಂಕಷ್ಟ ಎದುರಾಗಿದೆ.