ಮಡಿಕೇರಿ: ಕೊರೊನಾ ಮಹಾಮಾರಿಯಿಂದ ಎಷ್ಟೋ ಕುಟುಂಬಗಳು ದುಡಿಮೆಯೂ ಇಲ್ಲದೆ ಕಷ್ಟದಲ್ಲೇ ಜೀವನ ಸಾಗಿಸುತ್ತಿವೆ. ಅಂತಹವರಿಗೆ ಸರ್ಕಾರ, ಸರ್ಕಾರೇತರ ಸಂಸ್ಥೆಗಳು ಸಹಾಯವನ್ನು ಮಾಡುತ್ತಿವೆ. ಆದರೆ ಕೊರೊನಾ ವಾರ್ಡ್‍ಗಳಲ್ಲೇ ಕೆಲಸ ಮಾಡುತ್ತಿರುವವರಿಗೆ ಪ್ರತ್ಯೇಕ ವಸತಿ ಸೌಲಭ್ಯವಿಲ್ಲದೆ ಮನೆಯವರೊಂದಿಗೆ ಆತಂಕದಿಂದಲೇ ಇರಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ನಾವೇ ನಮ್ಮ ಮನೆಗಳಿಗೆ ಕೊರೊನಾ ಮಹಾಮಾರಿಯನ್ನು ತಂದುಬಿಡ್ತೇವಾ ಎಂಬ ಆಂತಕ ಕೊರೊನಾ ವಾರಿಯರ್ಸ್‍ಗೆ ಕಾಡುತ್ತಿದೆ.
ಕೊರೊನಾ ರೋಗದ ವಿರುದ್ಧವೇ ಹೋರಾಡುತ್ತಾ, ರೋಗಿಗಳಿಗೆ ಶ್ರುಶೂಷೆ ಮಾಡುತ್ತಿರುವವರ ಧೈರ್ಯ, ಸ್ಥೈರ್ಯವನ್ನು ಮೆಚ್ಚುಗೆ ವ್ಯಕ್ತವಾಗಿದೆ. ಆದರೆ ಕೊರೊನಾ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿರುವವರನ್ನು ತಮ್ಮ ಕರ್ತವ್ಯ ಮುಗಿಸಿ ಮನೆಗೆ ಹೋಗಬೇಕಾಗಿದೆ.
Advertisement
Advertisement
ಈ ಕುರಿತು ಮಾಧ್ಯಮಗಳೊಂದಿಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿರುವ ವಾರಿಯರ್ಸ್, ಕೊರೊನಾ ವಾರ್ಡ್‍ಗಳಲ್ಲಿ ಕೆಲಸ ಮಾಡುವವರಿಗೆ ಪಿಪಿಇ ಕಿಟ್ ಸೇರಿದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿರುತ್ತೇವೆ. ಆದರೆ ಮನೆಯಲ್ಲಿ ವಯಸ್ಸಾದ ತಮ್ಮ ತಂದೆ, ತಾಯಿಗಳು, ಪುಟಾಣಿ ಮಕ್ಕಳು ಇರುತ್ತಾರೆ. ಹೀಗಾಗಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿ ಮನೆಗೆ ಹೋಗುವುದಾದರೆ ಬೀದಿಯಲ್ಲಿರುವ ಮಹಾಮಾರಿಯನ್ನು ನಾವೇ ಮನೆಗೆ ಕರೆದುಕೊಂಡು ಹೋದಂತೆ ಆಗುತ್ತದೆ.
Advertisement
ಒಂದೊಮ್ಮೆ ಹಾಗೇನಾದರೂ ಆದರೆ ನಮ್ಮ ಸ್ಥಿತಿ ಏನು? ಬಿಪಿ, ಶುಗರ್ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವವರು ಮನೆಯಲ್ಲಿದ್ದಾರೆ. ಇದರಿಂದ ಗಂಭೀರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಕೊರೊನಾ ವಾರ್ಡ್‍ಗಳಲ್ಲಿ ಕೆಲಸ ಮಾಡುತ್ತಿರುವ ನಾನ ಕ್ಲಿನಿಕ್ ಸಿಬ್ಬಂದಿಗಳ ಮತ್ತು ಪೋಷಕರ ಆತಂಕವಾಗಿದೆ.
Advertisement
ಅಧಿಕಾರಗಳ ಗಮನಕ್ಕೆ ತಂದ ಪಬ್ಲಿಕ್: ಕೋವಿಡ್ ವಾರ್ಡ್‍ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್‍ಗಳ ಈ ಸಮಸ್ಯೆಯನ್ನು ಪಬ್ಲಿಕ್ ಟಿವಿ ಅಧಿಕಾರಿಗಳ ಗಮನಕ್ಕೆ ತಂದಿತ್ತು. ಕೂಡಲೇ ಈ ಕುರಿತು ಎಚ್ಚೆತ್ತ ಮೆಡಿಕಲ್ ಕಾಲೇಜಿನ ಅಧಿಕಾರಿಗಳು, ಕೋವಿಡ್ ವಾರ್ಡ್‍ಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಜಿಲ್ಲಾಡಳಿತದಿಂದಲೇ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಬಯಸಿದರೆ ಹಾಸ್ಟೆಲ್ ಅಥವಾ ಕ್ವಾಟ್ರಸ್‍ಗಳಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗುವುದು. ಅಲ್ಲಿಯೇ ಊಟದ ವ್ಯವಸ್ಥೆಯನ್ನು ಮಾಡಲಾಗುವುದು. ಅಗತ್ಯವಿರುವವರು ತನ್ನ ಹೆಸರನ್ನು ನೊಂದಾಯಿಸಿಕೊಂಡರೆ ಪ್ರತ್ಯೇಕ ವಸತಿ ಸಮೀಕ್ಷೆ ಮಾಡಲಾಗುವುದು ಎಂದು ಸೂಪರಿಡೆಂಟ್ ಆಫ್ ಮೆಡಿಕಲ್ ಸ್ಟ್ಯಾಫ್ ಲೋಕೇಶ್ ಅವರು ಸಮಸ್ಯೆ ಬಗ್ಗೆ ಹರಿಸುತ್ತೇವೆ ಎಂದಿದ್ದಾರೆ.