ಮಡಿಕೇರಿ: ಕೊಡಗಿನಲ್ಲಿ ಕೊರೊನಾ ಮಹಾಮಾರಿ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹೊರಡುತ್ತಿದ್ದು, ಇಂದು ನಾಲ್ಕನೆ ಬಲಿ ಪಡೆದಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ತೊರೆನೂರಿನ 90 ವರ್ಷದ ವೃದ್ಧೆ ಕೊರೊನಾದಿಂದ ಮೃತರಾಗಿದ್ದಾರೆ. ತೊರೆನೂರಿನಲ್ಲಿ ಮೊನ್ನೆಯಷ್ಟೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ಹೀಗಾಗಿ ತೊರೆನೂರು ಗ್ರಾಮದ ಏರಿಯಾವನ್ನು ಸೀಲ್ಡೌನ್ ಮಾಡಲಾಗಿತ್ತು. ಸೀಲ್ಡೌನ್ ಮಾಡಿದ್ದ ಏರಿಯಾದಲ್ಲಿನ ವೃದ್ಧೆ ಇದೀಗ ಮೃತಪಟ್ಟಿದ್ದಾರೆ. ಸೀಲ್ಡೌನ್ ಆಗಿರುವ ಏರಿಯಾದಲ್ಲಿ ವೃದ್ಧೆ ಮೃತಪಟ್ಟಿದ್ದರಿಂದ ತಕ್ಷಣ ವೈದ್ಯರ ತಂಡ ಆರ್ಎಟಿ ಟೆಸ್ಟ್ ನಡೆಸಿದೆ. ಈ ವೇಳೆ ಮೃತ ವೃದ್ಧೆಗೆ ಕೊರೊನಾ ಇರುವುದು ದೃಢಪಟ್ಟಿದೆ.
Advertisement
Advertisement
ಬಳಿಕ ಎಚ್ಚೆತ್ತುಕೊಂಡ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ತಕ್ಷಣವೇ ಸರ್ಕಾರದ ಮಾರ್ಗ ಸೂಚಿ ಅನ್ವಯ ಅಂತ್ಯ ಸಂಸ್ಕಾರ ನೆರವೇರಿಸಿದೆ. ಕೊಡಗಿನಲ್ಲಿ ಮಿತಿಮೀರುತ್ತಿರುವ ಕೊರೊನಾ ಮಹಾಮಾರಿ ಇಂದು ನಾಲ್ಕನೇ ಬಲಿ ಪಡೆದಿದೆ. ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದ್ದು, ಎಚ್ಚರಿ ವಹಿಸಲಾಗುತ್ತಿದೆ.