ಮಡಿಕೇರಿ: ಕಳೆದ ಒಂದು ವಾರದಿಂದ ದಿನಕ್ಕೆ ಎರಡು, ಮೂರು ಕೊರೊನಾ ಪ್ರಕರಣ ದಾಖಲಾಗುತ್ತಿದ್ದ ಕೊಡಗಿನಲ್ಲಿ ಇಂದು ಒಂದೇ ದಿನ 13 ಪ್ರಕರಣಗಳು ದಾಖಲಾಗುವ ಮೂಲಕ ಜಿಲ್ಲೆಗೆ ಅಘಾತ ನೀಡಿದೆ. ಕಳೆದ ವಾರದಲ್ಲಿ ವಿದೇಶದಿಂದ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕಿನ ನೆಲ್ಯಹುದಿಕೇರಿಗೆ ಬಂದಿದ್ದ 35 ವರ್ಷದ ವ್ಯಕ್ತಿಗೆ ಕೊರೊನಾ ಪಾಸಿಟಿವ್ ಬಂದಿತ್ತು.
Advertisement
ವರದಿ ಬರುವಷ್ಟರಲ್ಲೇ ಆತನೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 3 ತಿಂಗಳ ಹಸುಳೆ, 6 ವರ್ಷದ ಮಗು ಜೊತೆಗೆ 56 ವರ್ಷ ವ್ಯಕ್ತಿ, 87 ವರ್ಷದ ವೃದ್ಧನಿಗೂ ಕೊರೊನಾ ಅಟ್ಯಾಕ್ ಮಾಡಿದೆ. ನೆಲ್ಯಹುದಿಕೇರಿಯ ಸೋಂಕಿತನೊಬ್ಬನಿಂದಲೇ ಇದುವರೆಗೆ ವಿರಾಜಪೇಟೆ ತಾಲೂಕಿನ ಹುಂಡಿ ಗ್ರಾಮದ 10 ಜನರಿಗೆ ಕೊರೊನಾ ಸೋಂಕು ತಗುಲಿದೆ. ಜೊತೆಗೆ ಶನಿವಾರಸಂತೆ ಸಮೀಪದ ಶಿರಂಗಾಲದ ಸೋಂಕಿತನಿಂದಲೂ ನಾಲ್ಕೈದು ಜನರಿಗೆ ಕೊರೊನಾ ಮಹಾಮಾರಿ ಆವರಿಸಿದೆ. ಅಷ್ಟೇ ಅಲ್ಲದೇ ಇಂದು ಸಂಜೆ ಮತ್ತೆ ಎರಡು ಪ್ರಕರಣ ಹೊಸದಾಗಿ ದಾಖಲು ಅಗಿದೆ.
Advertisement
Advertisement
ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ಹೋಬಳಿ ಶಿರಂಗಾಲ ಗ್ರಾಮದ 47 ವರ್ಷದ ಪುರುಷ ಹಾಗೂ ಅದೇ ಗ್ರಾಮದ 37 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಒಟ್ಟಿನಲ್ಲಿ ನಿನ್ನೆ ರಾತ್ರಿಯಿಂದ ಬುಧವಾರ ಸಂಜೆಯವರೆಗೆ ಕೊಡಗು ಜಿಲ್ಲೆಯಲ್ಲಿ 13 ಪಾಸಿಟಿವ್ ಪ್ರಕರಣಗಳು ಆಗುವ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 60ಕ್ಕೆ ಏರಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಏರಿಯಾಗಳ ಸಂಖ್ಯೆ ಕೂಡ 24ಕ್ಕೆ ಏರಿಕೆಯಾಗಿದೆ.