ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆಯಿಂದ ಧಾರಾಕಾರ ಮಳೆಯಾಗುತ್ತಿದ್ದು, ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಜನ ಜೀವನ ಅಸ್ತವ್ಯಸ್ತವಾಗಿದೆ.
ಜಿಲ್ಲೆಯಲ್ಲಿ ನೆನ್ನೆ ರಾತ್ರಿಯಿಂದ ತುಂತುರು ಮಳೆಯಾಗುತ್ತಿತ್ತು. ಇಂದು ಬೆಳಗ್ಗೆ ಸ್ವಲ್ಪ ವೇಗ ಪಡೆದುಕೊಂಡ ಮಳೆ, ಮಧ್ಯಾಹ್ನದ ನಂತರ ವಿಪರೀತ ಜೋರಾಗಿದೆ. ಭಾಗಮಂಡಲ, ತಲಕಾವೇರಿ, ಬ್ರಹ್ಮಗಿರಿ ತಪ್ಪಲು, ನಾಪೋಕ್ಲು, ವಿರಾಜಪೇಟೆ ಹಾಗೂ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯ ಆರ್ಭಟ ತುಸು ಜೋರಾಗಿದೆ. ಕೊರೊನಾ ಮಧ್ಯೆ ಮಳೆ ಜೋರಾಗಿರುವುದು ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ.
Advertisement
Advertisement
ಜಿಲ್ಲೆಯ ಜೀವನದಿ ಕಾವೇರಿಯ ಒಳ ಹರಿವು ಹೆಚ್ಚಾಗಿದೆ. ಅಲ್ಲದೆ ಚಿಕ್ಕ, ಪುಟ್ಟ ಹೊಳೆ, ಝರಿ, ತೋಡುಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯಲ್ಲಿ ಒಂದೆಡೆ ಈಗಾಗಲೇ ಕೊರೊನಾ ಪ್ರಕರಣಗಳ ನಡುವೆ ಎಡಬಿಡದೆ ಸುರಿಯುತ್ತಿರುವ ಮಳೆ ಸ್ಥಳೀಯರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ. ಭಯದಲ್ಲೇ ಜನ ಬದುಕು ದೂಡುತ್ತಿದ್ದಾರೆ.