ಮಡಿಕೇರಿ: ಕಳೆದ ಮೂರುವರೆ ತಿಂಗಳಿನಿಂದ ಲಾಕ್‍ಡೌನ್‍ನಿಂದಾಗಿ ಕೊಡಗಿನ ಪ್ರವಾಸೋದ್ಯಮ ನೆಲಕಚ್ಚಿದ್ದು, ಇದೀಗ ಕೊಡಗು ಜಿಲ್ಲೆಯನ್ನು ರಾಜ್ಯ ಸರ್ಕಾರ ಅನ್‍ಲಾಕ್ ಮಾಡಿದೆ. ಹೀಗಾಗಿ ಕೊಡಗಿನ ಜಲತೊರೆಗಳನ್ನು ವೀಕ್ಷಿಸಲು ಹಾಗೂ ಇಲ್ಲಿನ ಪ್ರಕೃತಿ ಸೌಂದರ್ಯ ಅನುಭವಿಸಲು ಮತ್ತೆ ಕೊಡಗಿನತ್ತ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಹರಿದು ಬರುವ ಸಾಧ್ಯತೆ ಹೆಚ್ಚಾಗಿದೆ. ಇದರಿಂದಾಗಿ ಮತ್ತೆ ಜಿಲ್ಲೆಯಲ್ಲಿ ಕೊರೊನಾ ಸ್ಫೋಟವಾಗುತ್ತದೆ. ಹೀಗಾಗಿ ಜಿಲ್ಲೆಯ ಪ್ರವಾಸೋದ್ಯಮ ಬೇಕು, ಬೇಡ ಅನ್ನೋ ಚರ್ಚೆ ಆರಂಭವಾಗಿದೆ.
Advertisement
ಕೊಡಗು ಜಿಲ್ಲೆ ಅನ್‍ಲಾಕ್ ಅಗಿರುವುದರಿಂದ ರಾಜ್ಯ ಮತ್ತು ಅಂತರ್ ರಾಜ್ಯದ ಜನರು ಕೊಡಗಿನತ್ತ ಹೆಚ್ಚಿನ ಸಂಖ್ಯೆಯಲ್ಲಿ ಅಗಮಿಸಲು ತುದಿಗಾಲಿನಲ್ಲಿ ನಿಂತಿದ್ದಾರೆ. ಅದರೆ ಕೊಡಗಿನ ಜನರು ಕಳೆದ ಮೂರು ವರ್ಷಗಳಿಂದ ನಿರಂತರ ನೆರೆಹಾವಳಿ, ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿ ಸಂಕಷ್ಟದಲ್ಲಿದ್ದು, ಇದೀಗ ಕೊರೊನಾ ಸಾವು-ನೋವುಗಳು ಹಾಗೂ ಲಾಕ್‍ಡೌನ್‍ನಿಂದ ಜನರು ತತ್ತರಿಸಿದ್ದಾರೆ. ಅನೇಕ ಜನರು ತಮ್ಮವರನ್ನು ಕಳೆದುಕೊಂಡ ನೋವಿನಲ್ಲಿದ್ದು, ಇದೀಗ ಒಂದಷ್ಟು ಚೇತರಿಸಿಕೊಳ್ಳುತ್ತಿದ್ದಾರೆ, ಹೀಗಿರುವಾಗ ಮತ್ತೆ ಪ್ರವಾಸೋದ್ಯಮ ತೆರೆದುಕೊಂಡರೆ ಹೆಮ್ಮಾರಿ ಕೊರೊನಾ ಅಲೆ ಬಂದು ಅಪ್ಪಳಿಸಲಿದೆ ಎಂಬ ಭಯ ಆವರಿಸಿದೆ.
Advertisement
Advertisement
ಪ್ರವಾಸೋದ್ಯಮದಿಂದಲೇ ಪುಟ್ಟ ಜಿಲ್ಲೆ ಕೊಡಗು ಡೇಂಜರ್ ವಲಯಕ್ಕೆ ತಲುಪಿದ್ದು, ಇದೀಗ ಜಿಲ್ಲೆ ಒಂದಷ್ಟು ಚೇತರಿಸಿಕೊಂಡಿದೆ ಹೊರತು ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿಲ್ಲ. ಹಳ್ಳಿಹಳ್ಳಿಗಳಿಗೂ ವ್ಯಾಪಿಸಿರುವ ಕೊರೊನಾ ಸೋಂಕು ಅದೆಷ್ಟೋ ಮುಗ್ಧ ಜೀವಗಳನ್ನು ಬಲಿ ತೆಗೆದುಕೊಂಡಿದೆ. ಮತ್ತೆ ನಮ್ಮವರನ್ನು ಸಾವಿನ ದವಡೆಗೆ ತಳ್ಳಲು ನಾವು ಸಿದ್ಧರಿಲ್ಲ ಯಾವುದೇ ಕಾರಣಕ್ಕೂ ಮಳೆಗಾಲ ಮುಗಿಯುವವರೆಗೂ ಹೋಂಸ್ಟೇ, ರೆಸಾರ್ಟ್ ಸೇರಿದಂತೆ ಪ್ರವಾಸೋದ್ಯಮಗಳು ಸಂಪೂರ್ಣ ಬಂದ್ ಆಗಿಯೇ ಇರಬೇಕು ಎಂದು ಸಂಘ ಸಂಸ್ಥೆಯ ಪ್ರಮುಖರು ಹೇಳುತ್ತಿದ್ದಾರೆ. ಇದನ್ನೂ ಓದಿ: ಕೊಡಗಿನ ಎಸ್‍ಪಿ ಖಜಾನೆಯಿಂದ 16.96 ಲಕ್ಷ ಕಳ್ಳತನ- ಪೊಲೀಸರಿಂದಲೇ ದರೋಡೆ
Advertisement
ಪ್ರವಾಸೋದ್ಯಮವನ್ನೇ ಅವಲಂಬಿಸಿ ಬದುಕು ನಡೆಸುತ್ತಿರುವ ಕೊಡಗಿನ 70% ಜನರು ಕೊರೊನಾ ಕಾಲದಿಂದಲೂ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ರೆಸಾರ್ಟ್ ಹೋಂಸ್ಟೇಗಳಿಗೆ ಅಗಮಿಸುವ ಪ್ರವಾಸಿಗರಿಂದ ಕೊರೊನಾ ಸ್ಫೋಟ ಆಗುವುದಿಲ್ಲ. ಸರ್ಕಾರದ ಗೈಡ್‍ಲೈನ್ಸ್ ಬಿಡುಗಡೆ ಮಾಡಿದೆ ಅದನ್ನು ಪಾಲನೆ ಮಾಡಿ ಪ್ರವಾಸಿಗರಿಗೆ ಬರಲು ಹೇಳುತ್ತೇವೆ. ವ್ಯಾಕ್ಸಿನ್ ಹಾಗೂ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ರೆಸಾರ್ಟ್ ಹೋಂಸ್ಟೇ ಗಳಲ್ಲಿ ವಾಸ್ತವ್ಯ ಹೋಡಲು ಅನುಕೂಲ ಮಾಡಿಕೊಡುತ್ತೇವೆ. ಈಗಾಗಲೇ ಪ್ರವಾಸೋದ್ಯಮವನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದವರಿಗೆ ನೂರಾರು ಕೋಟಿ ನಷ್ಟ ಅಗಿದೆ. ಹೀಗಿರುವಾಗ ಪ್ರವಾಸೋದ್ಯಮ ಬೇಡ ಎಂದರೆ ಕಷ್ಟ. ಸರ್ಕಾರದ ರೂಲ್ಸ್ ಗಳನ್ನು ಪಾಲನೆ ಮಾಡುವವರಿಗೆ ಪ್ರವಾಸೋದ್ಯಮಕ್ಕೆ ಅನುವು ಮಾಡಿಕೊಡಿ ಎಂದು ರೆಸಾರ್ಟ್, ಹೋಟೆಲ್, ಹೋಂಸ್ಟೇ ಮಾಲೀಕರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ ಅನ್‍ಲಾಕ್ ಅಗಿರುವಾಗ ಪ್ರವಾಸೋದ್ಯಮ ಇಲ್ಲದೆ ಸಂಕಷ್ಟ ಅನುಭವಿಸುವ ಜನರು ಪ್ರವಾಸೋದ್ಯಮ ಬೇಕು ಎಂದರೆ. ಪ್ರವಾಸೋದ್ಯಮದಿಂದ ಕೊರೊನಾ ಸ್ಫೋಟವಾಗುತ್ತದೆ ಹಾಗಾಗಿ ಪ್ರವಾಸೋದ್ಯಮ ಕೆಲದಿನಗಳವರೆಗೆ ನಿಷೇಧ ಮುಂದುವರಿಸೋಣ ಎಂಬ ಅಭಿಪ್ರಾಯ ಕೇಳಿಬಂದಿದೆ.