ತುಮಕೂರು: ಇಂದು ಹೇಮಾವತಿ ನಾಲೆಯಿಂದ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಮದಲೂರು ಕೆರೆಗೆ ನೀರು ಹರಿದು ಬಂದಿದ್ದು, ಸಿಎಂ ಯಡಿಯೂರಪ್ಪ ಉಪಚುನಾವಣೆ ವೇಳೆ ಶಿರಾ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.
ಕಳೆದ ತಿಂಗಳು ನಡೆದ ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಮದಲೂರು ಕೆರೆಗೆ ನೀರನ್ನು ಹರಿಸುತ್ತೇವೆ ಎಂಬ ಪ್ರಮುಖ ಅಜೆಂಡಾವನ್ನು ಇಟ್ಟುಕೊಂಡಿತ್ತು. ಅದರಂತೆ ಇಂದು ಮದಲೂರು ಕೆರೆಗೆ ನೀರು ಬಂದು ತಲುಪಿದೆ. ನವೆಂಬರ್ 30ರಂದು ಕಳ್ಳಂಬೆಳ್ಳ ಕೆರೆಯಿಂದ ನೀರು ಬಿಡಲಾಗಿತ್ತು. ಸತತ 6 ದಿನಗಳ ಬಳಿಕ ಇಂದು ಸಂಜೆ 6 ಗಂಟೆ ಸುಮಾರಿಗೆ ಮದಲೂರು ಕೆರೆಗೆ ನೀರು ಹರಿದು ಬಂದಿದೆ.
250 ಕ್ಯುಸೆಕ್ ನೀರು ಹರಿಯುತಿದ್ದು ಒಂದು ತಿಂಗಳ ಬಳಿಕ ಮದಲೂರು ಕೆರೆ ಭರ್ತಿಯಾಗಲಿದೆ. ಶಿರಾ ತಾಲೂಕಿನ 40 ಹಳ್ಳಿಗಳಿಗೆ ಕುಡಿಯುವ ನೀರು ಈ ಕೆರೆಯಿಂದ ಒದಗಿಸಲಾಗುತ್ತದೆ. ಉಪಚುನಾವಣೆಯ ಪ್ರಚಾರದ ವೇಳೆ ಸಿಎಂ ಯಡಿಯೂರಪ್ಪ ಕೆರೆಗೆ ನೀರು ಹರಿಸುವ ವಾಗ್ದಾನ ಮಾಡಿದ್ದರು. ಅದರಂತೆ ನೀರು ಹರಿಸಿದ್ದಾರೆ.