ಕಾರವಾರ: ಮುಂಡ್ರೆ -ಪೆರ್ಣೆ ಮಾರ್ಗದಲ್ಲಿ ರೈಲ್ವೆ ಸುರಂಗ ಗೋಡೆ ಕುಸಿತ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮಾರ್ಗ ಸಂಚಾರ ಬಂದ್ ಮಾಡಲಾಗಿದೆ.
ಇಂದಿನಿಂದ ಮುಂದಿನ ಆದೇಶ ಬರುವವರೆಗೂ ಎರ್ನಾಕುಲಮ್ -ಹಜರತ್ ನಿಜಾಮುದ್ದೀನ್ ಸೂಪರ್ ಪಾಸ್ಟ್ ಟ್ರೈನ್ (ಮಡಗಾಂ, ಮೀರಜ್, ಪುಣೆ, ಪನ್ನವೇಲ್ ಮಾರ್ಗ) ತಿರುವಂತಪುರಂ ಲೋಕಮಾನ್ಯ ತಿಲಕ್ ಟ್ರೈನ್ (ಮಡಗಾಂ, ಲೋಂಡ, ನೀರಜ್, ಪುಣೆ, ಪನ್ನವೇಲ್ ಮಾರ್ಗ), ನ್ಯೂ ಡೆಲ್ಲಿ ತಿರುವನಂತಪುರಂ ಸೆಂಟ್ರಲ್ ರಾಜಧಾನಿ ಎಕ್ಸ್ ಪ್ರೆಸ್(ಪನ್ನವೇಲ್, ಪುಣೆ, ಮೀರಜ್ ,ಲೋಂಡ, ಮಡಗಾಂ ಮಾರ್ಗ), ಲೋಕಮಾನ್ಯ ತಿಲಕ್ ತಿರುವಂತಪುರಂ ಟ್ರೈನ್ (ಪನ್ನವೇಲ್, ಪುಣೆ, ಮೀರಜ್, ಲೋಂಡ, ಮಡಗಾಂ ಮಾರ್ಗ) ರೈಲುಗಳ ಸಂಚಾರವನ್ನು ಇಂದಿನಿಂದ ಮುಂದಿನ ಆದೇಶದವರೆಗೂ ಬಂದ್ ಮಾಡಲಾಗಿದೆ.
Advertisement
Advertisement
ಇನ್ನು ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ದೊಡ್ಡ ಪ್ರಮಾಣದಲ್ಲಿ ಮಳೆಯಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ 9ನೇ ತಾರೀಕಿನಿಂದ ಮತ್ತೆ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಕೋಸ್ಟಲ್ ಗಾರ್ಡ್, ಕೋಸ್ಟಲ್ ಪೊಲೀಸ್ ಕೂಡಾ ಸನ್ನದ್ಧರಾಗಿದ್ದು ಜಿಲ್ಲೆಯಾದ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ.
Advertisement
ಉತ್ತರ ಕನ್ನಡದಲ್ಲಿ ವರುಣನ ಅಬ್ಬರ-ನೀರಿನಲ್ಲಿ ಕೊಚ್ಚಿಹೋದ ಯುವಕ ಸಾವುhttps://t.co/S3oEe3RT1d#UttaraKannada #Rain
— PublicTV (@publictvnews) August 6, 2020