ಉಡುಪಿ: ಕಾಂಗ್ರೆಸ್ ಒಳಗಿನ ಮನಸ್ತಾಪ ಆಗಾಗ ಹೊರ ಬರುತ್ತಿದೆ. ಇದೀಗ ಹೊರಬಿದ್ದಿರುವ ಆಡಿಯೋ ಇಬ್ಬರು ನಾಯಕರ ನಡುವಿನ ಜಟಾಪಟಿಯನ್ನು ಬಯಲು ಮಾಡಿದೆ.
ಕಾಂಗ್ರೆಸ್ ನಾಯಕ, ಉಡುಪಿಯ ಮಾಜಿ ಶಾಸಕ ಯು.ಆರ್ ಸಭಾಪತಿ ಮತ್ತು ಪಕ್ಷದ ಕಾರ್ಯಕರ್ತನ ಆಡಿಯೋ ಸಂಭಾಷಣೆ ವೈರಲ್ ಆಗಿದೆ. ಏಕವಚನ ಮತ್ತು ಅವಾಚ್ಯ ಶಬ್ದಗಳಿಂದಲೇ ಆಡಿಯೋ ತುಂಬಿಕೊಂಡಿದ್ದು, ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷವನ್ನು ಸರ್ವನಾಶ ಮಾಡಿದ್ದಾನೆ. ನಗರಸಭೆ, ಜಿಲ್ಲಾಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಸೋಲಿಗೆ ಕಾರಣರಾಗಿದ್ದಾನೆ. ಅವರನ್ನು ಪಕ್ಷದಿಂದ ಒದ್ದು ಹೊರಗೆ ಹಾಕಿ ಎಂದು ಯು. ಆರ್ ಸಭಾಪತಿ ಕಾರ್ಯಕರ್ತನ ಬಳಿ ಹೇಳಿದ್ದಾರೆ.
Advertisement
Advertisement
ನನ್ನನ್ನು ಈ ಹಿಂದೆ ಸೋಲಿಸಿದ್ದು ಬಿಜೆಪಿಯ ಶಾಸಕ ರಘುಪತಿ ಭಟ್ಟ ಅಲ್ಲ. ಪ್ರಮೋದ್ ಮಧ್ವರಾಜ್, ಅವರ ತಾಯಿ. ಸಚಿವನಾಗಿದ್ದ ಪ್ರಮೋದ್ 12 ಸಾವಿರ ಮತದಲ್ಲಿ ಸೋತಿದ್ದಾನೆ. ಆಸ್ಕರ್ ಫೆರ್ನಾಂಡೀಸ್ ಗೆಲುವಿನ ಹಿಂದೆ ನಮ್ಮ ಶ್ರಮ ಇದೆ. ಇಂದಿರಾಗಾಂಧಿ ಬಳಿ ಹೋಗಿ ಸೀಟು ಪಡೆದು ಗೆದ್ದಿದ್ದೇವೆ ಎಂದೆಲ್ಲಾ ಮಾತನಾಡುತ್ತಾ ಪ್ರಮೋದ್ ಮಧ್ವರಾಜ್ ಗೆ ಯು.ಆರ್ ಸಭಾಪತಿ ಅವಾಚ್ಯ ಶಬ್ದಗಳಿಂದ ಬೈದಿದ್ದಾರೆ.
Advertisement
Advertisement
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಳೆದ ವಿಧಾನ ಸಭೆ ಚುನಾವಣೆ ಸೋಲು, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಅಲ್ಲಿ ಸೋತ ಮೇಲೆ ಪಕ್ಷದೊಳಗೆ ಭಿನ್ನಾಪ್ರಾಯ ಜೋರಾಗಿದೆ. ಪ್ರಮೋದ್ ಕಾಂಗ್ರೆಸ್ಸಿನ ಎಲ್ಲಾ ಕಾರ್ಯಕ್ರಮಗಳಿಂದ ದೂರ ಉಳಿದು ಎರಡು ವರ್ಷವಾಗುತ್ತಾ ಬಂದಿದೆ. ಈ ನಡುವೆ ಆಡಿಯೋ ವಾಟ್ಸಾಪ್ ನಲ್ಲಿ ಓಡಾಡುತ್ತಿದೆ. ಆಡಿಯೋ ಕಾಂಗ್ರೆಸ್ ಪಕ್ಷದ ನಾಯಕರಿಗೆ, ಕಾರ್ಯಕರ್ತರಿಗೆ ಇರಿಸುಮುರುಸು ತಂದಿದೆ.
ತುಳುವಿನಲ್ಲಿರುವ ಆಡಿಯೋದ ಸಾರಾಂಶ ಇಂತಿದೆ.
ಯು. ಆರ್ ಸಭಾಪತಿ: ನಿಮಗೆ ಆ ಗಿಲ್ಟಿ ಕಾನ್ಶಿಯಸ್ ಯಾಕೆ? ಅದರಲ್ಲಿ ಕಾಂಟ್ರವರ್ಸಿ ಏನಿದೆ?
ಕಾರ್ಯಕರ್ತ: ಹಾಗಲ್ಲ .. ಹಾಗಲ್ಲ ಹಾಗಲ್ಲ ಸರ್
ಯು. ಆರ್ ಸಭಾಪತಿ: ನೀವು ಯಾವಾಗಲೂ ನಿಮ್ಮ ಮೈಂಡನ್ನು ಫ್ರೀಯಾಗಿ ಇಟ್ಟುಕೊಳ್ಳಿ. ಸುಮ್ಮನೆ ಗಿಲ್ಟಿ ಕಾನ್ಶಿಯಸ್ ಕಾಂಟ್ರವರ್ಸಿ ಅಂತ ಯಾಕೆ ತಲೆಕೆಡಿಸಿಕೊಳ್ಳುತ್ತೀರಿ. ಅವರಿಗೆ ಬೇಸರ ಆಯಿತು ಇವರಿಗೆ ಬೇಸರ ಆಯ್ತು ಅಂತ ನೀವು ಯಾಕೆ ಅಂದುಕೊಳ್ಳುತ್ತೀರಿ.
ಕಾರ್ಯಕರ್ತ: ಹಾಗಲ್ಲ ಸರ್ ನಮಗೆ, ನಿಮ್ಮ ಮೇಲೆ ನಮಗೆ ತುಂಬಾ ಗೌರವ ಇದೆ. ನನ್ನ ಸಂಸ್ಥೆಗೆ ನೀವು ಶಂಕರ್ ಜೊತೆ ಬಂದಿದ್ದೀರಿ ಅದು ನನಗೆ ಇನ್ನೂ ನೆನಪಿದೆ.
ಸಭಾಪತಿ: ಅದಕ್ಕೂ ಇದಕ್ಕೂ ಏನು ಸಂಬಂಧ ಇದೆ ಹೇಳಿ.
ಕಾರ್ಯಕರ್ತ: ಸರ್ ನಾನು ಒಬ್ಬ ವ್ಯಕ್ತಿಯನ್ನು ಒಪ್ಪಿಕೊಂಡೆ ಎಂದರೆ ಯಾವ ಸಂದರ್ಭದಲ್ಲೂ ಅವರ ಜೊತೆಗೆ ಇರುವವನು. ನಾನು ಯಾವುದಕ್ಕೂ ತಯಾರಿರುತ್ತೇನೆ. ನನಗೆ ಸ್ವಲ್ಪ ಗರ್ವ ಜಾಸ್ತಿ.
ಸಭಾಪತಿ: ನೀವು ಈ ವಿಚಾರದಲ್ಲಿ ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ನಾನು ಕಾಂಗ್ರೆಸ್ ಪಾರ್ಟಿಯ ಸಿನ್ಸಿಯರ್ ವರ್ಕರ್. ಪಾರ್ಟಿಯನ್ನು ಬಿಲ್ಡಪ್ ಮಾಡಿದವರು ನಾವು. ಪಾರ್ಟಿಯನ್ನು ಸೋಲಿಸಿದವರು ಅವರು. ನನ್ನನ್ನು ಸೋಲಿಸಿದ್ದು ಬಿಜೆಪಿಯ ರಘುಪತಿ ಭಟ್ಟ ಅಲ್ಲ. ನನ್ನನ್ನು ಸೋಲಿಸಿದ್ದು ಪ್ರಮೋದ್ ಮತ್ತು ಅವನ ತಾಯಿ. ಆಸ್ಕರ್ ಫರ್ನಾಂಡಿಸ್ ಅವರ ಪಿಎ ಮಂಜುನಾಥ ಉದ್ಯಾವರ, ಇವರೆಲ್ಲ ಒಟ್ಟಾಗಿ ಸುಧಾಕರ ಶೆಟ್ಟಿಯನ್ನ ಸಪೋರ್ಟ್ ಮಾಡಿದ್ದಕ್ಕೆ ನನ್ನ ಬಳಿ ರುಜುವಾತು ಇದೆ. ನಾನು ಕಾಂಗ್ರೆಸ್ಸನ್ನು ಸೋಲಿಸಿಲ್ಲ. ಅವರೇ ಕಾಂಗ್ರೆಸನ್ನು ಸೋಲಿಸಿದ್ದು….
ಮೂರು ವರ್ಷ ಮಂತ್ರಿಯಾಗಿದ್ದವನು 12,000 ಮತಗಳಿಂದ ಸೋಲುವುದಾ? ನಾನು ಕೇವಲ ಸಾವಿರದ ಇನ್ನೂರು ಮತಗಳಿಂದ ಸೋತಿದ್ದು. ಪ್ರಮೋದ್ ಮಧ್ವರಾಜ್ 12 ಸಾವಿರ ಮತಗಳ ಅಂತರದಲ್ಲಿ ಸೋತಿದ್ದಾನೆ.. ನಾನಿದ್ದಾಗ ತಾಲೂಕು ಪಂಚಾಯತ್ ನಂದು. ಗ್ರಾಮಪಂಚಾಯತ್ ನಂದು. ಆಗ ನಗರಸಭೆ ನಮ್ಮದು. ಪ್ರಮೋದ್ ಮಧ್ವರಾಜ್ ಅವಧಿಯಲ್ಲಿ ನಗರಸಭೆಯ 36 ಸೀಟಿನ ಪೈಕಿ 32 ಅನ್ನ ಬಿಟ್ಟುಕೊಟ್ಟಿದ್ದಾನೆ. ಇವನು ಮಂತ್ರಿಯಾಗಿದ್ದವ… ತಾಲೂಕು ಪಂಚಾಯತ್ ಬಿಟ್ಟು ಕೊಟ್ಟಿದ್ದಾನೆ ಜಿಲ್ಲಾ ಪಂಚಾಯತ್ ಬಿಟ್ಟು ಕೊಟ್ಟಿದ್ದಾನೆ.
ಕಾರ್ಯಕರ್ತ: ಹೌದು… ಹೌದು..
ಸಭಾಪತಿ: ಇಷ್ಟೆಲ್ಲಾ ಇರುವುದರಿಂದ ಯಾಕೆ ಗಿಲ್ಟಿ ಕಾನ್ಶಿಯಸ್ ಮಾಡುತ್ತೀರಿ ಅರ್ಥವಾಗುತ್ತಿಲ್ಲ. ಅವನಿಂದಾಗಿ ನಮ್ಮ ಇಡೀ ಕಾಂಗ್ರೆಸ್ ಪಕ್ಷ ಸರ್ವನಾಶವಾಗಿ ಹೋಗಿದೆ. ಅಂಥವನು ಪಾರ್ಟಿಯಲ್ಲಿ ಇರಬಾರದು. ಅಂತವನಿಗೆ ಸಪೋರ್ಟ್ ಮಾಡುವವರನ್ನು ಪಾರ್ಟಿಯಲ್ಲಿ ಇರಿಸಬಾರದು. ಒದ್ದು ಹೊರಗೆ ಹಾಕಿ ಅವನನ್ನು. ಅಂಥವನಿಗೆ ಸಪೋರ್ಟ್ ಮಾಡುವವನನ್ನು ಪಕ್ಷದಿಂದ ಹೊರಗೆ ಹಾಕಿ.
ಕಾರ್ಯಕರ್ತ: ಸರ್… ಸರ್…
ಸಭಾಪತಿ: ಅದು ಅದು ಅದು ನಿಮಗೆ ಇರುವ ಧೈರ್ಯ.
ಕಾರ್ಯಕರ್ತ: ಸರ್…
ಸಭಾಪತಿ: ನಾನು ಎಷ್ಟು ವರ್ಷದಿಂದ ಏನು ಹೋರಾಟ ಮಾಡಿದ್ದೇನೆ ಹೇಳಿ, ಆಸ್ಕರಣ್ಣ ಎಂಪಿ ಆಗುತ್ತಿರಲಿಲ್ಲ. ನಮ್ಮ ಹೋರಾಟದಿಂದ ಅವರು ಎಂಪಿ ಆಗಿದ್ದಾರೆ. ಇಂದಿರಾಗಾಂಧಿಯ ತನಕ ಹೋಗಿ ಹೋರಾಟ ಮಾಡಿ ಅವರಿಗೆ ಸೀಟು ತೆಗೆಸಿ ಕೊಟ್ಟಿದ್ದೇವೆ. ಅವರನ್ನು ಗೆಲ್ಲಿಸಿ ದ್ದೇವೆ. ಇವರು ಇದ್ರ ಮನೋರಮ ಮಧ್ವರಾಜ್ ಇದ್ಲಾ?
ಕಾರ್ಯಕರ್ತ: ಸರ್.. ಸರ್ .. ನಾನು ಏನು ಹೇಳುತ್ತೇನೆ ಅಂದ್ರೆ
ಸಭಾಪತಿ: ಓಕೆ ಓಕೆ ಗುಡ್ ನೈಟ್.. ಗುಡ್ ನೈಟ್