ನವದೆಹಲಿ: ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಅವರು ಬಟರ್ ಚಿಕನ್ ಮತ್ತು ಬಿರಿಯಾನಿ ಪ್ರಿಯರು ಎನ್ನುವುದು ಅಭಿಮಾನಿಗಳಿಗೆ ಗೊತ್ತಿರುವ ವಿಚಾರ. ಇತ್ತೀಚೆಗೆ ಭಾರತದ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಅವರು ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡಲು ಸಾಧ್ಯವಾಗದ ವಿಚಾರವಾಗಿ ಮಾತನಾಡಿ ಧೋನಿ-ಬಿರಿಯಾನಿ ಕಥೆ ಹೇಳಿದ್ದಾರೆ.
2004ರಲ್ಲಿ ಧೋನಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದಾಗ ಕೈಫ್ ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಟಗಾರರಾಗಿದ್ದರು. ಆದಾಗ್ಯೂ ಕೈಫ್ ಅವರು ನಿಧಾನವಾಗಿ ಟೀಂ ಇಂಡಿಯಾದಿಂದ ಹೊರಗುಳಿದರು. ಇತ್ತ ಧೋನಿ 2007ರಲ್ಲಿ ಟಿ20 ತಂಡದ ನಾಯಕತ್ವ ವಹಿಸಿಕೊಂಡರು, ಬಳಿಕ 2008ರಲ್ಲಿ ಎಲ್ಲಾ ಮೂರು ಮಾದರಿ ಟೆಸ್ಟ್, ಏಕದಿನ, ಟಿ20 ನಾಯಕನಾಗಿ ಅನೇಕ ಸಾಧನೆಗೆ ಸಾಕ್ಷಿಯಾದರು.
Advertisement
Advertisement
2006ರ ರಣಜಿ ಟ್ರೋಫಿ ಟೂರ್ನಿಯಲ್ಲಿ ಕೈಫ್ ಉತ್ತರ ಪ್ರದೇಶ ತಂಡ ಗೆಲುವಿಗೆ ಕಾರಣರಾಗಿದ್ದರು. ಅದರಲ್ಲೂ ಫೈನಲ್ ಪಂದ್ಯದಲ್ಲಿ ಶತಕ ಗಳಿಸಿ ಟೀಂ ಇಂಡಿಯಾಗೆ ಕಮ್‍ಬ್ಯಾಕ್ ಮಾಡುವ ನಿರೀಕ್ಷೆ ಮೂಡಿಸಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ವಿಚಾರವನ್ನು ತಮಾಷೆಯಾಗಿ ಹೇಳಿದ ಕೈಫ್, ನಮ್ಮ ಮನೆಯಲ್ಲಿ ಧೋನಿಗೆ ಸರಿಯಾಗಿ ಬಿರಿಯಾನಿ ಬಡಿಸದೇ ಇರುವುದು ಟೀಂ ಇಂಡಿಯಾ ಕಮ್‍ಬ್ಯಾಕ್‍ಗೆ ಅಡ್ಡಿಯಾಯಿತು ಎಂದು ಹೇಳಿದ್ದಾರೆ.
Advertisement
ಕೈಫ್ 2006ರಲ್ಲಿ ಇಡೀ ಭಾರತದ ಕ್ರಿಕೆಟ್ ತಂಡವನ್ನು ತಮ್ಮ ನೋಯ್ಡಾ ಮನೆಗೆ ರಂಜಾನ್ ಹಬ್ಬಕ್ಕಾಗಿ ಆಹ್ವಾನಿಸಿದ್ದರು. ಈ ವೇಳೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಅವರಂತಹ ಹಿರಿಯ ಆಟಗಾರರು ಕೂಡ ಹಾಜರಾಗಿದ್ದರು. ಅವರಲ್ಲೆ ಒಂದು ಕೋಣೆಯಲ್ಲಿ ಕುಳಿತಿದ್ದರೆ ಎಂ.ಎಸ್.ಧೋನಿ, ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಆಗ ಕೈಫ್ ಹಿರಿಯ ಆಟಗಾರರ ಬಗ್ಗೆ ಹೆಚ್ಚು ಕಾಳಜಿ ತೋರಿದ್ದರು.
Advertisement
ಈ ವಿಚಾರವಾಗಿ ಮಾತನಾಡಿರುವ ಕೈಫ್, “2006ರಲ್ಲಿ ನಾನು ರಣಜಿ ಟ್ರೋಫಿ ಟೂರ್ನಿಯ ಫೈನಲ್‍ನಲ್ಲಿ ಶತಕ ಬಾರಿಸಿ ಉತ್ತರ ಪ್ರದೇಶದ ಗೆಲುವಿಗೆ ಪ್ರಮುಖ ಪಾತ್ರವಹಿಸಿದ್ದೆ. ಇದರಿಂದಾಗಿ ಎಂಎಸ್ ಧೋನಿ ಬಯಸಿದರೆ ನಾನು ಟೀಂ ಇಂಡಿಯಾಗೆ ಪುನರಾಗಮನ ಮಾಡಬಹುದೆಂದು ಭಾವಿಸಿದ್ದೆ” ಎಂದು ಸಂದರ್ಶನದಲ್ಲಿ ಬಹಿರಂಗ ಪಡಿಸಿದ್ದಾರೆ.
“ಎಂ.ಎಸ್.ಧೋನಿ, ಸುರೇಶ್ ರೈನಾ, ಇರ್ಫಾನ್ ಪಠಾಣ್ ಸೇರಿದಂತೆ ಕೆಲ ಆಟಗಾರರು ಒಂದು ಕೋಣೆಯಲ್ಲಿ ಕುಳಿತಿದ್ದರು. ಹಿರಿಯರಾದ ಸಚಿನ್, ಗಂಗೂಲಿ ಮತ್ತೊಂದು ಕೋಣೆಯಲ್ಲಿ ಕುಳಿತಿದ್ದರು. ಸಚಿನ್ ತೆಂಡೂಲ್ಕರ್ ಅವರಂತಹ ದಿಗ್ಗಜರ ಜೊತೆಗೆ ಕುಳಿತು ಉಪಚರಿಸುವುದು ಅನಿವಾರ್ಯವಾಗಿತ್ತು. ಹೀಗಾಗಿ ಹೆಚ್ಚಿನ ಸಮಯವನ್ನು ಹಿರಿಯರೊಂದಿಗೆ ಕಳೆದುಬಿಟ್ಟೆ. ಆ ಸಮಯದಲ್ಲಿ ಬಹುಶಃ ಧೋನಿ ಮತ್ತು ಇತರ ಕಿರಿಯ ಕ್ರಿಕೆಟಿಗರನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ. ಸಹೋದರ ಧೋನಿ ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಕೈಫ್ ಕೇಳಿಕೊಂಡಿದ್ದಾರೆ.
ಕೈಫ್ 2006ರ ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಪರ ಕೊನೆಯ ಪಂದ್ಯವನ್ನು ಆಡಿದ್ದರು. ಅವರು ಭಾರತ ಪರ 13 ಟೆಸ್ಟ್ ಮತ್ತು 125 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಎರಡು ಮಾದರಿಯಲ್ಲಿ ಕ್ರಮವಾಗಿ 624 ರನ್ ಮತ್ತು 2,753 ರನ್ ಗಳಿಸಿದ್ದಾರೆ. ಕೈಫ್ ತಮ್ಮ ಅದ್ಬುತ ಫೀಲ್ಡಿಂಗ್‍ಗೆ ಹೆಸರಾಗಿದ್ದರು. ಅವರು ಸಾರ್ವಕಾಲಿಕ ಅತ್ಯುತ್ತಮ ಭಾರತೀಯ ಫೀಲ್ಡರ್ ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ.