ಚಿಕ್ಕಬಳ್ಳಾಪುರ: ಜಿಲ್ಲೆಯ ಗೌರಿಬಿದನೂರು ತಾಲೂಕಿನ ಚಿಕ್ಕಕುರಗೋಡು ಕೈಗಾರಿಕಾ ಪ್ರದೇಶದ ಕಾರ್ಖಾನೆಯಲ್ಲಿ ರಾಸಾಯನಿಕ ಮಿಶ್ರಣದ ವೇಳೆ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಐದು ಮಂದಿಗೆ ಸುಟ್ಟಗಾಯಗಳಾಗಿದ್ದು, ಮೂವರು ಗಂಭೀರ ಸ್ಥಿತಿಯಲ್ಲಿದ್ದು, ಮೂವರಲ್ಲಿ ಓರ್ವ ಕಾರ್ಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ರಾಮಚಂದ್ರಾಪುರದ ವೆಂಕಟೇಶ್ ಮೃತ ಕಾರ್ಮಿಕ ಅಂತ ತಿಳಿದುಬಂದಿದೆ. ಆಗಸ್ಟ್ 5 ರಂದು ತಾಲೂಕಿನ ಚಿಕ್ಕಕುರುಗೋಡು ಕೈಗಾರಿಕಾ ಪ್ರದೇಶದಲ್ಲಿನ ಪ್ರಿಕಾಟ್ ಲಿಮಿಟೆಡ್ ಎಂಬ ಕೈಗಾರಿಕೆಯಲ್ಲಿ ಸೋಡಿಯಂ ಹೈಡ್ರಾಕ್ಸೆಡ್ ರಾಸಾಯನಿಕ ಮಿಶ್ರಣ ಅಂದ್ರೆ ಕಾಸ್ಟಿಕ್ ಸೋಡಾವನ್ನು ನೀರಿನಲ್ಲಿ ಬೆರೆಸುವಾಗ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಹಠಾತ್ ಬಿಸಿಯಾದ ನೀರು ಮತ್ತು ರಾಸಾಯನಿಕ ಮಿಶ್ರಣವು ಸ್ಫೋಟಗೊಂಡಿದ್ದರಿಂದ ಐವರು ಕಾರ್ಮಿಕರು ಗಾಯಗೊಂಡಿದ್ದರು. ಇದನ್ನೂ ಓದಿ: ಆರೋಗ್ಯ ಇಲಾಖೆಯ ಒಂದೇ ಕಾರ್ನಲ್ಲಿ 10 ಮಂದಿ ಪ್ರಯಾಣ
ಕಡಗಟ್ಟೂರಿನ ಹರೀಶ್ (32) ರಾಮಚಂದ್ರಾಪುರದ ವೆಂಕಟೇಶ್(42), ಚಿಕ್ಕಕುರುಗೋಡಿನ ರವಿಕುಮಾರ್ (39), ಹಿಂದೂಪುರದ ಆನಂದ ಕುಮಾರ್ (32) ನೆಲ್ಲೋರು 29 ವರ್ಷದ ಗೊರವಯ್ಯ ಗಾಯಗೊಂಡಿದ್ದರು. ಇವರಲ್ಲಿ ರಾಮಚಂದ್ರಾಪುರದ ವೆಂಕಟೇಶ್, ಚಿಕ್ಕಕುರುಗೋಡಿನ ರವಿಕುಮಾರ್ (39) ನೆಲ್ಲೊರು 29 ವರ್ಷದ ಗೊರವಯ್ಯ ರವರ ಸ್ಥಿತಿ ಗಂಭೀರವಾಗಿದ್ದು, ಅಂದು ಬೆಂಗಳೂರಿನ ವಿಕ್ಟೋರಿಯಾ ಅಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ವೆಂಕಟೇಶ್ ಮೃತಪಟ್ಟಿದ್ದಾರೆ. ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ಕೆಆರ್‌ಎಸ್ ಬೃಂದಾವನ ಮಾದರಿಯ ಎಕೋ ಥೀಮ್ ಪಾರ್ಕ್