ಬೆಂಗಳೂರು: ಈಗ ಕೇಸ್ ಕಡಿಮೆ ಆಗ್ತಿದೆ. ಹೀಗಾಗಿ ಲಾಕ್ ಡೌನ್ ಮುಂದುವರಿಸಿದ್ರೆ ಮತ್ತಷ್ಟು ಅನುಕೂಲ ಆಗುತ್ತೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.
ಹೊಸಕೆರೆಹಳ್ಳಿಯಲ್ಲಿ ಬಿಬಿಎಂಪಿಯ ನೂತನ ಟ್ರಯಾಜ್ ಮತ್ತು ಕೋವಿಡ್ ಸ್ಥಿರೀಕರಣ ಘಟಕ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪರವರಿಗೂ ಈ ಬಗ್ಗೆ ಮನವರಿಕೆ ಮಾಡ್ತೀವಿ. ನಾನು ಬೆಂಗಳೂರು ನಾಗರೀಕನಾಗಿ ಲಾಕ್ ಡೌನ್ ಮುಂದುವರಿಕೆ ಆಗಬೇಕು ಅಂತ ಹೇಳ್ತೀನಿ. ನಾವು ಲಾಕ್ ಡೌನ್ ಬೇಕು ಅಂತ ಸಿಎಂಗೆ ಸಲಹೆ ಮಾಡ್ತೀವಿ. ಮಹಾರಾಷ್ಟ್ರ, ದೆಹಲಿ ಪ್ರಕರಣ ನಮ್ಮ ಮುಂದಿದೆ. ಅಲ್ಲಿ ಮೊದಲ ಅಲೆ ಬಂತು. ಅವರು ಲಾಕ್ ಡೌನ್ ವಿಸ್ತರಣೆ ಮಾಡಿದ್ರು. ಅದನ್ನ ನಾವು ಅನುಸರಿಸುತ್ತೇವೆ ಎಂದರು.
ಕರ್ನಾಟಕದಲ್ಲಿಯೂ ಲಾಕ್ ಡೌನ್ ವಿಸ್ತರಣೆ ಆಗಬೇಕು. ಸಿಎಂ ಈಗಿರುವ ಲಾಕ್ ಡೌನ್ ಮುಗಿಯೋ 3-4 ದಿನಗಳಲ್ಲಿ ಸಭೆ ಮಾಡ್ತಾರೆ. ಸಭೆಯಲ್ಲಿ ಈ ಬಗ್ಗೆ ಸಲಹೆ ಕೊಡ್ತೀವಿ. ಸಿಎಂ ಅಂತಿಮವಾಗಿ ಲಾಕ್ ಡೌನ್ ಮುಂದುವರಿಸುವ ನಿರ್ಧಾರ ಮಾಡ್ತಾರೆ ಎಂದರು.
ಕಳೆದ 10 ದಿನಗಳಲ್ಲಿ ಈ ಆಸ್ಪತ್ರೆ ಸಿದ್ಧತೆ ಮಾಡಿದ್ದೇವೆ. ಆಕ್ಸಿಜನ್ ಮತ್ತು ಆಕ್ಸಿಜನ್ ಕಾನ್ಸಂಟ್ರೇಟರ್ ವ್ಯವಸ್ಥೆ ಇಲ್ಲಿ ಇದೆ. ಡಬಲ್ ಎಂಜಿನ್ ಸ್ಟಿಸ್ಟಮ್ ಇಲ್ಲಿ ವ್ಯವಸ್ಥೆ ಇಲ್ಲಿ ಮಾಡಿದ್ದೇವೆ. ಇದರಿಂದ ಜನರಿಗೆ ಹೆಚ್ಚು ಅನುಕೂಲ ಆಗಲಿದೆ. ಸ್ಥಳಿಯವಾಗಿ ಅನುಕೂಲ ಆಗಲು ಈ ಆಸ್ಪತ್ರೆ ಪ್ರಾರಂಭ ಮಾಡಲಾಗಿದೆ. ಅಗತ್ಯ ಸಿಬ್ಬಂದಿ ನೇಮಕ ಮಾಡಲಾಗಿದೆ. ಸ್ಪೆಷಲಿಸ್ಟ್ ವೈದ್ಯರು ಇಲ್ಲಿ ಇದ್ದಾರೆ ಎಂದು ಸಚಿವರು ತಿಳಿಸಿದರು.
ಮಕ್ಕಳಿಗಾಗಿ ವಿಶೇಷ ಕೇಂದ್ರ ಪ್ರಾರಂಭ ಮಾಡ್ತಿದ್ದೇವೆ. 50 ಮಕ್ಕಳ ಬೆಡ್ ಪ್ರಾರಂಭ ಮಾಡಲಾಗ್ತಿದೆ. ಪೋಷಕರಿಗೂ ಉಳಿಯಲು ಅವಕಾಶ ನೀಡಲಾಗುತ್ತೆ. ಮಕ್ಕಳಿಗೆ ಆಗೋ ಸಮಸ್ಯೆ ತಡೆಯಲು ಈ ಕ್ರಮ ತೆಗೆದುಕೊಳ್ಳಲಾಗ್ತಿದೆ ಎಂದು ವಿವರಿಸಿದರು.