– ಪ್ರಕರಣವನ್ನು ರಾಜಕೀಯವಾಗಿ ತೆಗೆದುಕೊಳ್ಳಲ್ಲ
ಆನೇಕಲ್: ಕೇವಲ 7 ನಿಮಿಷಗಳಲ್ಲಿ ಕಾರುಗಳಿಗೆ ಬೆಂಕಿ ಇಟ್ಟು ಆರೋಪಿಗಳು ಎಸ್ಕೇಪ್ ಆಗಿದ್ದಾರೆ ಎಂದು ಬೊಮ್ಮನಹಳ್ಳಿ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹೇಳಿದ್ದಾರೆ.
ಘಟನೆ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಸಿಟಿವಿಯಲ್ಲಿ ಸೆರೆಯಾಗಿರುವ ಪ್ರಕಾರ 1 ಗಂಟೆ 23 ನಿಮಿಷಕ್ಕೆ ಇಬ್ಬರು ಎಂಟ್ರಿಯಾಗಿದ್ದಾರೆ. ಕೇವಲ 7 ನಿಮಿಷಗಳಲ್ಲಿ ಕೃತ್ಯ ಎಸಗಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಹಿಂದಿನ ಗೇಟ್ ನಿಂದ ಇಬ್ಬರು ಎಸ್ಕೇಪ್ ಆಗಿರೋದು ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಗೇಟ್ ನಲ್ಲಿ ಸಿಸಿಟಿವಿ ಇದೆ ಅದರೆ ಅರಲ್ಲಿ ಮುಖ ಸರಿಯಾಗಿ ಕಾಣಿಸೋದಿಲ್ಲ. ಪೊಲೀಸ್, ವಾಚ್ ಮೆನ್ ಇಬ್ಬರು ಮುಂದಿನ ಗೇಟಿನ ಬಳಿ ಇದ್ದರು. ಬೈಕ್ ಗಳಲ್ಲಿ ಇಬ್ಬರು ಬಂದಿದ್ರು ಅನ್ನೋದು ಗೊತ್ತಾಗಿದೆ. ಪೊಲೀಸರು ಈಗಾಗಲೇ ತನಿಖೆಯನ್ನ ಆರಂಭಿಸಿದ್ದಾರೆ ಎಂದರು. ಇದನ್ನೂ ಓದಿ: ಶಾಸಕ ಸತೀಶ್ ರೆಡ್ಡಿ ಕಾರುಗಳಿಗೆ ಬೆಂಕಿಯಿಟ್ಟ ದುಷ್ಕರ್ಮಿಗಳು!
ನನಿಗೆ ಇಲ್ಲಿ ಯಾವುದೇ ರಾಜಕೀಯ ವೈಷ್ಯಮ ಇಲ್ಲ. ಹೀಗಾಗಿ ಇದನ್ನ ರಾಜಕೀಯವಾಗಿ ತೆಗೆದುಕೊಳ್ಳುವುದನ್ನ ನಿರಾಕರಿಸುತ್ತೇನೆ. ಯಾರೋ ಒಂದು ದುರಾಲೋಚನೆಯ ಮೆಸೇಜ್ ಪಾಸ್ ಮಾಡಿದ್ದಾರೆ. ಯಾರ ಮನೆಯಲ್ಲಿ ಏನು ಬೇಕಾದ್ರೂ ಮಾಡಬಹುದು ಅಂತಾ ತೋರಿಸೋಕೆ ಹೀಗೆ ಮಾಡಿದ್ದಾರೆ ಎಂದು ಸತೀಶ್ ರೆಡ್ಡಿ ತಿಳಿಸಿದ್ದಾರೆ.