ಬೆಂಗಳೂರು: ಕೇವ ವಧುವಿನ ಫೋಟೋವನ್ನು ಮಾತ್ರ ಕ್ಲಿಕ್ ಮಾಡುತ್ತಿದ್ದ ಕ್ಯಾಮೆರಾಮ್ಯಾನ್‍ಗೆ ವರನೊಬ್ಬ ರೊಚ್ಚಿಗೆದ್ದು ಕಪಾಳಕ್ಕೆ ಹೊಡೆದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.
I just love this Bride ???????????????????????? pic.twitter.com/UE1qRbx4tv
— Renuka Mohan (@Ease2Ease) February 5, 2021
ವರ ಕ್ಯಾಮೆರಾಮ್ಯಾನ್‍ಗೆ ಬಾರಿಸುತ್ತಿದ್ದಂತೆ ವಧು ನಗೆಯಲ್ಲಿ ತೇಲಿದ್ದು, ನಗು ತಡೆಯಲಾಗದೆ ವಧು ನೆಲಕ್ಕೆ ಬಿದ್ದು ಹೊರಳಾಡುತ್ತಾಳೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಈ ವಧುವನ್ನು ತುಂಬಾ ಇಷ್ಟ ಪಟ್ಟೆ ಎಂದೆಲ್ಲ ಬರೆದು ವಿಡಿಯೋ ಹಂಚಿಕೊಂಡಿದ್ದಾರೆ.
Made my day…tats wat a smile(laughter in this case???? ) can do. the groom n photographer forgot their anger…this bride is jus ???????? https://t.co/d9sZEZCiRF
— positive vibes (@sakaratmakvibes) February 6, 2021
ವರ ಹೊಡೆಯುತ್ತಿದ್ದಂತೆ ವಧು ಜೋರಾಗಿ ನಕ್ಕಿದ್ದು, ವರನ ಅಸಹಜ ವರ್ತನೆಯನ್ನು ಕಂಡ ನೆಟ್ಟಿಗರು ಇದೊಂದು ಪ್ರಾಂಕ್ ವಿಡಿಯೋ ಆಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ವಧು ಸಂದರ್ಭವನ್ನು ತುಂಬಾ ಚೆನ್ನಾಗಿ ನಿಭಾಯಿಸಿದ್ದಾರೆ. ಇಂದು ನನ್ನ ನಗುವಿಗೆ ಕಾರಣರಾಗಿದ್ದಾರೆ ಎಂದೆಲ್ಲ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ತರಹೇವಾರಿ ಕಮೆಂಟ್‍ಗಳ ಮೂಲಕ ನೆಟ್ಟಿಗರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.