ತಿರುವನಂತಪುರ: ಕೇರಳ ರಾಜ್ಯದಲ್ಲಿ ವರದಕ್ಷಿಣೆ ಕಿರುಕುಳದಿಂದ ಮಹಿಳೆಯರು ಸಾವನ್ನಪ್ಪುತ್ತಿರು ಪ್ರಕರಣ ಹೆಚ್ಚಾಗುತ್ತಿರುವುದನ್ನು ಮನಗಂಡು ಕೇರಳ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಸ್ವತಃ ವರದಕ್ಷಿಣೆ ಪಿಡುಗಿನ ವಿರುದ್ಧ ನಾಳೆ ಒಂದು ದಿನ ಧರಣಿ ನಡೆಸಲು ಸಿದ್ಧರಾಗಿದ್ದಾರೆ.
Advertisement
ಕೇರಳದಲ್ಲಿ ಕಳೆದ ಕೆಲ ವರ್ಷಗಳಿಂದ ವರದಕ್ಷಿಣೆ ವಿಚಾರವಾಗಿ ಮನಸ್ಥಾಪ ಬಂದು ಹಲವು ಮಹಿಳೆಯರು ಆತ್ಮಹತ್ಯೆ ಮಾಡಿಕೊಂಡಿರುವ ಮತ್ತು ಕಿರುಕುಳದಿಂದಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗುತ್ತಿದೆ. ರಾಜ್ಯದಲ್ಲಿ ವರದಕ್ಷಿಣೆ ಪಿಡುಗಿಗೆ ಮಹಿಳೆಯರು ಬಲಿಯಾಗುತ್ತಿರುವುದನ್ನು ಖಂಡಿಸಿ ಮತ್ತು ವರದಕ್ಷಿಣೆ ಪಿಡುಗಿನ ಬಗ್ಗೆ ಅರಿವನ್ನು ಮೂಡಿಸುವ ಉದ್ದೇಶದಿಂದ ಸ್ವತಃ ರಾಜ್ಯದ ರಾಜ್ಯಪಾಲರಾದ ಖಾನ್ ಅವರು ಒಂದು ದಿನದ ಧರಣಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಧರಣಿ ಕೇರಳದ ಗಾಂಧಿ ಭವನದಲ್ಲಿ ನಡೆಯಲಿದ್ದು, ಕಳೆದ ಒಂದು ತಿಂಗಳ ಹಿಂದೆಯೆ ಖಾನ್ ಅವರು ಈ ಕುರಿತು ವಾಗ್ದಾನ ಮಾಡಿದ್ದರು ಇದೀಗ ನಾಳೆ ಧರಣಿಗೆ ಮುಂದಾಗಿದ್ದಾರೆ. ಇದನ್ನೂ ಓದಿ: ವರದಕ್ಷಿಣೆಗಾಗಿ ಪತ್ನಿಯನ್ನೇ ಕೊಂದ ಪತಿ
Advertisement
Advertisement
ಕಳೆದ ತಿಂಗಳು ಕೇರಳದಲ್ಲಿ ವೈದ್ಯಕೀಯ ವಿದ್ಯಾರ್ಥಿಯೊರ್ವಳಿಗೆ ಆಕೆಯ ಗಂಡ ವರದಕ್ಷಿಣೆಯಾಗಿ ದುಬಾರಿ ಕಾರಿಗೆ ಬೇಡಿ ಇಟ್ಟು, ಬಳಿಕ ಆಕೆಗೆ ಕಿರುಕುಳ ನೀಡಿ ಆಕೆ ಸಾವನ್ನಪ್ಪಿದ ಬಗ್ಗೆ ವರದಿಯಾಗಿತ್ತು. ಈ ಸಂದರ್ಭ ಖಾನ್, ಅವರು ಸ್ವಯಂ ಸೇವಕ ಸಂಘಗಳು ಇತರ ಸಂಘ ಸಂಸ್ಥೆಗಳು ರಾಜ್ಯದಲ್ಲಿ ವರದಕ್ಷಿಣೆ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕೆಂದಿದ್ದರು.
Advertisement
ನಾಳೆ ಕೇರಳದಲ್ಲಿ ಗಾಂಧಿ ತತ್ವ ಅನುಸರಿಸುವ ಹಲವು ಸಂಘ ಸಂಸ್ಥೆಗಳು ವರದಕ್ಷಿಣೆ ಪಿಡುಗಿನ ಬಗ್ಗೆ ಅರಿವನ್ನು ಮೂಡಿಸಿ, ಧರಣಿ ನಡಸಲು ಮುಂದಾಗಿವೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲರು ಭಾಗಿಯಾಗುತ್ತಿದ್ದಾರೆ.