ಹಾಸನ: ಕೇರಳದಿಂದ ಹಾಸನಕ್ಕೆ ಬಂದಿರುವ ಒಂದೇ ಕಾಲೇಜಿನ ಸುಮಾರು 65 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದ್ದು ಆತಂಕಕ್ಕೆ ಕಾರಣವಾಗಿದೆ.
Advertisement
ಈಗಾಗಲೇ ಕಾಲೇಜುಗಳು ಆರಂಭವಾಗಿದ್ದು, ಕೇರಳದಿಂದ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ನರ್ಸಿಂಗ್ ಓದಲು ಹಾಸನಕ್ಕೆ ಆಗಮಿಸಿದ್ದಾರೆ. ಇದೀಗ ಕೇರಳದಿಂದ ಬಂದ ವಿದ್ಯಾರ್ಥಿಗಳಲ್ಲಿ ಕೊರೊನಾ ಕಂಡು ಬಂದಿರೋದು ಆತಂಕಕ್ಕೆ ಕಾರಣವಾಗಿತ್ತಿದೆ. ಎರಡು ದಿನದ ಹಿಂದೆ ಒಂದೇ ಕಾಲೇಜಿನ 21 ವಿದ್ಯಾರ್ಥಿಗಳಿಗೆ, ನಿನ್ನೆ ಒಂದೇ ಕಾಲೇಜಿನ 17 ವಿದ್ಯಾರ್ಥಿಗಳಿಗೆ, ಇಂದು 65 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.
Advertisement
Advertisement
ಇವರೆಲ್ಲ ಕೇರಳದಿಂದ ಬಂದವರೇ ಆಗಿದ್ದು, ಹಾಸನದಲ್ಲಿ ಮೂರನೇ ಅಲೆ ಕಾಣಿಸಿಕೊಳ್ಳುತ್ತಿದೆಯಾ ಎಂಬ ಆತಂಕ ಮೂಡಿದೆ. ಇದನ್ನೂ ಓದಿ: ಸಿಎಂಗೆ ಹೆಚ್‍ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು?: ಶಾಸಕ ಪ್ರೀತಂ ಗೌಡ
Advertisement
ಶುಕ್ರವಾರದ ಹೆಲ್ತ್ ಬುಲೆಟಿನ್ ಪ್ರಕಾರ ಹಾಸನ ಜಿಲ್ಲೆಯಲ್ಲಿ ಸದ್ಯ 1,809 ಸಕ್ರಿಯ ಪ್ರಕರಣಗಳಿವೆ. ಶುಕ್ರವಾರ 103 ಜನಕ್ಕೆ ಸೋಂಕು ತಗುಲಿದ್ದು, ಮೂವರು ಸಾವನ್ನಪ್ಪಿದ್ದಾರೆ. ಇದುವರೆಗೂ ಹಾಸನದಲ್ಲಿ 1,07,341 ಕೊರೊನಾ ಪ್ರಕರಣಗಳು ವರದಿಯಾಗಿದ್ದು, 1,451 ಮಂದಿ ಸಾವನ್ನಪ್ಪಿದ್ದಾರೆ.