– ನರ್ಸಿಂಗ್ ಕಾಲೇಜಿಗೆ ನೋಟಿಸ್ ಜಾರಿ
ಮಂಗಳೂರು: ಕೇರಳದಿಂದ ಮಂಗಳೂರಿಗೆ ಬಂದ 15 ನರ್ಸಿಂಗ್ ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ಜನವರಿ 1ರಿಂದ ಕಾಲೇಜು ಆರಂಭದ ಹಿನ್ನೆಲೆಯಲ್ಲಿ ಕೇರಳದಿಂದ 613 ವಿದ್ಯಾರ್ಥಿಗಳು ಮಂಗಳೂರಿನ ಸಿಟಿ ನರ್ಸಿಂಗ್ ಕಾಲೇಜು ಮತ್ತು ರುಕ್ಮಿಣಿ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿಗೆ ಆಗಮಿಸಿದ್ದರು. ಇದರಲ್ಲಿ 15 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
Advertisement
ಕೇರಳದಿಂದ ಬಂದಿದ್ದ 613 ವಿದ್ಯಾರ್ಥಿಗಳ ಪೈಕಿ 200 ವಿದ್ಯಾರ್ಥಿಗಳು ಮಾತ್ರ ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ತಂದಿದ್ದರು. ಸರ್ಕಾರದ ನಿಯಮ ಪಾಲಿಸದೆ ಬಂದಿದ್ದ ಎಲ್ಲಾ ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಂಡ ಮಂಗಳೂರಿನ ಸಿಟಿ ನರ್ಸಿಂಗ್ ಕಾಲೇಜು ಮತ್ತು ರುಕ್ಮಿಣಿ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜಿಗೆ ಸರ್ಕಾರದಿಂದ ಶೋಕಾಸ್ ನೋಟಿಸ್ ನೀಡಲಾಗಿದೆ.
Advertisement
Advertisement
613 ವಿದ್ಯಾರ್ಥಿಗಳ ಪೈಕಿ ಕೊರೊನಾ ವರದಿ ತರದಿದ್ದ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯಿಂದಲೇ ಟೆಸ್ಟ್ ಮಾಡಿಸಿದ ವೇಳೆ 15 ಮಂದಿ ಕೇರಳ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಇರುವುದು ಬೆಳಕಿಗೆ ಬಂದಿದೆ. ಕೊರೊನಾ ಪಾಸಿಟಿವ್ ವರದಿಯಾದ 15 ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ಕೊಡಲಾಗುತ್ತಿದೆ.
Advertisement
ಈ ಘಟನೆಯ ಬೆನ್ನಲ್ಲೇ ಜಿಲ್ಲೆಯ ಎಲ್ಲಾ ನರ್ಸಿಂಗ್ ಕಾಲೇಜುಗಳಿಗೆ ಆರೋಗ್ಯ ಇಲಾಖೆ ನೋಟೀಸ್ ಜಾರಿ ಮಾಡಿದ್ದು, ತರಗತಿಗೆ ಆರಂಭದ 72 ಗಂಟೆಗೂ ಮುನ್ನ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಿಸಿ ನೆಗೆಟಿವ್ ವರದಿ ಸಲ್ಲಿಸುವಂತೆ ಸೂಚನೆ ಹೊರಡಿಸಿದೆ. ಸರ್ಕಾರದ ನಿಯಮ ಪಾಲನೆ ಮಾಡದಿದ್ದರೆ ಅಂತಹ ಶಿಕ್ಷಣ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುದಾಗಿ ಎಚ್ಚರಿಕೆ ನೀಡಿದೆ.
ಮಂಗಳೂರು, ಕೊರೊನಾ, ಕೋವಿಡ್ 19, ಮಂಗಳೂರು ಸಿಟಿ ನರ್ಸಿಂಗ್ ಕಾಲೇಜು, ರುಕ್ಮಿಣಿ ಶೆಟ್ಟಿ ಮೆಮೋರಿಯಲ್ ನರ್ಸಿಂಗ್ ಕಾಲೇಜು, ಪಬ್ಲಿಕ್ ಟಿವಿ