ಕೇರಳದಲ್ಲಿ ಇಂದು ಕೂಡ 20 ಸಾವಿರಕ್ಕೂ ಹೆಚ್ಚು ಕೇಸ್ – ಗಡಿ ಜಿಲ್ಲೆಗಳ ಡಿಸಿಗಳ ಜೊತೆ ನಾಳೆ ಸಿಎಂ ಸಭೆ

Public TV
2 Min Read
CORONA 7

– ಆಗಸ್ಟ್ ಮೊದಲ ವಾರದಲ್ಲೇ 3 ಅಲೆ ಎಚ್ಚರಿಕೆ

ತಿರುವನಂತಪುರಂ/ಬೆಂಗಳೂರು: ಕೇರಳದಿಂದಲೇ ಕೋವಿಡ್ ಮೂರನೇ ಅಲೆ ಶುರುವಾದಂತಿದೆ. ನಿನ್ನೆ ದೇಶದಲ್ಲಿ 44 ಸಾವಿರ ಕೇಸ್ ಬಂದಿದ್ದು, ಈ ಪೈಕಿ 22 ಸಾವಿರಕ್ಕೂ ಹೆಚ್ಚು ಸೋಂಕು ಪ್ರಕರಣಗಳು ಕೇರಳದ್ದಾಗಿವೆ.

ದೇವರನಾಡಿನಲ್ಲಿ ಇಂದು ಕೂಡ 20,772 ಕೇಸ್ ವರದಿ ಆಗಿವೆ. ಕೇವಲ ಒಂದೇ ವಾರದಲ್ಲಿ ಕೇರಳದ ಶೇಕಡಾ 80ರಷ್ಟು ಬೆಡ್‍ಗಳು ಭರ್ತಿ ಆಗಿವೆ. ಕೇಂದ್ರ ತಂಡ ಇಂದು ಕೇರಳಕ್ಕೆ ಭೇಟಿ ನೀಡಿದ್ದು, ಕೋವಿಡ್ ಹೆಚ್ಚಿರುವ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸ್ತಿದೆ. ದೇಶದಲ್ಲಿ 2ನೇ ಅಲೆ ಉತ್ತುಂಗದಲ್ಲಿದ್ದಾಗ ರಿ-ಪ್ರೊಡಕ್ಷನ್ ದರ 1.37ರಷ್ಟಿತ್ತು. ನಂತರ ಇದು 0.78ಕ್ಕೆ ಇಳಿದಿತ್ತು. ಆದರೆ ಇದೀಗ ಆರ್ ಫ್ಯಾಕ್ಟರ್ ಪ್ರಮಾಣ ಶೇಕಡಾ 0.95ಕ್ಕೆ ಬಂದು ನಿಂತಿದೆ. ಅಂದರೆ 100ಜನ ಸೋಂಕಿತರ ಮೂಲಕ ಮತ್ತೆ 95 ಮಂದಿಗೆ ಸೋಂಕು ಹಬ್ಬುತ್ತದೆ. ರಿಪ್ರೊಡಕ್ಷನ್ ದರ 1 ದಾಟಿದ್ರೆ ಕಷ್ಟ ಆಗಲಿದೆ.

CORONA VIRUS 3 medium

ಕೇರಳದಲ್ಲಿ ಸದ್ಯ ಆರ್-ಫ್ಯಾಕ್ಟರ್ 1.11ರಷ್ಟಿದೆ. ಇಂದು ರಾಜ್ಯದಲ್ಲಿ 1,890 ಕೇಸ್ ವರದಿ ಆಗಿದ್ದು, 34 ಮಂದಿ ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ಪ್ರಮಾಣ ಶೇಕಡಾ 1.30ರಷ್ಟಿದೆ. ಬೆಂಗಳೂರಲ್ಲಿ 426 ಕೇಸ್, 9 ಸಾವು ಉಂಟಾಗಿದ್ರೆ, ದಕ್ಷಿಣ ಕನ್ನಡದಲ್ಲಿ 345 ಕೇಸ್ ಬಂದಿದ್ದು, 7 ಸಾವು ವರದಿ ಆಗಿದೆ. ಉಡುಪಿ, ಮೈಸೂರು, ಹಾಸನ, ಬೆಳಗಾವಿಯಲ್ಲಿ ನೂರಕ್ಕೂ ಹೆಚ್ಚು ಪ್ರಕರಣ ವರದಿ ಆಗಿವೆ. ಇದನ್ನೂ ಓದಿ: ನಮಗೆ ಮೀಸಲಾತಿ ಬಗ್ಗೆ ಪಾಠ ಮಾಡುವ ನೈತಿಕತೆ ಬಿಜೆಪಿಗಿಲ್ಲ: ಸಿದ್ದರಾಮಯ್ಯ

ಈ ಮೂಲಕ ಇತ್ತ ಸಿಎಂ ಬಸವರಾಜ ಬೊಮ್ಮಾಯಿಗೆ ಕೊರೋನಾ ರೂಪದಲ್ಲಿ ಮತ್ತೊಂದು ಚಾಲೆಂಜ್ ಎದುರಾಗಿದೆ. ಒಂದ್ಕಡೆ ಪಕ್ಕದ ಕೇರಳದಲ್ಲಿ ಕೋವಿಡ್ ಆರ್ಭಟಿಸುತ್ತಿರುವ ಕಾರಣ, ಗಡಿ ಜಿಲ್ಲೆಗಳಲ್ಲಿ ಸೋಂಕು ಹೆಚ್ಚಳವಾಗ್ತಿದೆ. ಹೀಗಾಗಿ ನಾಳೆ ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ.

BOMMAI 4

ಈ ಮಧ್ಯೆ ಕೇಂದ್ರದ ಅಸಹಕಾರವೋ..? ಅಧಿಕಾರಗಳ ಅಸಡ್ಡೆಯೋ? ಗೊತ್ತಿಲ್ಲ. ರಾಜ್ಯದಲ್ಲಿ ಗಣನೀಯ ಪ್ರಮಾಣದಲ್ಲಿ ವ್ಯಾಕ್ಸಿನೇಷನ್ ಕುಂಠಿತವಾಗಿದೆ. ಬಹುತೇಕ ಆಸ್ಪತ್ರೆಗಳ ಮುಂದೆ ನೋ ಸ್ಟಾಕ್ ಬೋರ್ಡ್ ರಾರಾಜಿಸ್ತಾ ಇದ್ದೂ, ಜನರ ಪರದಾಟ, ಆಕ್ರೋಶ ಮುಂದುವರಿದಿದೆ. ಕೆಸಿ ಜನರಲ್ ಆಸ್ಪತ್ರೆಯಲ್ಲೇ ಕೊವಿಶೀಲ್ಡ್ ಲಸಿಕೆ ಸಿಗ್ತಿಲ್ಲ. ಬಹುತೇಕ ಜಿಲ್ಲೆಗಳಲ್ಲಿ ಲಸಿಕೆ ಲಭ್ಯವಿಲ್ಲ. ಇದೆಲ್ಲವನ್ನು ಒಂಟಿ ಕೈಯಲ್ಲಿ ಸೂಕ್ತವಾಗಿ ನಿರ್ವಹಿಸಬೇಕಾದ ಬಹುದೊಡ್ಡ ಹೊಣೆಗಾರಿಕೆ ಸಿಎಂ ಬೊಮ್ಮಾಯಿ ಮೇಲಿದೆ. ಇನ್ನು ಆಗಸ್ಟ್ ಮೊದಲ ವಾರದಲ್ಲಿಯೇ ಕೋವಿಡ್ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸಬಹುದೆಂಬ ಆತಂಕವನ್ನು ತಜ್ಞರು ಹೊರ ಹಾಕಿದ್ದಾರೆ. ಪಾಸಿಟಿವ್ ರೇಟ್ ಶೇ 5 ಕ್ಕಿಂತ ಕಡಿಮೆ ಇದ್ರೇ ಮಾತ್ರ ರಾಜ್ಯ ಸೇಫ್.. ಜನ ಎಚ್ಚರವಾಗಿ ಇರಬೇಕು ಎಂದು ವಾರ್ನಿಂಗ್ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *