ಬೆಂಗಳೂರು: ಕೇಟರಿಂಗ್ ಮತ್ತು ಊಟ ಬಡಿಸುವವರಿಗಾಗಿ ಆರೋಗ್ಯ ಇಲಾಖೆ ಮಾರ್ಗಸೂಚಿ ಪ್ರಕಟಿಸಿದೆ. ಕೇಟರಿಂಗ್ ನೀಡುವ ಸಿಬ್ಬಂದಿ ಕಡ್ಡಾಯವಾಗಿ 15 ದಿನಕ್ಕೊಮ್ಮೆ ಕೊರೊನಾ ಪರೀಕ್ಷೆಗೆ ಒಳಗಾಗಬೇಕೆಂದು ಸೂಚಿಸಿದೆ. ಇನ್ನುಳಿದಂತೆ ಕ್ಯಾಟರಿಂಗ್, ಅಡುಗೆ ಸ್ಥಳದಲ್ಲಿ ಮಾಸ್ಕ್, ಗ್ಲೌಸ್, ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಮಾರ್ಗಸೂಚಿಯಲ್ಲಿ ಹೇಳಿದೆ.
Advertisement
ಮಾರ್ಗಸೂಚಿಗಳು:
* ಅಡುಗೆ ತಯಾರಿಕಾ ಸ್ಥಳದಲ್ಲಿ ಉಗುಳುವುದು ನಿಷೇಧ.
* ಕ್ಯಾಟರಿಂಗ್‍ನಲ್ಲಿ ಕೆಲಸ ಮಾಡುವ ಎಲ್ಲರೂ ಆರ್ ಟಿಪಿಸಿಆರ್ ಟೆಸ್ಟ್ ಕಡ್ಡಾಯ ಮಾಡಿಸಿಕೊಳ್ಳಬೇಕು.
* ಹೈ ರಿಸ್ಕ್ ಇರುವ ವ್ಯಕ್ತಿಗಳು, ನಾನಾ ಖಾಯಿಲೆ ಬಳಲುವವರು, ಗರ್ಭಿಣಿ ಮಹಿಳೆಯರು ಇದ್ದರೆ ಹೆಚ್ಚು ನಿಗಾ ಇಡಬೇಕು
* ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
* ಪ್ರವೇಶದ್ವಾರ, ನಿರ್ಗಮನ ದ್ವಾರದಲ್ಲಿ ಸ್ಯಾನಿಟೈಸ್ ವ್ಯವಸ್ಥೆ ಮಾಡಬೇಕು
* ಪಾರ್ಕಿಂಗ್ ಜಾಗ, ಹಾಲ್ ನಲ್ಲಿ ಸಾಮಾಜಿಕ ಅಂತರ ಕಾಪಾಡುವಂತೆ ನಿಗಾವಹಿಸಬೇಕು
* ಸಾಮಾಜಿಕ ಅಂತರಕ್ಕೆ ಸರ್ಕಲ್ ರಚನೆ ಮಾಡಬೇಕು
Advertisement