ನವದೆಹಲಿ: 15 ಸಾವಿರ ರೂ.ಕ್ಕಿಂತ ಕಡಿಮೆ ವೇತನ ಪಡೆಯುವ ಉದ್ಯೋಗಿಗಳ ಸಂಬಳದಲ್ಲಿ ಕಡಿತವಾಗ್ತಿದ್ದ ಪಿಎಫ್ ಮತ್ತು ಇಪಿಎಫ್ ಮೊತ್ತವನ್ನು ಸರ್ಕಾರ ಮೂರು ತಿಂಗಳು ಪಾವತಿಸಲಿದೆ. 72 ಲಕ್ಷ ಉದ್ಯೋಗಿಗಳಿಗೆ ಈ ಯೋಜನೆಯ ಲಾಭ ಸಿಗಲಿದೆ ಎಂಧು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
Collateral free automatic loans to MSMEs worth Rs3 Lakh Crore. These have 4 year tenor, valid up to October 31st, 2020: Finance Minister Nirmala Sitharaman pic.twitter.com/ZgtiKkOzAf
— ANI (@ANI) May 13, 2020
Advertisement
ಕೋವಿಡ್ 19 ನಿಂದಾಗಿ ದೇಶದ ಆರ್ಥಿಕತೆಯನ್ನು ಮೇಲಕ್ಕೆ ಎತ್ತಲು ಪ್ರಧಾನಿ ನರೇಂದ್ರಮೋದಿ ಮಂಗಳವಾರ 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಪ್ರಕಟಿಸಿದ್ದರು. ಇಂದು ಈ ಪ್ಯಾಕೇಜಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಮತ್ತು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಸುದ್ದಿಗೋಷ್ಠಿ ನಡೆಸಿ ಯಾವುದಕ್ಕೆ ಹಣವನ್ನು ಹೇಗೆ ಹಂಚಿಕೆ ಮಾಡಲಾಗುತ್ತದೆ ಎಂಬ ವಿವರವನ್ನು ಪ್ರಕಟಿಸಿದರು.
Advertisement
In a major initiative, we announce Rs 3 lakh crores collateral-free automatic loans for businesses, including SMEs. Borrowers with up Rs 25Cr outstanding and Rs100 Cr turnover are eligible: Finance Minister Nirmala Sitharaman #EconomicPackage pic.twitter.com/56YHRLl1bz
— ANI (@ANI) May 13, 2020
Advertisement
ಸ್ವಾವಲಂಬಿ ಭಾರತಕ್ಕೆ ಮತ್ತು ಮೇಕ್ ಇನ್ ಇಂಡಿಯಾ ಉತ್ತೇಜಿಸಲು 200ಕೋಟಿ ರೂ ಕಡಿಮೆ ಸರ್ಕಾರಿ ಖರೀದಿಗಳಿಗೆ ಜಾಗತಿಕ ಟೆಂಡರ್ ಕರೆಯುವುದಕ್ಕೆ ನಿಷೇಧ. ಮುಂದಿನ 45 ದಿನದೊಳಗೆ ಸರ್ಕಾರಿ ಕಚೇರಿಗಳು, ಸಂಸ್ಥೆಗಳಿಂದ ಎಂಎಸ್ ಎಂ ಇ ಗಳಿಗೆ ಬಾಕಿ ಇರುವ ಮೊತ್ತ ಪಾವತಿಸಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
Advertisement
Ministry of Housing to advise States/UTs &their Regulatory Authorities to extend registration&completion date suo-moto by 6mnts for all registered projects expiring on or after 25Mar,2020 without individual applications.Treat COVID-19 as an event of 'Force Majeure' under RERA:FM pic.twitter.com/FkocypN8D8
— ANI (@ANI) May 13, 2020
ಸುದ್ದಿಗೋಷ್ಠಿಯ ಮುಖ್ಯಾಂಶಗಳು
– ಇಪಿಎಫ್ ಮತ್ತು ಪಿಎಫ್‍ಗಾಗಿ ಸರ್ಕಾರದಿಂದ 2500 ಕೋಟಿ ರೂ. ಹಣ ಮೀಸಲು. ಉದ್ಯೋಗಿಗಳ ಸಂಬಳದಲ್ಲಿ ಇಪಿಎಫ್ ಕಡಿತವನ್ನು ಶೇ.12ರಿಂದ ಶೇ.10ಕ್ಕೆ ಇಳಿಕೆ. ಪಿಎಸ್‍ಯುನಲ್ಲಿ ಶೇ.12ರಷ್ಟು ಇಪಿಎಫ್ ಕಡಿತವಾಗಲಿದೆ.
– ಸಣ್ಣ ಮತ್ತು ಲಘು ಕೈಗಾರಿಕೆಗಳಿಗೆ 3 ಲಕ್ಷ ಕೋಟಿ: ಸಣ್ಣ, ಅತಿ ಸಣ್ಣ ಉದ್ಯಮ ಹೊಸ ವ್ಯವಹಾರಗಳಿಗೆ – ಅಡಮಾನ ರಹಿತ 3 ಲಕ್ಷ ಕೋಟಿ ಸಾಲದ ಮಹತ್ವದ ಘೋಷಣೆ.
– ಕೋವಿಡ್-19 ನಿಂದ ಬಹುತೇಕ ಮಧ್ಯಮ ಮತ್ತು ಸಣ್ಣ ಉದ್ಯಮಗಳ ಹೊಣೆಗಾರಿಕೆ ಹೆಚ್ಚಾಗುತ್ತಿದೆ. ಕಚ್ಚಾ ವಸ್ತುಗಳು ಖರೀದಿ ಮತ್ತು ವ್ಯವಹಾರಗಳನ್ನು ಪುನಃ ಆರಂಭಿಸಲು ಉತ್ತೇಜನ ನೀಡುವ ಅವಶ್ಯಕತೆ ಇದೆ.
In a major relief to contractors, all Central agencies to provide an extension of up to 6 months, without cost to contractor, to obligations like completion of work covering construction and goods and services contracts: Finance Minister Nirmala Sitharaman pic.twitter.com/xkdsKobK3Z
— ANI (@ANI) May 13, 2020
– ವ್ಯವಹಾರ/ಎಂಎಸ್‍ಎಂಇ ಗಳಿಗೆ ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿಗಳಿಂದ ಅವರ ಔಟ್ ಸ್ಟ್ಯಾಂಡಿಂಗ್ (29.02.2020) ಕ್ರೆಡಿಟ್ ನ ಶೇ.20ರಷ್ಟು ಸಾಲ ಸೌಲಭ್ಯ. ಸಾಲ ಪಡೆಯುವ ವ್ಯವಹಾರದ ಟರ್ನ್ ಓವರ್ 25 ಕೋಟಿಯಿಂದ 100 ಕೋಟಿ ರೂ. ಒಳಗಿರಬೇಕು. ಸಾಲದ ಅವಧಿ 4 ವರ್ಷ ಇರಲಿದ್ದು, ಮೊದಲ 12 ತಿಂಗಳ ಅಸಲು ಪಾವತಿ ಮೇಲೆ ನಿಷೇಧ
– ಬ್ಯಾಂಕ್ ಮತ್ತು ಎನ್‍ಬಿಎಫ್‍ಸಿ ಅಸಲು ಮತ್ತು ಬಡ್ಡಿಯ ಮೇಲೆ ಶೇ.100ರಷ್ಟು ಗ್ಯಾರೆಂಟಿ. ಅಕ್ಟೋಬರ್ 31, 2020ರಿಂದ ಈ ಯೋಜನೆ ಆರಂಭವಾಗಲಿದೆ. ಈ ಯೋಜನೆಯಿಂದ 45 ಲಕ್ಷ ಘಟಕಗಳಿಗೆ ಪ್ರೋತ್ಸಾಹ.
– ಜಾಗತಿಕ ಟೆಂಡರ್ ಇಲ್ಲ: ಸ್ಥಳೀಯ ಮತ್ತು ಸಣ್ಣ ಹಾಗೂ ಲಘು ಕಂಪನಿಗಳು ಜಾಗತಿಕ ಮಾರುಕಟ್ಟೆಯ ಪೈಪೋಟಿಯಿಂದ ನಷ್ಟಕ್ಕೆ ಒಳಗಾಗಿದ್ದವು. ಹಾಗಾಗಿ ಜಾಗತಿಕ ಟೆಂಡರ್ ನಿಷೇಧಿಸಲಾಗಿದೆ. ಈ ಯೋಜನೆ ಸಂಪೂರ್ಣ ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಬರಲಿದೆ. ಜಾಗತಿಕ ಟೆಂಡರ್ ನಿಷೇಧ ಸಣ್ಣ ಹಾಗೂ ಲಘು ಉದ್ಯಮಗಳ ಚೇತರಿಕೆಗೆ ಕಾರಣವಾಗಲಿದೆ.
Government launches a Rs 30,000 crore Special Liquidity Scheme for non-banking financial companies, microfinance companies, housing finance companies: FM Sitharaman pic.twitter.com/G4y4mmyeHI
— ANI (@ANI) May 13, 2020
– 30 ಸಾವಿರ ಕೋಟಿ ಅನುದಾನದಲ್ಲಿ ಸ್ಪೆಷಲ್ ಲಿಕ್ವಿಡಿಟಿ ಸ್ಕೀಮ್ ಆರಂಭಿಸಲಾಗುವುದು. ಭಾಗಶಃ ಕ್ರೆಡಿಟ್ ಗ್ಯಾರೆಂಟಿ ಸ್ಕೀಮ್ 2.0 ಮೂಲಕ 45 ಸಾವಿರ ಕೋಟಿ ಬಂಡವಾಳ ಹೂಡಿಕೆ. ವಿದ್ಯುತ್ ಪ್ರಸರಣ ಕಂಪನಿಗಳಿಗಾಗಿ 90 ಸಾವಿರ ಕೋಟಿ ರೂ. ಅನುದಾನದ ಘೋಷಣೆ. ಸರ್ಕಾರಿ ಗುತ್ತಿಗೆಗಳ ಎಲ್ಲ ಅವಧಿಯನ್ನು ಆರು ತಿಂಗಳಿಗೆ ವಿಸ್ತರಣೆಯ ಮಹತ್ವದ ಘೋಷಣೆಯನ್ನು ಮಾಡಿದೆ.