ಅಹಮದಾಬಾದ್: ಇಂಗ್ಲೆಂಡ್ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಬ್ಯಾಟಿಂಗ್‍ನಲ್ಲಿ ಫ್ಲಾಪ್ ಆದ ಕನ್ನಡಿಗ ಕೆ.ಎಲ್ ರಾಹುಲ್ ಫೀಲ್ಡಿಂಗ್‍ನಲ್ಲಿ ತಮ್ಮ ಖದರ್ ತೋರ್ಪಡಿಸುತ್ತಿದ್ದಾರೆ.
Advertisement
ಟಿ-20 ಪಂದ್ಯಗಳಲ್ಲಿ ಬ್ಯಾಟ್ಸ್‌ಮ್ಯಾನ್‌ಗಳ ಅಬ್ಬರದ ಹೊಡಿಬಡಿ ಆಟದ ಮುಂದೆ ಬೌಲರ್ ಗಳು ಮಂಕಾಗುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಯಾವುದೇ ತಂಡದಲ್ಲೂ ಕೂಡ ಕ್ಷೇತ್ರ ರಕ್ಷಣೆ ಉತ್ತಮವಾಗಿದ್ದರೆ ಹಲವು ರನ್‍ಗಳಿಗೆ ಕಡಿವಾಣ ಹಾಕಬಹುದಾಗಿದೆ. ಇದರಂತೆ ಕಳೆದ ರಾತ್ರಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡದ ಯುವ ಆಟಗಾರ ಕನ್ನಡಿಗ ರಾಹುಲ್ ತಮ್ಮ ಅದ್ಭುತವಾದ ಫೀಲ್ಡಿಂಗ್‍ನಿಂದಾಗಿ ಬಟ್ಲರ್ ಸಿಡಿಸಿದ ಸಿಕ್ಸರ್ ನ್ನು ತಡೆದು 4 ರನ್‍ಗಳನ್ನು ಉಳಿತಾಯ ಮಾಡಿದ್ದಾರೆ.
Advertisement
Stunning effort by KL Rahul! Spectacular fielding!! #INDvENG #TeamIndia #KLRahul #NarendraModiStadium @klrahul11 @JayShah @BCCI @GCAMotera pic.twitter.com/r2ZRegHpxt
— Dhanraj Nathwani (@DhanrajNathwani) March 13, 2021
Advertisement
ಭಾರತ ತಂಡ ನೀಡಿದ 125 ರನ್‍ಗಳ ಗುರಿ ಬೆನ್ನಟ್ಟುತ್ತಿದ್ದ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ 4 ಓವರ್ ಎಸೆಯಲು ಬಂದ ಅಕ್ಷರ್ ಪಟೇಲ್ ಎಸೆತವನ್ನು ಸಿಕ್ಸರ್ ಗಟ್ಟಲು ಪ್ರಯತ್ನಿಸಿದರು. ಆದರೆ ಬೌಂಡರಿ ರೋಪ್ ಹತ್ತಿರ ಫೀಲ್ಡಿಂಗ್ ಮಾಡುತ್ತಿದ್ದ ರಾಹುಲ್ ಹಾರಿ ಸಿಕ್ಸರ್ ಹೋಗುತ್ತಿದ್ದ ಬಾಲ್‍ನ್ನು ಹಿಡಿದು ಕೆಳಕ್ಕೆ ಎಸೆದು 4 ರನ್‍ಗಳನ್ನು ಸೇವ್ ಮಾಡಿದರು. ಆದರೂ ಭಾರತ ಇಂಗ್ಲೆಂಡ್ ವಿರುದ್ಧ 8 ವಿಕೆಟ್‍ಗಳ ಸೋಲು ಅನುಭವಿಸಿದೆ. ಆದರೆ ಇತ್ತ ರಾಹುಲ್ ಅವರ ಫೀಲ್ಡಿಂಗ್ ಗಮನಿಸಿದ ಕ್ರಿಕೆಟ್ ಅಭಿಮಾನಿಗಳು ಸೂಪರ್ ಡೂಪರ್ ಕ್ಷೇತ್ರ ರಕ್ಷಣೆಗೆ ಮನಸೋತು ವೀಡಿಯೋದ ತುಣುಕುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಾಹುಲ್‍ರನ್ನು ಅಭಿನಂದಿಸಿದ್ದಾರೆ.
Advertisement