ಬೆಂಗಳೂರು: ನಗರದಲ್ಲಿ ಮೂರನೇ ಅಲೆಯ ಭೀತಿಯ ಮಧ್ಯೆಯೂ ಜನ ಮೈ ಮರೆಯುತ್ತಿದ್ದಾರೆ. ಕೆ.ಆರ್.ಮಾರ್ಕೆಟ್ ನಲ್ಲಿ ವ್ಯಾಪಾರ ಮಾಡುವ ಧಾವಂತದಲ್ಲಿ ವ್ಯಾಪಾರಸ್ಥರು ಹಾಗೂ ಗ್ರಾಹಕರು ಸಾಮಾಜಿಕ ಅಂತರವನ್ನ ಉಲ್ಲಂಘಿಸಿ, ಹಬ್ಬುವಿಕೆಗೆ ಅವಕಾಶ ಮಾಡಿಕೊಡುತ್ತಿದ್ದಾರೆ.
ಕಾಲಿಡೋದಕ್ಕೂ ಜಾಗವಿಲ್ಲದಷ್ಟು ಜನಸಂದಣಿ ಕೆ. ಆರ್ ಮಾರ್ಕೆಟ್ ನಲ್ಲಿ ಸೇರಿತ್ತು. ಮಾರ್ಷಲ್ಸ್ ಗಳು ಫೀಲ್ಡ್ ಗಿಳಿದು ದಂಡ ಪ್ರಯೋಗಕ್ಕೆ ಮುಂದಾದ್ರೂ ಜನ ಡೋಂಟ್ ಕೇರ್ ಅಂತಿದ್ದಾರೆ. ಮಾರ್ಕೆಟ್ ನಲ್ಲಿ ಹೆಚ್ಚು ಜನರ ಸೇರಿದ್ದರಿಂದ ಟ್ರಾಫಿಕ್ ಜಾಮ್ ಕೂಡ ಉಂಟಾಯ್ತು.
Advertisement
Advertisement
ನೈಟ್ ಕರ್ಫ್ಯೂ ವೇಳೆ ರಾಜಾಜಿನಗರದಿಂದ ಶಂಕರಮಠಕ್ಕೆ ಹೋಗುವ ರಸ್ತೆಯಲ್ಲಿ, ಬಸವೇಶ್ವರ ನಗರ ಠಾಣೆಯ ಪೊಲೀಸರು ಫುಲ್ ಅಲರ್ಟ್ ಆಗಿದ್ರು. ಪ್ರತಿಯೊಂದು ವಾಹನಗಳನ್ನು ತಡೆದು ತಪಾಸಣೆ ಮಾಡಿ, ಅನಗತ್ಯವಾಗಿ ರಸ್ತೆಗಳಿದಿದ್ದ ವಾಹನಗಳ ಸವಾರರಿಗೆ, ವಾಹನಗಳನ್ನ ಸೀಜ್ ಮಾಡುವ ಎಚ್ಚರಿಕೆ ನೀಡಿದ್ರು. ಅವಧಿ ಮುಗಿದ ಬಳಿಕವೂ ಬಾರ್ ಗಳತ್ತ ಬರುತ್ತಿದ್ದ ಜನರಿಗೆ ಕ್ಲಾಸ್ ತೊಗೊಂಡು ವಾರ್ನ್ ಮಾಡಿ ಕಳಿಸಿದ್ರು.
Advertisement
Advertisement
ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ. 8 ಜಿಲ್ಲೆಗಳಿಗೆ ಪ್ರತ್ಯೇಕವಾಗಿ ಪ್ರಕಟಿಸಲಾಗಿರುವ ವಾರಾಂತ್ಯ ಮಾರ್ಗಸೂಚಿ ಆಗಸ್ಟ್ 16ರವರೆಗೂ ಜಾರಿಯಲ್ಲಿ ಇರುತ್ತದೆ. ಇದೀಗ 8 ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಜಾರಿಯಾಗಿದೆ. ಅಲ್ಲದೇ, ಇಡೀ ರಾಜ್ಯಕ್ಕೆ ಅನ್ವಯ ಆಗುವಂತೆ ರಾತ್ರಿ ಕರ್ಫ್ಯೂ ಅವಧಿಯನ್ನು ಹೆಚ್ಚಿಸಲಾಗಿದೆ.