– ಗ್ರಾಹಕರಿಗೆ ಹಲವು ಆಫರ್
ಬೆಂಗಳೂರು: ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್‍ನ ಐದನೇ ಮಳಿಗೆ ಭಾನುವಾರ ಉದ್ಘಾಟನೆಗೊಂಡಿತು. ಈ ಮೂಲಕ ನಗರದ ಕೆ.ಆರ್.ಪುರಂನಲ್ಲಿ ಸಾಯಿ ಗೋಲ್ಡ್ ಶೋ ರೂಮ್ ಶುಭಾರಂಭಗೊಂಡಿದೆ.
ಮಳಿಗೆಯ ಉದ್ಘಾಟನೆಯನ್ನು ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್ ರಂಗನಾಥ್, ಸಿಇಒ ಅರುಣ್, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ಸಚಿವ ಭೈರತಿ ಬಸವರಾಜ್ ಹಾಗೂ ನಟ ಧ್ರುವ ಸರ್ಜಾ ನೆರವೇರಿಸಿದ್ರು. ಪ್ರಾರಂಭೋತ್ಸವದ ಅಂಗವಾಗಿ ಗ್ರಾಹಕರಿಗೆ ಹಲವು ಆಫರ್ ಗಳನ್ನು ನೀಡುತ್ತಿದ್ದು, ದುಬೈ ದರದಲ್ಲಿ ಚಿನ್ನಾಭರಣದ ರೇಟ್ ನಿಗದಿಪಡಿಸಲಾಗಿದೆ.
Advertisement
ಪ್ರತಿ 1 ಕೆಜಿ ಬೆಳ್ಳಿ ವಸ್ತುಗಳ ಖರೀದಿಗೆ 2 ಸಾವಿರ ರೂಪಾಯಿ ರಿಯಾಯಿತಿ ನೀಡುತ್ತಿದೆ. ಹಾಗೆಯೇ 50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣ ಖರೀದಿಸಿದ್ರೆ ಉಚಿತ ಚಿನ್ನದ ನಾಣ್ಯ ಪಡೆಯಬಹುದಾಗಿದೆ. ಬೆಳ್ಳಿ ಆಭರಣಗಳ ಮೇಲೆ ಶೇ.5 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ, ಬೆಂಗಳೂರು ನಗರದ ನಾಗರಿಕರಿಗೆ ಆಭರಣ ಮಳಿಗೆಯ ಸೇವೆ ಸಲ್ಲಿಸುತ್ತಿದ್ದಾರೆ. ಈ ಸ್ಪರ್ಧಾ ಯುಗದಲ್ಲಿ ಜನಸಾಮಾನ್ಯರಿಗೆ ಅನುಕೂಲವಾಗುವಂತಹ ರೀತಿಯಲ್ಲಿ ಚಿನ್ನಾಭರಣಗಳನ್ನು ನೀಡುತ್ತಿದ್ದಾರೆ. ಕೆಆರ್ ಪುರಂ ಭಾಗದಲ್ಲಿ 5ನೇ ಮಳಿಗೆಯನ್ನು ತೆರೆಯುವ ಮೂಲಕ ಈ ಭಾಗದ ಜನರಿಗೆ ಅನುಕೂಲಗಳನ್ನು ಮಾಡಿದ್ದಾರೆ ಎಂದು ಹೇಳುವ ಮೂಲಕ ಶರವಣ ಅವರಿಗೆ ಶುಭಹಾರೈಸಿದರು.
Advertisement
Advertisement
ನಟ ಧ್ರುವ ಸರ್ಜಾ ಮಾತಾಡಿ, ಹಿಂದಿನಿಂದಲೂ ಸಾಯಿ ಗೋಲ್ಡ್ ಪ್ಯಾಲೇಸ್ ತುಂಬಾ ಫೇಮಸ್. ಇದರ ಐದನೇ ಶಾಖೆ ಇಂದು ಕೆಆರ್ ಪುರಂನಲ್ಲಿ ಶುಭಾರಂಭಗೊಂಡಿದೆ. ಇದರ ಹಿಂದೆ ಶರವಣ ಅವರ ಶ್ರಮ ಸಾಕಷ್ಟು ಇದೆ. ಮುಂದೆ ಇಂತಹ ಅನೇಕ ಶಾಖೆಗಳು ಆರಂಭಗೊಳ್ಳಲಿ ಎಂದು ಶುಭ ಹಾರೈಸಿದರು.
ಗ್ರಾಹಕರಿಗೆ ಕೊಡುಗೆ:
ವೈವಿಧ್ಯಮಯವಾದ ಆಭರಣಗಳನ್ನು ಸಂಗ್ರಹಿಸಿ ಮಾರಾಟ ಮಾಡುತ್ತಿರುವ ಸಾಯಿ ಗೋಲ್ಡ್ ಪ್ಯಾಲೇಸ್ ತನ್ನ ಎಲ್ಲ ಮಳಿಗೆಗಳಲ್ಲಿ ವೇಸ್ಟೇಜ್ ಮತ್ತು ಸ್ಟೋನ್ ಶುಲ್ಕ ವಿಧಿಸುತ್ತಿಲ್ಲ. ಹೊಸದಾಗಿ ಆರಂಭಗೊಳ್ಳಲಿರುವ ಮಳಿಗೆಯಲ್ಲಿ ಗ್ರಾಹಕರು ದುಬೈ ದರದಲ್ಲಿ ಚಿನ್ನಾಭರಣ ಖರೀದಿ ಮಾಡಬಹುದು. ಪ್ರತಿ 1 ಕೆಜಿ ಬೆಳ್ಳಿ ವಸ್ತು ಖರೀದಿಸಿದರೆ 2 ಸಾವಿರ ರೂ. ರಿಯಾಯಿತಿ ಪಡೆಯಬಹುದು.
50 ಸಾವಿರಕ್ಕಿಂತ ಹೆಚ್ಚಿನ ವಜ್ರಾಭರಣ ಖರೀದಿಸಿದರೆ ಚಿನ್ನದ ನಾಣ್ಯ ಉಚಿತವಾಗಿ ಸಿಗಲಿದೆ. ಅಷ್ಟೇ ಅಲ್ಲದೇ ಬೆಳ್ಳಿ ಆಭರಣಗಳ ಖರೀದಿಯ ಮೇಲೆ ಶೇ.5 ರಷ್ಟು ರಿಯಾಯಿತಿ ಸಿಗಲಿದೆ.
ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಉತ್ತಮ ಸಂದರ್ಭ. ಚಿನ್ನದ ಬೆಲೆ ಯಾವ ಸಮಯದಲ್ಲಿ ಏರಿಕೆ ಆಗಲಿದೆ ಎಂದು ಊಹಿಸುವುದೇ ಕಷ್ಟ. ಹೀಗಾಗಿ ನಾವು ಕೆ.ಆರ್.ಪುರಂ ಮಳಿಗೆಯಲ್ಲಿ ಹೆಚ್ಚಿನ ರಿಯಾಯಿತಿಗಳನ್ನು ಪ್ರಕಟಿಸಿದ್ದು ಗ್ರಾಹಕರು ಇದರ ಲಾಭ ಪಡೆಯಬೇಕು ಎಂದು ಶ್ರೀ ಸಾಯಿ ಗೋಲ್ಡ್ ಪ್ಯಾಲೇಸ್ ಮಾಲೀಕರು ಮತ್ತು ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಷನ್ ಅಧ್ಯಕ್ಷ ಡಾ.ಟಿ.ಎ ಶರವಣ ಹೇಳಿದರು.