ಚೆನ್ನೈ: ಕೋವಿಡ್-19 ಲಸಿಕೆ ಅಭಿವೃದ್ಧಿಗಾಗಿ ವಿಜ್ಞಾನಿಗಳು ಮತ್ತು ವೈದ್ಯರು ನಡೆಸಿದ ಎಲ್ಲಾ ಪ್ರಯತ್ನಗಳನ್ನು ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಶ್ಲಾಘಿಸಿ, ಮುಂದಿನ ಕೆಲ ದಿನಗಳಲ್ಲಿ ಲಸಿಕೆಯನ್ನು ದೇಶದ ಜನರಿಗೆ ನೀಡಲಾಗುವುದು ಎಂದರು.
ದೇಶದಲ್ಲಿ ನಡೆಯುತ್ತಿರುವ ಎರಡನೇ ಸುತ್ತಿನ ಡ್ರೈ ರನ್ ಲಸಿಕಾ ಚಾಲನೆಯ ವ್ಯವಸ್ಥೆಯನ್ನು ಪರಿಶೀಲಿಸಲು ಚೆನ್ನೈನ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿ ಮಾಧ್ಯಮದವರೊಂದಿಗೆ ಮಾತನಾಡಿದರು.
Advertisement
Advertisement
ಅಲ್ಪಾಕಾಲವಧಿಯಲ್ಲಿ ಭಾರತ ಲಸಿಕೆಯನ್ನು ಅಭಿವೃದ್ಧಿಪಡಿಸಿ ಉತ್ತಮ ಸಾಧನೆ ಮಾಡಿದೆ. ಮುಂದಿನ ಕೆಲವು ದಿನಗಳಲ್ಲಿ ನಾವು ಈ ಲಸಿಕೆಯನ್ನು ನಮ್ಮ ದೇಶವಾಸಿಗಳಿಗೆ ನೀಡಲು ತಯಾರಿ ನಡೆಸುತ್ತಿದ್ದೇವೆ. ಮೊದಲು ನಮ್ಮ ಆರೋಗ್ಯ ಕಾರ್ಯಕರ್ತರಿಗೆ ನಂತರ ಕೊರೊನಾದ ಸಂದರ್ಭ ಮುಂಚೂಣಿಯಲ್ಲಿ ನಿಂತು ಕಾರ್ಯನಿರ್ವಹಿಸಿದ ಕೊರೊನಾ ವಾರಿಯರ್ಸ್‍ಗೆ ನೀಡಲಾಗುದು ಎಂದು ತಿಳಿಸಿದರು.
Advertisement
Advertisement
ಪ್ರತಿಯೊಂದು ವಿವರಗಳನ್ನು ರಾಷ್ಟ್ರಮಟ್ಟದಿಂದ ತಳ ಮಟ್ಟದ ಜನರಿಗೆ ತಲುಪಿಸುವುದು ಖಚಿತ. ಈಗಾಗಲೇ ಲಕ್ಷಾಂತರ ಆರೋಗ್ಯ ಕಾರ್ಯಕರ್ತರು ತರಬೇತಿ ಪಡೆದಿದ್ದಾರೆ. ಬಾಕಿ ಇರುವವರಿಗೆ ತರಬೇತಿ ಪ್ರಕ್ರಿಯೆ ಮುಂದುವರಿಯುತ್ತಿದೆ ಎಂದರು.
ದೇಶದಲ್ಲಿ ಮೊದಲ ಸುತ್ತಿನ ಡ್ರೈರನ್ ಜನವರಿ 2ರಂದು ಸುಮಾರು 125 ಜಿಲ್ಲೆಗಳಲ್ಲಿ ಮಾಡಿದ್ದೇವೆ. ಇದೀಗ ಎರಡನೇ ಸುತ್ತಿನ ಡ್ರೈರನ್ 33 ರಾಜ್ಯಗಳಲ್ಲಿ ಇಂದು ನಡೆಸುತ್ತಿದ್ದೇವೆ. ಮೊದಲು ಉತ್ತರ ಪ್ರದೇಶ, ಹರಿಯಾಣ ಮತ್ತು ಅರುಣಾಚಲ ಪ್ರದೇಶದಲ್ಲಿ ಡ್ರೈರನ್ ನಡೆಸಿದ್ದೇವು ಈ ರಾಜ್ಯಗಳನ್ನು ಹೊರತು ಪಡಿಸಿ ಎಲ್ಲಾ ರಾಜ್ಯಗಳಲ್ಲೂ ಡ್ರೈರನ್ ನಡೆಸುತ್ತೇವೆಂದು ಮಾಹಿತಿ ನೀಡಿದರು.
Watch Now!
Union Minister Dr Harsh Vardhan addresses the media at Govt General Hospital, Chennai on the ongoing dry run of administering #COVID19 vaccine.@PMOIndia @MoHFW_INDIA @EPSTamilNadu @CMOTamilNadu @Vijayabaskarofl
— DrHarshVardhanOffice (@DrHVoffice) January 8, 2021
ಕೋವಿಡ್-19 ಲಸಿಕಾ ಕಾರ್ಯಕ್ರಮ ಸುಗಮವಾಗಿ ಮತ್ತು ಸೂಸೂತ್ರವಾಗಿ ಫಲಾನುಭವಿಗಳಿಗೆ ದೊರಕಲು ಆರೋಗ್ಯ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಎನ್‍ಜಿಒ ಗಳು ಕೈ ಜೋಡಿಸಿ ಎಂದು ವಿನಂತಿಸಿಕೊಂಡರು.
3 ದಿನಗಳ ಪೋಲಿಯೋ ರೋಗ ನಿರೋಧಕ ಲಸಿಕಾ ಆಭಿಯಾನ ಜನವರಿ 17 ರಂದು ಪ್ರಾರಂಭಗೊಳ್ಳಲಿದೆ. ಇದು ಪೋಲಿಯೋ ಮತ್ತು ದೇಶದ ಒಟ್ಟಾರೆ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.