ಬೆಂಗಳೂರು: ಕೊರೊನಾ ಬಂದ ತಕ್ಷಣ ಎಲ್ಲವನ್ನೂ ನಿಲ್ಲಿಸಲಿಕ್ಕೆ ಆಗುವುದಿಲ್ಲ. ಕೊರೊನಾದಿಂದ ಕೆಲ ಕೇಂದ್ರ ಸಚಿವರು, ಸಂಸದರು ನಿಧನರಾದ್ರು. ಹಾಗಂತ ಲೋಕಸಭೆ ಮುಚ್ಚಕ್ಕಾಗುತ್ತಾ?, ರೈತರೂ ಕೋವಿಡ್‍ನಿಂದ ಮೃತಪಟ್ಟಿದ್ದಾರೆ. ಹಾಗಂತ ಉಳುಮೆ ಮಾಡೋದನ್ನು ನಿಲ್ಲಿಸಿ ಅಂದ್ರೆ ಆಗುತ್ತಾ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
Advertisement
ನಗರದ ಸ್ಟಾರ್ ಹೊಟೇಲಿನಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಸಭೆಯಲ್ಲಿ ಮಾತನಾಡುತ್ತಾ ವಿದ್ಯಾಗಮ ಯೋಜನೆ ನಿಲ್ಲಿಸುವ ವಿಚಾರಕ್ಕೆ ಪ್ರತಿಕ್ರಿಯಿಸಿ, ವಿದ್ಯಾಗಮ ಯೋಜನೆಗೂ ಕೋವಿಡ್ ಗೂ ಸಂಬಂಧ ಇಲ್ಲ. ವಿದ್ಯಾಗಮ ಯೋಜನೆ ಇಲ್ಲದಿರುವ ಸಂದರ್ಭದಲ್ಲಿಯೂ ಕೋವಿಡ್ ಬಂದಿದೆ. ಕೊರೊನಾ ಬಂತು ಅಂತ ಯೋಜನೆ ನಿಲ್ಲಿಸಕ್ಕಾಗುತ್ತಾ ಎಂದು ಹೇಳುವ ಮೂಲಕ ವಿದ್ಯಾಗಮ ಯೋಜನೆ ನಿಲ್ಲಿಸಲ್ಲ ಅಂತ ಪರೋಕ್ಷವಾಗಿ ತಿಳಿಸಿದ್ದಾರೆ.
Advertisement
Advertisement
ರಾಜ್ಯದಲ್ಲಿ ಶಾಲೆಗಳ ಆರಂಭ ಮಾಡಬೇಕಾ ಬೇಡವಾ ಅನ್ನುವ ಚರ್ಚೆ ನಡೀತಿದೆ. ಶಾಲಾರಂಭ ಬಗ್ಗೆ ಸರ್ಕಾರ ಎಲ್ಲರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೆ. ಪೋಷಕರು, ತಜ್ಞರ ಜೊತೆ ಸರ್ಕಾರ ಚರ್ಚೆ ಮಾಡ್ತಿದೆ. ಎಲ್ಲರ ಜೊತೆ ಚರ್ಚಿಸಿ ಸೂಕ್ತ ನಿರ್ಧಾರ ತಗೊಳ್ಳುತ್ತೆ. ನನ್ನ ವೈಯಕ್ತಿಕ ಅಭಿಪ್ರಾಯ ಶಾಲೆ ಆರಂಭ ಬೇಡ ಅನ್ನೋದಾಗಿದೆ ಎಂದರು.
Advertisement
ವಿಧಾನ ಪರಿಷತ್ ಗೆ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾಗಿ ಬಂದ ಜನಪ್ರತಿನಿಧಿಗಳ ಜೊತೆ ಇಲಾಖೆಗೆ ಸಂಬಂಧಿಸಿದ ಸಭೆಯಲ್ಲಿ ಗ್ರಾಮೀಣ ಭಾಗದ ಸಮಸ್ಯೆಗಳ ಕುರಿತು ಸುದೀರ್ಘವಾಗಿ ಚರ್ಚೆ ನಡೆದಿದೆ. ಈ ಸಭೆಯಲ್ಲಿ ವಿಧಾನ ಪರಿಷತ್ ವಿರೊಧ ಪಕ್ಷದ ನಾಯಕರಾದ ಎಸ್ ಆರ್ ಪಾಟೀಲ, ವಿಧಾನ ಪರಿಷತ್ತಿನ ಮುಖ್ಯ ಸಚೇತಕರಪಾದ ಮಹಾಂತೇಶ ಕವಟಗಿಮಠ, ವಿಧಾನ ಪರಿಷತ್ತಿನ ವಿರೊಧ ಪಕ್ಷದ ಮುಖ್ಯ ಸಚೇತಕರಾದ ಎಂ.ನಾರಾಯಣಸ್ವಾಮಿ, ವಿ ಪ ಸಚೇತಕರಾದ ಅಪ್ಪಾಜಿಗೌಡರವರು ಹಾಗೂ ವಿಧಾನ ಪರಿಷತ್ ಸದಸ್ಯರುಗಳು ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಎಲ್.ಎ.ಅತೀಕ್ ಮತ್ತು ಸಚಿವರ ವಿಶೇಷಾಧಿಕಾರಿ ಜಿ.ಜಯರಾಮ್ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.