– ರುಂಡ ಕತ್ತರಿಸಿ ಬರ್ಬರವಾಗಿ ಕೊಲೆ
ಬೆಳಗಾವಿ: ಡಿಸೆಂಬರ್ 25ರಂದು ನಡೆದಿದ್ದ ಫೋಟೋಗ್ರಾಫರ್ ಕೊಲೆ ಪ್ರಕರಣವನ್ನ ಬೆಳಗಾವಿ ಜಿಲ್ಲೆಯ ಖಾನಾಪುರ ಪೊಲೀಸರು ಬೇಧಿಸಿದ್ದು, ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಿ.25ರಂದು ಜಾಂಬೋಟಿಯಲ್ಲಿ ವಿಜಯ್ ಅವಲಕ್ಕಿ ಎಂಬವರ ಕೊಲೆಯಾಗಿತ್ತು. ಮೃತ ವಿಜಯ್ ಫೋಟೋ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ರಾಮಚಂದ್ರ ಸೇರಿ ಐವರನ್ನ ಪೊಲೀಸರು ಬಂಧಿಸಿದ್ದಾರೆ. ವಿಜಯ್ ನನ್ನು ಡಿ.25 ರಂದು ಬರ್ತ್ ಡೇ ಫೋಟೋ ತೆಗೆಯಬೇಕಿದೆ ಎಂದು ಆರೋಪಿ ರಾಮಚಂದ್ರ ಕರೆದುಕೊಂಡು ಹೋಗಿದ್ದನು. ಸಂಜೆ ಖಾನಾಪುರ ಅರಣ್ಯ ಪ್ರದೇಶದಲ್ಲಿ ರಾಮಚಂದ್ರ ತನ್ನ ಸಹಚರರ ಜೊತೆ ಸೇರಿ ವಿಜಯ್ ರುಂಡ ಕತ್ತರಿಸಿ ಕೊಲೆಗೈದಿದ್ದನು. ಕೊಲೆಯ ಬಳಿಕ ಆರೋಪಿಗಳೆಲ್ಲರೂ ಎಸ್ಕೇಪ್ ಆಗಿದ್ದರು.
ಕೊಲೆ ಮಾಡಿದ್ಯಾಕೆ?: ಪ್ರಕರಣದ ಆರೋಪಿ ವಿಜಯ್ ಸ್ಟುಡಿಯೋದಲ್ಲಿ ಕೆಲಸ ಮಾಡಿಕೊಂಡಿದ್ದನು. ರಾಮಚಂದ್ರ ಮಾಲಕ ವಿಜಯ್ ಪತ್ನಿ ಜೊತೆ ಅಕ್ರಮ ಸಂಬಂಧ ಹೊಂದಿದ್ದನು. ಈ ವಿಷಯ ತಿಳಿದ ವಿಜಯ್ ಆರೋಪಿಯನ್ನ ಕೆಲಸದಿಂದ ತೆಗೆದಿದ್ದರು. ಕೆಲಸದಿಂದ ತೆಗೆದ ಕೋಪದಲ್ಲಿ ಕೊಲೆ ಮಾಡಿದ್ದಾನೆ ಎಂದು ಮಾಹಿತಿ ಲಭ್ಯವಾಗಿದೆ.