ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಡಾಲರ್ಸ್ ಕಾಲೋನಿಯ ಧವಳಗಿರಿಯ ಮನೆ ನವೀಕರಣ ಹಿನ್ನೆಲೆ ಇಂದು ಮನೆ ನೋಡಲು ಆಗಮಿಸಿದ್ದರು. ಈ ವೇಳೆ ಮಾಧ್ಯಮಗಳು ಲಾಕ್‍ಡೌನ್ ಬಗ್ಗೆ ಕೇಳಿದ ಪ್ರಶ್ನೆಗೆ, ಕೊರೊನಾ ನಿಯಂತ್ರಣವಾಗದ ಹಿನ್ನೆಲೆಯಲ್ಲಿ ಲಾಕ್‍ಡೌನ್ ವಿಸ್ತರಣೆ ಮಾಡುತ್ತೇವೆ ಎಂದು ಉತ್ತರಿಸಿದರು.
Advertisement
Advertisement
ಹಳ್ಳಿಗಳಲ್ಲಿ ಇನ್ನೂ ಕೊರೊನಾ ಕಡಿಮೆ ಆಗಿಲ್ಲ. ಲಾಕ್‍ಡೌನ್‍ನಲ್ಲಿ ಏನು ಮಾಡಬೇಕು ಎನ್ನುವುದರ ಬಗ್ಗೆ ಇಂದು ಸಂಜೆ ತೀರ್ಮಾನ ಮಾಡುತ್ತೇವೆ. ಕೈಗಾರಿಕೆಗಳ ರಫ್ತು ಘಟಕಗಳಿಗೆ ಮಾತ್ರ ಅನುಮತಿ ನೀಡುತ್ತೇವೆ. ಕೆಲವೊಂದಕ್ಕೆ ಮಾತ್ರ ವಿನಾಯಿತಿ ಕೊಡುವ ಬಗ್ಗೆ ಸಂಜೆ ಚರ್ಚೆ ಮಾಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: ಹಂತ ಹಂತವಾಗಿ ಅನ್‍ಲಾಕ್ – ಯಾವ ಸೇವೆ ಯಾವಾಗ ಆರಂಭ?
Advertisement
Advertisement
ರಫ್ತು ಆಧಾರಿತ ಸೇವೆ ನಾಳೆಯಿಂದ ಆರಂಭವಾಗಲಿದೆ. ಲಾಕ್ ಡೌನ್ ಸಡಿಲ ಹೇಗೆ ಮಾಡಬೇಕು ಎನ್ನುವುದರ ಬಗ್ಗೆಯೂ ಚರ್ಚೆ ಮಾಡುತ್ತೇವೆ. ವಿಸ್ತರಣೆ ಮಾಡಿ ಬಿಗಿ ಕ್ರಮ ತೆಗೆದುಕೊಂಡು ಹೇಗೆ ಹೋಗಬೇಕು ಎಂಬುದರ ಬಗ್ಗೆ ಉನ್ನತ ಅಧಿಕಾರಿಗಳ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು. ಲಾಕ್‍ಡೌನ್ ಎಷ್ಟು ದಿನ ವಿಸ್ತರಣೆಯಾಗಲಿದೆ ಎಂಬುದನ್ನು ಸಿಎಂ ತಿಳಿಸಿಲ್ಲ.