ಬೆಂಗಳೂರು: ಕೋವಿಡ್ ಸಂಕಷ್ಟದಿಂದಾಗಿ ಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ಹಾಗೂ ಆಹಾರ ಪೆÇಟ್ಟಣ್ಣ ನೀಡುವ ಮೂಲಕ ರಾಗಿಣಿ ದ್ವಿವೇದಿ ನೆರವಾಗುತ್ತಿದ್ದಾರೆ. ಲಸಿಕೆ ಹಾಕಿಸಿಕೊಳ್ಳುವ ಮುನ್ನ ರಕ್ತದಾನ ಮಾಡಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ.
ನಟಿ ರಾಗಿಣಿ ದ್ವಿವೇದಿ ಇಂದು ರಕ್ತದಾನ ಮಾಡಿದ್ದಾರೆ. ಇಂದು ವಿಶೇಷ ದಿನವಾಗಿದೆ. ರಕ್ತ ಮತ್ತು ಪ್ಲಾಸ್ಮಾಕ್ಕೆ ತುಂಬಾ ಅಗತ್ಯವಿರುವುದರಿಂದ ನಾನು ರಕ್ತದಾನವನ್ನು ಮಾಡಿದ್ದೇನೆ. ಕೆಲವು ಜೀವಗಳನ್ನು ಉಳಿಸಲು ಸಹಾಯವಾಗುತ್ತದೆ. ರಕ್ತದಾನವನ್ನು ಮಾಡಿ ಎಂದು ಮನವಿ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
View this post on Instagram
ರಾಗಿಣಿ ರಕ್ತ ದಾನ ಮಾಡಿ ಅಭಿಮಾನಿಗಳಿಗೂ ರಕ್ತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಸದ್ಯ ಎಲ್ಲೆಡೆ ಕೊರೊನಾ ಭೀತಿಯಿಂದಾಗಿ ಜನರು ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಒಮ್ಮೆ ಯಾವುದೇ ಲಸಿಕೆ ಹಾಕಿಸಿಕೊಂಡರೆ 28 ದಿನಗಳ ಕಾಲ ರಕ್ತದಾನ ಮಾಡುವಂತಿಲ್ಲ. ಬೇರೆ ರೋಗಿಗಳಿಗೆ, ಅಪಘಾತಕ್ಕೊಳಗಾದವರು ಸೇರಿದಂತೆ ಹಲವರಿಗೆ ರಕ್ತದ ಅಭಾವ ಎದುರಾಗಲಿದೆ ಎಂದು ಸಾಕಷ್ಟು ಮಂದಿ ಸೆಲೆಬ್ರಿಟಿಗಳು ರಕ್ತದಾನ ಮಾಡುವಂತೆ ಮನವಿ ಮಾಡುತ್ತಿದ್ದಾರೆ. ಅಂತೆಯೇ ರಾಗಿಣಿ ಸಹ ಇಂದು ರಕ್ತದಾನ ಮಾಡುವ ಮೂಲಕ ಮನವಿ ಮಾಡಿದ್ದಾರೆ.
View this post on Instagram
ರಾಗಿಣಿ ಕೊರೊನಾದಿಂದಾಗಿ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ದಿನಸಿ ಕಿಟ್ ವಿತರಿಸುವ ಮೂಲಕ ನೆರವಾಗಿದ್ದಾರೆ. ನಿತ್ಯ ಆಹಾರ ಪೆÇಟ್ಟಣ್ಣಗಳನ್ನು ಅಗತ್ಯವಿರುವವರಿಗೆ ವಿತರಿಸುವ ಕೆಲಸ ಮಾಡುತ್ತಿದ್ದಾರೆ. ಸೆಲೆಬ್ರೆಟಿ ಸ್ಟಾರ್‍ಗಳು ಹಲವರು ಸಹಾಯವನ್ನು ಮಾಡುತ್ತಿದ್ದಾರೆ.