– ಪ್ರತಿ ರವಿವಾರ ತಪ್ಪದೇ ಕೆರೆಗಳಿಗೆ ಭೇಟಿ ನೀಡಿ ಪರಿಶೀಲನೆ
ಚಿಕ್ಕೋಡಿ: ಕೆರೆಗಳ ಅಭಿವೃಧ್ಧಿ ಮಾಡಿದರೇ ಮಾತ್ರ ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಬಂಜರು ಜಮೀನು ಹಸಿರಿನಿಂದ ಕಂಗೊಳಿಸಲಿವೆ ಎಂದು ಸಚಿವ ಉಮೇಶ ಕತ್ತಿ ಹೇಳಿದ್ದಾರೆ.
ಕೆರೆಗಳ ಅಭಿವೃದ್ಧಿ ಬಗ್ಗೆ ಅತ್ಯಂತ ಕಾಳಜಿ ಹೊಂದಿರುವ ಸಚಿವ ಉಮೇಶ ಕತ್ತಿ ಅವರು ಹುಕ್ಕೇರಿ ಮತ ಕ್ಷೇತ್ರದ 28 ಕೆರೆಗಳನ್ನ ಅಭಿವೃದ್ದಿ ಪಡಿಸಿದ್ದಾರೆ. ಅಷ್ಟೆ ಅಲ್ಲದೇ ಪ್ರತಿ ರವಿವಾರ ತಮ್ಮ ಎಲ್ಲ ಕಾರ್ಯಗಳನ್ನು ಬದಿಗಿಟ್ಟು 14 ಕೆರೆಗಳ ವೀಕ್ಷಣೆ ಮಾಡುತ್ತಾರೆ.
Advertisement
ರವಿವಾರ ಬೆಳಿಗ್ಗೆ 6 ಗಂಟೆಗೆ ಅಧಿಕಾರಿಗಳೊಂದಿಗೆ ವಿವಿಧ ಗ್ರಾಮಗಳಿಗೆ ತೆರಳಿ ಕೆರೆ ತುಂಬುವ ಯೋಜನೆ ಹಾಗೂ ಕೆರೆಗಳ ಅಭಿವೃದ್ಧಿ ಕುರಿತು ಮಾಹಿತಿ ಪಡೆಯುವದಷ್ಟೇ ಅಲ್ಲದೇ ಕೆರೆಗಳ ಅಭಿವೃದ್ಧಿಯಲ್ಲಿ ಯಾವುದೇ ಕುಂಠಿತವಾಗದಂತೆ ನಿಗಾವಹಿಸುತ್ತಾರೆ. ಹೀರಣ್ಯಕೇಶಿ ನದಿಯಿಂದ ಬೃಹತ್ ಪೈಪ್ ಲೈನ್ ಮೂಲಕ ಕರೆಗಳಿಗೆ ನೀರು ತುಂಬಿಸುವ ಯೋಜನೆಯನ್ನ ಯಶಸ್ವಿಯಾಗಿ ಕಾರ್ಯಗತಗೊಳಿಸಿ ಕೆರಗಳಿಗೆ ನೀರು ತುಂಬಿಸಲಾಗುತ್ತಿದೆ. ಸದ್ಯ ಈಗ ಕೆರೆಗಳ ಸುತ್ತ ವನ ನಿರ್ಮಾಣ ಮಾಡಲು ಮುಂದಾಗಿರುವ ಸಚಿವ ಉಮೇಶ ಕತ್ತಿ ಕೆರಗಳ ಸುತ್ತ ಮರಗಳನ್ನ ನೆಡುಸುತ್ತಿದ್ದಾರೆ. ಇದನ್ನೂ ಓದಿ: ಕಸದಿಂದ ರಸ-ಮೊಟ್ಟೆ ಮೇಲೆ ವರ್ಣರಂಜಿತ ಚಿತ್ರ ಬಿಡಿಸಿದ ಬಾಲಕ
Advertisement
Advertisement
ಇಂದು ಕೂಡ ಹುಕ್ಕೇರಿ ಮತ ಕ್ಷೇತ್ರದ ಕೆರೆಗಳಿಗೆ ಭೇಟಿ ನೀಡಿ ಮಾತನಾಡಿದ ಅವರು, ಕೆರೆಗಳ ಅಭಿವೃಧ್ಧಿ ಮಾಡಿದರೇ ಮಾತ್ರ ಅಂತರ್ಜಲ ವೃದ್ಧಿಯಾಗಲು ಸಾಧ್ಯವಾಗುತ್ತದೆ. ಹೀಗಾಗಿ ಕೆರೆಗಳ ರಕ್ಷಣೆ ಮಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಈಗಾಗಲೇ ಹುಕ್ಕೇರಿ ಮತಕ್ಷೇತ್ರದಲ್ಲಿ 28 ಬೃಹತ್ ಕೆರೆಗಳನ್ನ ಅಭಿವೃದ್ದಿಪಡಿಸಲಾಗಿದೆ. ಕೆರೆಗಳ ರಕ್ಷಣೆ ಮಾಡಿದರೆ ರೈತರಿಗೆ ಸಾಕಷ್ಟು ಅನಕೂಲವಾಗುವದರ ಜೊತೆಗೆ ಬಂಜರು ಜಮೀನಿಗಳು ಹಸಿರಿನಿಂದ ಕಂಗೊಳಿಸಲಿವೆ ಎಂದಿದ್ದಾರೆ.
Advertisement
ಹೀರಣ್ಯಕೇಶಿ ನದಿಯಿಂದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯದಲ್ಲಿ ವ್ಯತ್ಯಯ ಆಗದಂತೆ ನಿಗಾವಹಿಸಲು ಅಧಿಕಾರಿಗಳಿ ಸೂಚಿಸಿದ್ದಾರೆ. ಈ ಸಂದರ್ಭದಲ್ಲಿ ಅಧಿಕಾರಿಗಳಾದ ರಾಜಶೇಖರ ಪಾಟೀಲ್, ಸಿಪಿಐ ರಮೇಶ್ ಚಾಯಾಗೋಳ ಸೇರಿದಂತೆ ಸಣ್ಣ ನೀರಾವರಿ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.