ಆಡಿಲೇಡ್: ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನು ಸೋಲುವುದರೊಂದಿಗೆ ಭಾರತ ಕೆಟ್ಟ ದಾಖಲೆ ಬರೆದಿದೆ.
ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 36 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನ ಇನ್ನಿಂಗ್ಸ್ ನಲ್ಲಿ ಕಡಿಮೆ ರನ್ ಹೊಡೆದ ತಂಡಗಳ ಪಟ್ಟಿಯಲ್ಲಿ ಟೀಂ ಇಂಡಿಯಾ ಈಗ ಸೇರ್ಪಡೆಯಾಗಿದೆ.
Advertisement
ಈ ಹಿಂದೆ 1974ರಲ್ಲಿ ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ 42 ರನ್ ಗಳಿಸಿತ್ತು. ಇದು ಇಲ್ಲಿಯವರೆಗಿನ ಕೆಟ್ಟ ದಾಖಲೆಯಾಗಿತ್ತು. ಇನ್ನಿಂಗ್ಸ್ ಒಂದರಲ್ಲಿ ಕಡಿಮೆ ರನ್ ಹೊಡೆದ ಪಟ್ಟಿಯಲ್ಲಿ ಭಾರತಕ್ಕೆ ಈಗ 7ನೇ ಸ್ಥಾನ ಸಿಕ್ಕಿದೆ.
Advertisement
WHAT A SESSION!
India's lowest Test total has left Australia needing just 90 runs to win the first Test ????
They are 15/0 at the dinner break. Can the visitors shake things up in the second session?
#AUSvIND ???? https://t.co/Q10dx0r4nX pic.twitter.com/Bo3wmmT6ky
— ICC (@ICC) December 19, 2020
Advertisement
ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ಮೊದಲ ಸ್ಥಾನವನ್ನು ಪಡೆದುಕೊಂಡಿದೆ. 1955 ರಲ್ಲಿ ಇಂಗ್ಲೆಂಡ್ ವಿರುದ್ಧ ಅಕ್ಲೆಂಡ್‌ನಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲೆಂಡ್26 ರನ್‌ಗಳಿಗೆ ಆಲೌಟ್ ಆಗಿತ್ತು.
Advertisement
ಎರಡನೇ ಇನ್ನಿಂಗ್ಸ್‌ನಲ್ಲಿ ಭಾರತದ ಯಾವೊಬ್ಬ ಆಟಗಾರ ಎರಂಡಕಿ ದಾಟಲೇ ಇಲ್ಲ. 90 ರನ್‌ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 21 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 93 ರನ್ ಹೊಡೆಯುವ ಮೂಲಕ 8 ವಿಕೆಟ್‌ಗಳ ಜಯವನ್ನು ಸಂಪಾದಿಸಿತು.
ಮೊದಲ ಇನ್ನಿಂಗ್ಸ್‌ನಲ್ಲಿ ನಾಯಕನ ಆಟವಾಡಿ ಔಟಾಗದೇ 73 ರನ್ ಹೊಡೆದಿದ್ದ ಟಿಮ್ ಪೈನೆ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಯಿಂದ ಪುರಸ್ಕೃತರಾದರು.
A day to remember for Australia as they bowled India out for their lowest total in Test history ????
Have you seen a more clinical bowling performance?#AUSvIND pic.twitter.com/FOmSNKfYbm
— ICC (@ICC) December 19, 2020
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್ – 244/10
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ – 191/10
ಭಾರತ ಎರಡನೇ ಇನ್ನಿಂಗ್ಸ್ – 36/9
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ – 93/2
A dramatic turnaround on day three!
Australia win by 8️⃣ wickets in Adelaide to take a 1-0 lead in the series ????
Can you describe their performance in one word?#AUSvIND ???? https://t.co/Q10dx0r4nX pic.twitter.com/uGMS0InEHm
— ICC (@ICC) December 19, 2020