ಬೆಂಗಳೂರು: ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಜಿಲ್ಲಾ ಎಸ್‍ಡಿಪಿಐ (Social Democratic Party of India) ಮುಖಂಡನನ್ನು ಪೊಲೀಸರು ಬಂಧಿಸಿದ್ದಾರೆ.
ಎಸ್‍ಡಿಪಿಐ ಮುಖಂಡ ಮುಜಾಮಿಲ್ ಪಾಷಾನನ್ನು ಡಿಜೆ ಪೊಲೀಸರು ಬಂಧಿಸಿದ್ದಾರೆ. ಕೆಜಿ ಹಳ್ಳಿ ಗಲಭೆ ಪ್ರಕರಣದಲ್ಲಿ ಮುಜಾಮಿಲ್ ಪಾಷಾ ಎ-1 ಆರೋಪಿ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಹೀಗಾಗಿ ಪೊಲೀಸರು ಈತನನ್ನು ಬಂಧಿಸಿದ್ದಾರೆ.
ಮಂಗಳವಾರ ರಾತ್ರಿ ಕೆಜಿ ಹಳ್ಳಿಯಲ್ಲಿ ದಾಂಧಲೆ ಮಾಡುತ್ತಿದ್ದ ಗಲಭೆಕೋರರ ಜೊತೆ ಮುಜಾಮಿಲ್ ಪಾಷಾ ಇದ್ದನು. ಅಲ್ಲದೇ ಗಲಭೆ ನಡೆಯುತ್ತಿದ್ದಾಗ ಮೈಕ್ ಹಿಡಿದುಕೊಂಡು ಗಲಭೆಗೋರರ ಜೊತೆ ಮಾತನಾಡಿದ್ದನು. ಹೀಗಾಗಿ ಗಲಭೆಗೆ ಪ್ರಚೋದನೆ ನೀಡಿದ್ದಾನೆ ಎಂದು ಆರೋಪಿಸಿ ಡಿಜೆ ಪೊಲೀಸರು ಮುಜಾಮಿಲ್ ಪಾಷಾನನ್ನು ಬಂಧಿಸಿದ್ದಾರೆ.
ಮುಜಾಮಿಲ್ ಪಾಷಾನ ವಿರುದ್ಧ ಈಗಾಗಲೇ ಡಿಜೆ ಹಳ್ಳಿ ಠಾಣೆಯಲ್ಲಿ ಐದು ಕೇಸ್ ದಾಖಲಾಗಿವೆ. ಗುಂಪು ಕಟ್ಟಿಕೊಂಡು ಹಲ್ಲೆ ಮತ್ತು ಪ್ರಚೋದಾನಾತ್ಮಕ ಹೇಳಿಕೆ ಪ್ರಕರಣ ದಾಖಲಾಗಿವೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.
Karnataka: Violence broke out in Bengaluru last night over an alleged inciting social media post. 2 died, 110 arrested, around 60 Police personnel injured. As per Bengaluru Police Commissioner, accused Naveen arrested "for sharing derogatory post". Latest visuals from DJ Halli. pic.twitter.com/LKM8m0JuYx
— ANI (@ANI) August 12, 2020