ಕೆಜಿಎಫ್-2 ಸಿನಿಮಾದ ಕೆಲಸ ಆರಂಭಿಸಿದ ಚಿತ್ರತಂಡ

Public TV
2 Min Read
yash kgf to

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್-2 ಚಿತ್ರದ ಕೆಲಸಗಳು ಮತ್ತೆ ಗರಿಗೆದರಿದ್ದು, ಈ ಕುರಿತು ಚಿತ್ರ ತಂಡ ಅಪ್‍ಡೇಟ್ ನೀಡಿದೆ. ಈ ಮೂಲಕ ಅಭಿಮಾನಿಗಳಿಗೆ ಖುಷಿ ವಿಚಾರವೊಂದು ಸಿಕ್ಕಂತಾಗಿದೆ. ಕೆಜಿಎಫ್ ಚಾಪ್ಟರ್-1ರ ಗುಂಗಿನಲ್ಲಿರುವ ಪ್ರೇಕ್ಷಕರು ಚಾಪ್ಟರ್-2ಗಾಗಿ ಕಾತರದಿಂದ ಕಾಯುತ್ತಿದ್ದು, ಚಿತ್ರೀಕರಣದ ಪ್ರತಿಯೊಂದು ಅಪ್‍ಡೇಟ್‍ಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದಾರೆ. ಅದೇ ರೀತಿ ಚಿತ್ರ ತಂಡ ಸಹ ಸ್ಪಂದಿಸುತ್ತಿದ್ದು, ಎಲ್ಲ ಅಪ್‍ಡೇಟ್‍ಗಳನ್ನು ನೀಡುತ್ತಿದೆ.

KGF 2

ಅಭಿಮಾನಿಗಳ ಕಾತುರದ ನಡುವೆಯೇ ಈ ಹಿಂದೆ ಚಿತ್ರ ತಂಡ ಸಿನಿಮಾ ಬಿಡುಗಡೆ ದಿನಾಂಕವನ್ನು ಪ್ರಕಟಿಸಿತ್ತು. ಅಕ್ಟೋಬರ್ 23ರಂದು ಚಿತ್ರ ಬಿಡುಗಡೆಯಾಗುವುದಾಗಿ ತಿಳಿಸಿತ್ತು. ಈ ಸುದ್ದಿ ಬಿಡುಗಡೆಯಾಗುತ್ತಿದ್ದಂತೆ ಪ್ರೇಕ್ಷಕರಲ್ಲಿ ಇನ್ನೂ ಹೆಚ್ಚಿನ ಕಾತರ ಮೂಡಿದ್ದು, ಯಾವಾಗ ತೆರೆ ಬರುತ್ತೋ ಎಂದು ಎದುರು ನೋಡುತ್ತಿದ್ದಾರೆ. ಕನ್ನಡ ಮಾತ್ರವಲ್ಲದೆ ಇತರೆ ಭಾಷೆಯ ಅಭಿಮಾನಿಗಳು ಸಹ ಕುತೂಹಲ ಹೆಚ್ಚಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ತಮ್ಮ ಅನಿಸಿಕೆ ಅಭಿಪ್ರಾಯ ತಿಳಿಸುತ್ತಿದ್ದಾರೆ.

KGF

ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಹೊಸ ಮಾಹಿತಿ ಹಂಚಿಕೊಂಡಿದ್ದು, ಈ ಕುರಿತು ಟ್ವೀಟ್ ಮಾಡಿ ತಿಳಿಸಿದ್ದಾರೆ. ಸಂಗೀತ ನಿರ್ದೇಶಕ ರವಿ ಬಸ್ರೂರ್ ಅವರ ಮ್ಯೂಸಿಕ್ ಸ್ಟುಡಿಯೋದಲ್ಲಿನ ಚಿತ್ರವನ್ನು ಹಂಚಿಕೊಂಡಿದ್ದು, ಇದರಲ್ಲಿ ಪ್ರಶಾಂತ್ ನೀಲ್, ರವಿ ಬಸ್ರೂರ್ ಹಾಗೂ ಕಾರ್ತಿಕ್ ಗೌಡ ಇದ್ದಾರೆ. ಹ್ಯಾಶ್ ಟ್ಯಾಗ್‍ನೊಂದಿಗೆ ಕೆಜಿಎಫ್ ಚಾಪ್ಟರ್-2 ಮ್ಯೂಸಿಕ್ ಸೆಶನ್ಸ್ ಎಂಬ ಸಾಲುಗಳನ್ನು ಬರೆದಿದ್ದಾರೆ. ಅಲ್ಲದೆ ಪ್ರಶಾಂತ್ ನೀಲ್, ಹೊಂಬಾಳೆ ಫಿಲಮ್ಸ್, ಯಶ್, ಶ್ರೀನಿಧಿ ಶೆಟ್ಟಿ, ಭುವನ್ ಗೌಡ, ವಿಜಯ್ ಕಿರಗಂದೂರ್, ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರಿಗೆ ಟ್ಯಾಗ್ ಮಾಡಿದ್ದಾರೆ.

ಈ ಫೋಟೋ ಚಿತ್ರದ ಸಂಗೀತಕ್ಕೆ ಸಂಬಂಧಿಸಿದ ಕೆಲಸದಲ್ಲಿ ತೊಡಗಿದ್ದಾರೆ ಎಂಬ ಸುಳಿವನ್ನು ನೀಡಿದ್ದು, ಕೆಜಿಎಫ್-2 ಸಿನಿಮಾದ ಕೆಲಸ ಪ್ರಾರಂಭವಾಯಿತು ಎಂದು ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.

ಪ್ರೇಕ್ಷಕರ ನಿರೀಕ್ಷೆಗೆ ತಕ್ಕಂತೆ ಚಿತ್ರ ತಂಡ ಸಹ ಅಷ್ಟೇ ವೇಗವಾಗಿ ಚಿತ್ರೀಕರಣ ನಡೆಸಿತ್ತು. ಈಗಾಗಲೇ ಶೂಟಿಂಗ್ ಕೊನೇ ಹಂತ ತಲುಪಿದೆ. ಹೀಗಿರುವಾಗಲೇ ಕೊರೊನಾ ವೈರಸ್‍ನಿಂದಾಗಿ ಲಾಕ್‍ಡೌನ್ ಘೋಷಣೆಯಾಯಿತು. ಅಂದಿನಿಂದ ಚಿತ್ರೀಕರಣ ಸ್ಥಗಿತಗೊಂಡಿತ್ತು. ಇದರ ನಡುವೇಯೇ ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಿಸಿದ್ದು, ಅಕ್ಟೋಬರ್ 23ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ನೀಡಿದೆ.

kgf aa

ಕೆಜಿಎಫ್ ಚಾಪ್ಟರ್-1ಗಿಂತಲೂ ಚಾಪ್ಟರ್-2 ಎಫೆಕ್ಟಿವ್ ಆಗಿ ಮೂಡಿಬಂದಿದ್ದು, ಪ್ರೇಕ್ಷಕರ ನಿರೀಕ್ಷೆಗೂ ಮೀರಿ ಸಿನಿಮಾ ತಯಾರಿಸಲಾಗಿದೆಯಂತೆ. ಇದಕ್ಕೆ ಸಾಕ್ಷಿಯೇ ಬಾಲಿವುಡ್ ನಟರಾದ ಸಂಜಯ್ ದತ್ ಹಾಗೂ ರವೀನಾ ಟಂಡನ್ ಅವರು ಚಿತ್ರ ತಂಡ ಸೇರಿರುವುದು. ಈಗಾಗಲೇ ರವೀನಾ ಟಂಡನ್ ಭಾಗದ ಚಿತ್ರೀಕರಣ ಮುಕ್ತಾಯವಾಗಿದ್ದು, ಕೊನೆಯ ಹಂತದ ಚಿತ್ರೀಕರಣ ಮಾತ್ರ ಬಾಕಿ ಇದೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *