ಕೆಜಿಎಫ್-2 ಮತ್ತೊಮ್ಮೆ ರೆಕಾರ್ಡ್ ಬ್ರೇಕ್ ಬರೆಯುವ ಚಿತ್ರವಾಗುತ್ತೆ: ರಕ್ಷಿತ್ ಶೆಟ್ಟಿ

Public TV
1 Min Read
Rakshit Yash KGF

ಬೆಂಗಳೂರು: ಕೆಜಿಎಫ್-2 ಚಿತ್ರದ ಟೀಸರ್ ಕಂಡ ಬಳಿಕ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ಚಿತ್ರ ಮತ್ತೊಮ್ಮೆ ರೆಕಾರ್ಡ್ ಬ್ರೇಕ್ ಮಾಡಲಿದೆ ಎಂದು ಟ್ವೀಟ್ ಮಾಡಿದ್ದಾರೆ.

ಚಿತ್ರದ ಟೀಸರ್ ಅದ್ಭುತವಾಗಿದ್ದು, ನನ್ನನ್ನೂ ಸೇರಿದಂತೆ ಎಲ್ಲರೂ ಕೂಡ ಹೆಚ್ಚು ಕಾತರದಿಂದ ಈ ಮಾಸ್ಟರ್ ಪೀಸ್ ಎಂಟ್ರಿಗಾಗಿ ಕಾಯುತ್ತಿದ್ದಾರೆ. ಇದು ಪ್ರೇಕ್ಷಕರಲ್ಲಿ ಹೊಸ ಅಲೆ ಸೃಷ್ಟಿಸುವದರಲ್ಲಿ ಸಂದೇಹವಿಲ್ಲ ಎಂದು ಯಶ್ ಹುಟ್ಟುಹಬ್ಬಕ್ಕೆ ಟ್ಟಿಟರ್ ಮೂಲಕ ಶುಭ ಹಾರೈಸಿದ್ದಾರೆ ಕಿರಿಕ್ ಪಾರ್ಟಿ ಖ್ಯಾತಿಯ ರಕ್ಷಿತ್ ಶೆಟ್ಟಿ.

kgf 2 teaser yash 8

ರಕ್ಷಿತ್ ಶೆಟ್ಟಿ ಟ್ವೀಟ್‍ಗೆ ಉತ್ತರಿಸಿರುವ ರಾಕಿಂಗ್ ಸ್ಟಾರ್ ಯಶ್, ಧನ್ಯವಾದಗಳೂ ನಿಮ್ಮ ಮುಂದಿನ ಸಿನಿಮಾಗಳು ಎಲ್ಲವೂ ಯಶಸ್ಸು ಕಾಣಲಿ. ನಾನೂ ನೋಡಲು ಕಾತರನಾಗಿದ್ದೇನೆ ಎಂದು ಮರು ಟ್ಟೀಟ್ ಮಾಡಿದ್ದಾರೆ.

ಜನವರಿ 8 ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬದಂದು ಚಿತ್ರತಂಡ ಕೆಜಿಎಫ್-2 ಸಿನಿಮಾದ ಟೀಸರ್ ರೀಲಿಸ್ ಮಾಡಲು ಸಿದ್ಧತೆ ಮಾಡಿತ್ತು. ಆದರೆ ಜನವರಿ 7ರ ಸಂಜೆಯೇ ಟೀಸರ್ ನ ಕೆಲ ಕ್ಲಿಪ್ ಗಳು ಲೀಕ್ ಆಗಿತ್ತು. ಹೀಗಾಗಿ ಅದೇ ದಿನ ರಾತ್ರಿ ಚಿತ್ರತಂಡ ಟೀಸರ್ ರೀಲಿಸ್ ಮಾಡಿತ್ತು. ಕೆಜಿಎಫ್-2ರ ಟೀಸರ್ 9 ಕೋಟಿಗೂ ಅಧಿಕ ವೀಕ್ಷಣೆಯಾಗಿ 10 ಕೋಟಿಯತ್ತ ಸಾಗುತ್ತಿದ್ದು ಹೊಸ ಹೊಸ ದಾಖಲೆಯನ್ನು ಬರೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *