‘ಕೆಜಿಎಫ್’ ರೌಡಿ ತಂಗಂ ಕುಟುಂಬದವರಿಂದ ಗಾಂಜಾ ದಂಧೆ

Public TV
2 Min Read
KLR GANJA KGF 3

– 1.5 ಕೋಟಿ ಮೌಲ್ಯದ ಗಾಂಜಾ ವಶ, ಇಬ್ಬರ ಬಂಧನ

ಕೋಲಾರ: ಅವರೆಲ್ಲಾ ಒಂದು ಕಾಲದಲ್ಲಿ ಚಿನ್ನದ ನೆಲದಲ್ಲಿ ರೌಡಿಸಂ ಹೆಸರಲ್ಲಿ ನೆತ್ತರು ಹಸಿದ್ದವರು, ಆದರೆ ಕಳೆದ ಎರಡು ದಶಕಳಿಂದ ರೌಡಿಸಂನಿಂದ ದೂರ ಉಳಿದಿದ್ದವರು ಏನು ಮಾಡುತ್ತಿದ್ದರು ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ರೌಡಿಸಂನಿಂದ ಮೆರೆದಿದ್ದ ಕುಟುಂಬ ಈಗ ಗಾಂಜಾ ಘಾಟಿನಲ್ಲಿ ಮುಳುಗಿರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಜಿಲ್ಲೆ ಕೆಜಿಎಫ್ ನಗರದ ಕೃಷ್ಣಗಿರಿ ಲೈನ್‍ನಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಸುಮಾರು 186 ಕೆ.ಜಿ.ಯಷ್ಟು ಗಾಂಜಾವನ್ನ ವಶಕ್ಕೆ ಪಡೆದಿದ್ದಾರೆ. ಕೆಜಿಎಫ್ ಎಸ್‍ಪಿ ಇಲಕ್ಕಿಯಾ ಕರುಣಾಗರನ್ ಅವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ರಾಬರ್ಟ್‍ಸನ್ ಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ ಸಂದರ್ಭದಲ್ಲಿ ಸುಮಾರು ಒಂದು ಕೋಟಿ ಮೌಲ್ಯದ 186 ಕೆಜಿಯಷ್ಟು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದೆ.

KLR GANJA KGF 4

ಒಂದು ಕಾಲದಲ್ಲಿ ಕೆಜಿಎಫ್‍ನ್ನು ರೌಡಿಸಂ ಹೆಸರಲ್ಲಿ ನಡುಗಿಸಿದ್ದ ರೌಡಿ ತಂಗಂ ಸೋದರರಾದ ಜೋಸೆಫ್ ಹಾಗೂ ಪಲ್ಲರಾಜ್ ಈ ಪ್ರಕರಣದ ಮುಖ್ಯ ಆರೋಪಿಗಳಾಗಿದ್ದು, ಸದ್ಯ ಪೊಲೀಸರಿಗೆ ಜೋಸೆಫ್ ಸಿಕ್ಕಿಬಿದ್ದಿದ್ದು ಮತ್ತೊಬ್ಬರ ಆರೋಪಿ ರಾಜ ಆಲಿಯಾಸ್ ಪಲ್ಲರಾಜ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಕಳೆದ ಎರಡುವರೆ ದಶಕಗಳಿಂದ ಹಲವಾರು ಪ್ರಕರಣಗಳಲ್ಲಿ ಆರೋಪಿಗಳಾಗಿರುವ ಇವರುಗಳು ಈಗ ಮತ್ತೆ ಡ್ರಗ್ಸ್ ಗಾಂಜಾ ದಂಧೆಯಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಇವರು ಕರ್ನಾಟಕ ಸೇರಿ ನಾಲ್ಕು ರಾಜ್ಯಗಳಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಮಾಹಿತಿ ಸಿಕ್ಕಿದ್ದು ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದಾರೆ.

KLR GANJA KGF 2

ಗಾಂಜಾ ವಿರುದ್ಧ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಕೆಜಿಎಫ್ ಪೊಲೀಸರು ಅಂತರರಾಜ್ಯ ಗಾಂಜಾ ಮುಠಾವನ್ನ ಭೇಧಿಸಿದ್ದಾರೆ. ಕಳೆದೊಂದು ವಾರದಿಂದ ರಾಜ್ಯದಲ್ಲಿ ಡ್ರಗ್ಸ್ ಹಾಗೂ ಗಾಂಜಾ ದಂಧೆ ಜೋರಾಗಿ ಸದ್ದು ಮಾಡುತ್ತಿದೆ. ಈ ನಡುವೆಯೇ ಕೆಜಿಎಫ್‍ನಲ್ಲಿ ಇಷ್ಟು ದೊಡ್ಡ ಮಟ್ಟದ ಗಾಂಜಾ ಸಿಕ್ಕಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಸಂಬಂಧ ಕೇಂದ್ರ ವಲಯ ಐಜಿಪಿ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ ಇದರಲ್ಲಿ ಯಾರೇ ಭಾಗಿಯಾಗಿದರೂ ಸರಿಯೇ ಕಾನೂನು ಕ್ರಮ ಕೈಗೊಳ್ಳಲಾಗುವುದು.

KLR GANJA KGF 1

ಜೊತೆಗೆ ಕೆಜಿಎಫ್‍ನಲ್ಲಿ ಇತ್ತೀಚಿಗೆ ಆರಂಭವಾಗಿರುವ ರೌಡಿಸಂಗೆ ಕಡಿವಾಣ ಹಾಕಲು ರೌಡಿಶೀಟರ್ ಗಳಿಗೆ ಎಚ್ಚರಿಕೆ ನೀಡಲಾಗಿದೆ. ಕಾನೂನು ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗುವ ರೌಡಿಗಳ ಮೇಲೆ ಗೂಂಡಾ ಕಾಯ್ದೆ ಪ್ರಯೋಗ ಮಾಡುವ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಹಲವು ವರ್ಷಗಳಿಂದ ರೌಡಿಸಂ ನಿಂದ ಹೆಸರು ಮಾಡಿದ್ದ ರೌಡಿ ತಂಗಂ ಕುಟುಂಬದ ಗಾಂಜಾ ದಂಧೆಯಲ್ಲಿ ತೊಡಗಿದ್ದು ಅವರ ಹೆಡೆಮುರಿ ಕಟ್ಟಿ ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರ ಕ್ರಮಕ್ಕೆ ಸ್ಥಳೀಯರಿಂದ ಪ್ರಶಂಸೆಯ ಮಾತುಗಳು ಕೇಳಿ ಬರುತ್ತಿವೆ.

Share This Article
Leave a Comment

Leave a Reply

Your email address will not be published. Required fields are marked *