ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್’ ಸಿನಿಮಾದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಶ್ರೀನಿಧಿ ಶೆಟ್ಟಿ ಪ್ಯಾನ್ ಇಂಡಿಯಾ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ನಟಿ ಶ್ರೀನಿಧಿ ಶೆಟ್ಟಿಯ ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ನಟಿ ಶ್ರೀನಿಧಿ ಅವರೇ ನಿಶ್ಚಿತಾರ್ಥದ ಆಮಂತ್ರಣ ಪತ್ರಿಕೆ ಮತ್ತು ಕೆಲವು ಫೋಟೋಗಳನ್ನು ಟ್ವಿಟ್ಟರಿನಲ್ಲಿ ಹಂಚಿಕೊಂಡಿದ್ದಾರೆ. ಆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆದರೆ ಶ್ರೀನಿಧಿ ಶೆಟ್ಟಿ ನಿಶ್ಚಿತಾರ್ಥ ಆಗುತ್ತಿರುವುದು ರಿಯಲ್ ಆಗಿ ಅಲ್ಲ, ಸಿನಿಮಾದಲ್ಲಿ ಎಂಗೇಜ್ಮೆಂಟ್ ಆಗುತ್ತಿದ್ದಾರೆ.
ಸದ್ಯಕ್ಕೆ ‘ಕೆಜಿಎಫ್-2’ ನಲ್ಲಿ ಶ್ರೀನಿಧಿ ಬ್ಯುಸಿಯಾಗಿದ್ದಾರೆ. ಜೊತೆಗೆ ತಮಿಳಿನ ‘ಕೋಬ್ರಾ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾದಲ್ಲಿ ತಮಿಳಿನ ಸ್ಟಾರ್ ನಟ ಚಿಯಾನ್ ವಿಕ್ರಮ್ ನಾಯಕನಾಗಿ ಅಭಿನಯಿಸಿದ್ದು, ಇವರಿಗೆ ಜೋಡಿಯಾಗಿ ಶ್ರೀನಿಧಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ಹಾಡೊಂದು ಇಂದು ಬಿಡುಗಡೆಗೆ ಸಿದ್ಧವಾಗಿದೆ.
ಈ ಹಾಡು ನಾಯಕ ಮತ್ತು ನಾಯಕಿಯ ನಿಶ್ಚಿತಾರ್ಥಕ್ಕೆ ಸಂಬಂಧಿಸಿದ್ದಾಗಿದೆ. ಹೀಗಾಗಿ ಹಾಡಿನ ಬಿಡುಗಡೆಗೆ ವಿಶೇಷ ಆಮಂತ್ರಣ ಪತ್ರಿಕೆಯನ್ನು ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಪೋಸ್ಟನ್ನು ನಟಿ ಶ್ರೀನಿಧಿ ಕೂಡ ಟ್ವಿಟ್ಟರಿನಲ್ಲಿ ಅಪ್ಲೋಡ್ ಮಾಡಿ ಇಂದು ಹಾಡು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಅಲ್ಲದೇ ಹಾಡಿನ ಕೆಲವು ನಿಶ್ಚಿತಾರ್ಥದ ಫೋಟೋಗಳನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ.
Stills from the beautiful song #ThumbiThullal #CobraFirstSingle #Cobra ♥️????@AjayGnanamuthu #ChiyaanVikram @7screenstudio @arrahman @SonyMusicSouth @Harishdop pic.twitter.com/TY8YgcnEXk
— Srinidhi Shetty (@SrinidhiShetty7) June 28, 2020
ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸಂಗೀತ ಸಂಯೋಜನೆ ಮಾಡಿದ್ದು, ಇಂದು ಸಂಜೆ 5 ಗಂಟೆಗೆ ಹಾಡು ರಿಲೀಸ್ ಆಗುತ್ತಿದೆ. ಸಾಕಷ್ಟು ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಲಾಕ್ಡೌನ್ ಕಾರಣ ಚಿತ್ರೀಕರಣ ಸ್ಥಗಿತಗೊಳಿಸಿತ್ತು. ಈಗ ಚಿತ್ರತಂಡ ಮತ್ತೆ ಶೂಟಿಂಗ್ ಆರಂಭಿಸಲು ಸಿದ್ಧವಾಗಿದೆ. ಸದ್ಯಕ್ಕೆ ಶ್ರೀನಿಧಿಯ ನಿತಾರ್ಥದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
#ThumbiThullal ♥️
A celebration of love! ????
Stay tuned for #CobraFirstSingle coming your way on Monday, June 29 at 5pm IST????#ChiyaanVikram @AjayGnanamuthu @Lalit_SevenScr @7screenstudio @arrahman @IrfanPathan @Harishdop @SonyMusicSouth @JioSaavn #Cobra pic.twitter.com/cRNpvOgkXO
— Srinidhi Shetty (@SrinidhiShetty7) June 26, 2020