ಕೆಜಿಎಫ್ ನಟಿ ಮೌನಿ ರಾಯ್ ಹಾಟ್ ಲುಕ್‍ಗೆ ನೆಟ್ಟಿಗರು ಫಿದಾ

Public TV
1 Min Read
mouni roy

ಮುಂಬೈ: ಕೆಜಿಎಫ್ ಸಿನಿಮಾದಲ್ಲಿ ಗಲಿಗಲಿ ಎಂದು ಸೊಂಟ ಬಳುಕಿಸಿದ ಬಾಲಿವುಡ್ ನಟಿ ಮೌನಿ ರಾಯ್ ಇದೀಗ ಹಾಟ್ ಫೋಟೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿಯಾಗಿದ್ದಾರೆ.

mouni roy3

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಕೆಜಿಎಫ್ ಸಿನಿಮಾ ಸಖತ್ ಸುದ್ದಿ ಮಾಡಿತ್ತು. ಆ ಸಿನಿಮಾದಲ್ಲಿ ಗಲಿ ಗಲಿ ಸಾಂಗ್ ಕೂಡಾ ಅಷ್ಟೆ ಸುದ್ದಿಯಾಗಿತ್ತು. ಈ ಹಾಡಿಗೆ ಸೊಂಟ ಬಳುಕಿಸಿದ್ದ ಮೌನಿ ರಾಯ್, ಆಗಾಗ ಫೋಟೋಶೂಟ್ ಮೂಲಕವಾಗಿ ಸುದ್ದಿಯಾಗುತ್ತಲಿರುತ್ತಾರೆ. ಈಗ ಸ್ವಿಮ್ ಸೂಟ್ ಧರಿಸಿ ಫೋಟೋಶೂಟ್ ಮಾಡಿಸಿದ್ದಾರೆ. ಇದನ್ನೂ ಓದಿ: ಮಕ್ಕಳ ಮೊದಲ ಲಸಿಕೆಗೆ ಕೇಂದ್ರ ಗ್ರೀನ್ ಸಿಗ್ನಲ್?

mouni roy2

ಸದ್ಯ ಮೌನಿರಾಯ್ ಅವರ ಹಾಟ್ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿವೆ. ತಮ್ಮ ಅಧಿಕೃತ ಖಾತೆಯಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.

 

View this post on Instagram

 

A post shared by mon (@imouniroy)

ಕೆಜಿಎಫ್ ಐಟಂ ಸಾಂಗ್‍ನಲ್ಲಿ ಯಶ್ ಜೊತೆಗೆ ಹೆಜ್ಜೆ ಹಾಕಿದ್ದ ಮೌನಿ ರಾಯ್, ಇತ್ತಿಚೆಗೆ ತಮ್ಮ ಫೇವರೆಟ್ ಡ್ರೆಸ್‍ವೊಂದನ್ನು ತೊಟ್ಟು, ಫೋಟೋಗೆ ಸಖತ್ ಹಾಟ್ ಹಾಟ್ ಆಗಿ ಪೋಸ್ ನೀಡಿದ್ದರು. ಈ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಮೌನಿ ರಾಯ್ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕವಾಗಿ ಪಡ್ಡೆಗಳ ನಿದ್ದೆ ಕದ್ದಿದ್ದಾರೆ.

Share This Article