ಕೆಜಿಎಫ್ ಅಧೀರ ಕಮ್ ಬ್ಯಾಕ್- ಸಲೂನ್ ವೀಡಿಯೋ ವೈರಲ್

Public TV
3 Min Read
sanjay datt

ಮುಂಬೈ: ಬಾಲಿವುಡ್ ನಟ ಹಾಗೂ ಕೆಜಿಎಫ್-2 ಚಿತ್ರದಲ್ಲಿ ಅಧೀರನ ಪಾತ್ರ ನಿರ್ವಹಿಸುತ್ತಿರುವ ಸಂಜಯ್ ದತ್ ಕ್ಯಾನ್ಸರ್ ನಿಂದ ಬಳಲುತ್ತಿರುವುದು ತಿಳಿದೇ ಇದೆ. ಇದಕ್ಕಾಗಿ ಅವರು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇತ್ತೀಚೆಗೆ ಈ ಸಂಬಂಧ ವಿದೇಶಕ್ಕೂ ಹೋಗಿದ್ದರು. ಹೀಗಾಗಿ ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿತ್ತು. ಆದರೆ ಇದೀಗ ಕಟಿಂಗ್ ಶಾಪ್‍ನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಂಜು ಬಾಬಾ ಫಿಟ್ ಆ್ಯಂಡ್ ಫೈನ್ ಆಗಿರುವ ಕುರಿತು ತಿಳಿಸಿದ್ದಾರೆ.

duttsanjay 66619536 322356091790884 1383801352739351419 n e1588517009450

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್ ಆಲಿಮ್ ಹಕೀಮ್ ಅವರ ಸಲೂನ್‍ಗೆ ಹೋಗಿ ಸಂಜುಯ್ ದತ್ ಕಟಿಂಗ್ ಮಾಡಿಸಿಕೊಂಡಿದ್ದಾರೆ. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಈಗ ನನಗೆ ಯಾವುದೇ ಆರೋಗ್ಯ ಸಮಸ್ಯೆ ಇಲ್ಲ, ಆ ರೀತಿ ಬರೆಯಬೇಡಿ ಎಂದು ಕೇಳಿಕೊಂಡಿದ್ದಾರೆ. ಈ ಮೂಲಕ ಎಲ್ಲರೂ ನಗುವಂತೆ ಮಾಡಿದ್ದಾರೆ. ಈ ವೀಡಿಯೋ ಇದೀಗ ಸಖತ್ ವೈರಲ್ ಆಗಿದೆ.

Sanjay Dutt

ಆಲಿಮ್ ಹಕೀಮ್ ಸಹ ಕಟಿಂಗ್ ಮಾಡುತ್ತಿದ್ದ ವೀಡಿಯೋ ಹಂಚಿಕೊಂಡಿದ್ದು, ಇದರಲ್ಲಿ ಸಂಜು ಬಾಬಾ ಮಾತನಾಡಿದ್ದಾರೆ. ಸಲೂನ್‍ಗೆ ಮರಳಿ ಬಂದಿದ್ದಕ್ಕೆ ತುಂಬಾ ಸಂತೋಷವಾಗುತ್ತಿದೆ. ಕ್ಯಾನ್ಸರ್ ನ್ನು ಬಹುಬೇಗ ಮಣಿಸುತ್ತೇನೆ. ಆಲಿಮ್ ಹಾಗೂ ನಾನು ತುಂಬಾ ಹಳೆಯ ಸ್ನೇಹಿತರು ಎಂದಿದ್ದಾರೆ. ಸಂಜಯ್ ದತ್ ಅವರ ರಾಕಿ ಸಿನಿಮಾಗೂ ಅವರೇ ಕೇಶ ವಿನ್ಯಾಸ ಮಾಡಿದ್ದರು.

ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿದ್ದ ದತ್ ದೈಹಿಕವಾಗಿ ಕುಗ್ಗಿದ್ದಾರೆ ಎನ್ನಿಸುತ್ತದೆ. ಆದರೆ ಅವರು ಮಾತ್ರ ಇದನ್ನು ಒಪ್ಪುವುದಿಲ್ಲ ನಾನು ಗಟ್ಟಿಮುಟ್ಟಾಗಿದ್ದೇನೆ ಎನ್ನುತ್ತಾರೆ. ಆಸ್ಪತ್ರೆ ಸೇರಿದ ಬೆನ್ನಲ್ಲೇ ಕೆಜಿಎಫ್ ಅಭಿಮಾನಿಗಳಲ್ಲಿ ಆತಂಕ ಶುರುವಾಗಿತ್ತು ಆದರೆ ಇದೀಗ ಸಂಜಯ್ ದತ್ ಮುಂಬೈಗೆ ಬಂದಿಳಿದಿದ್ದರಿಂದ ಸಂತಸಗೊಂಡಿದ್ದಾರೆ.

 

View this post on Instagram

 

A Beautiful Day With Our Rockstar Sanjay Dutt At Salon Hakim’s Aalim ❤️ My day just got better with @duttsanjay entering our Salon HA… It’s always such a delight to see him but today was something else…. A whole lot of emotions caught up as we go a long way and share such beautiful memories together.❤️ Sanjay Dutt at Salon Hakim’s Aalim after getting a haircut done with all the necessary precautions Instructed by the government and the experts. #SanjayDutt #AalimHakim #Rockstar #SalonHakimsAalim #TeamHA #SafetyFirst #Precautions #Hygiene #SocialDistancing #NewNorms #TeamHakimsAalim #SalonLife #Viral #Trending #MovieLife #ActorsLife #fighter #warrior #babarocks #friends @duttsanjay @aalimhakim

A post shared by Aalim Hakim (@aalimhakim) on

ನವೆಂಬರ್ ನಲ್ಲಿ ಕೆಜಿಎಫ್-2 ಚಿತ್ರೀಕರಣಕ್ಕೆ ಹಾಜರ್
ಚಿಕಿತ್ಸೆ ಬಳಿಕ ಚೇತರಿಸಿಕೊಂಡಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ಮರಳಲು ಸಿದ್ಧತೆ ನಡೆಸಿದ್ದಾರೆ. ನವೆಂಬರ್ ನಲ್ಲಿ ಕೆಜಿಎಫ್-2 ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ ಎನ್ನಲಾಗಿದೆ. ವರ್ಕೌಟ್ ಸಹ ಮಾಡುತ್ತಿರುವ ಸಂಜಯ್ ದತ್, ಚಿತ್ರೀಕರಣಕ್ಕೆ ತಯಾರಾಗುತ್ತಿದ್ದಾರೆ. ಸದ್ಯ ಮಂಗಳೂರಿನಲ್ಲಿ ಕೆಜಿಎಫ್-2 ಸಿನಿಮಾದ ಶೂಟಿಂಗ್ ನಡೆಯುತ್ತಿದ್ದು, ಯಶ್, ನಾಯಕಿ ಶ್ರೀನಿಧಿ ಶೆಟ್ಟಿ ಭಾಗದ ಚಿತ್ರೀಕರಣ ನಡೆಯುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *