– ಹಾಲು ಕುಡಿಸಲಾಗದೆ ಹಸುಗಳು ಒದ್ದಾಟ
– ಇತ್ತ ಹಾಲು ಕುಡಿಯದೆ ಕರುಗಳು ಕಂಗಾಲು
ಗದಗ: ಗೋವುಗಳ ಮೇಲೆ ಮಾರಕಾಸ್ತ್ರಗಳಿಂದ ಕಿಡಿಗೇಡಿಗಳು ಹಲ್ಲೆ ಮಾಡಿ, ಬಾಲ ಕತ್ತರಿಸಿದ ಮಾಡಿರುವ ಘಟನೆ ನಗರದ ರಾಧಾಕೃಷ್ಣ ನಗರದಲ್ಲಿ ನಡೆದಿದೆ.
Advertisement
ಸಂತೋಷ ಹಿರೇಮಠ ಎಂಬವರಿಗೆ ಸೇರಿದ ಹಸುಗಳನ್ನು ಮನೆಯ ಹೊರಭಾಗದಲ್ಲಿ ಕಟ್ಟಿದ್ದ ವೇಳೆ ಘಟನೆ ನಡೆದಿದೆ. ಭಾರತೀಯ ಸಂಸ್ಕೃತಿಯ ಗೋವುಗಳನ್ನು ಪೂಜ್ಯ ಭಾವನೆಯಿಂದ ಕಾಣಲಾಗುತ್ತಿದೆ. ಇದಕ್ಕಾಗಿಯೇ ಗೋ ಸಂಸತತಿ ಸಂರಕ್ಷಣೆಯ ಸಲುವಾಗಿ ರಾಜ್ಯ ಸರ್ಕಾರದ ಗೋ ಹತ್ಯೆ ನಿಷೇಧ ಜಾರಿ ಮಾಡಿದೆ. ಗೋಹತ್ಯೆ ನಿಷೇಧದ ಬಳಿಕ ಮೊದಲ ಬಾರಿಗೆ ಗೋವುಗಳ ಮೇಲೆ ಆಗಿದೆ.
Advertisement
Advertisement
ಮನೆಯ ಹೊರಭಾಗದಲ್ಲಿ ಕಟ್ಟಿದ್ದ ವೇಳೆ, ಕಿರಾತಕರು ಮೂರು ಹಸುಗಳ ಬಾಲವನ್ನು ಕತ್ತರಿಸಿದ್ದಾರೆ. ಗೋವುಗಳ ಸ್ಥಿತಿ ಕಂಡು ಗೋಪಾಲಕರು ಕಣ್ಣೀರು ಹಾಕುತ್ತಿದ್ದಾರೆ. ಹಾಲು ಕುಡಿಯುವ (ಕೆಚ್ಚಲು) ಜಾಗಕ್ಕೂ ಮಾರಕಾಸ್ತ್ರಗಳಿಂದ ಗಾಯಗೊಳಿಸಿದ್ದಾರೆ. ಹೀಗಾಗಿ ಮೂರು ದಿನಗಳಿಂದ ಕರುಗಳು ಹಾಲು ಕುಡಿಯದಾಗದೇ ಪರದಾಡುತ್ತಿವೆ.
Advertisement
ಗೋ ಹಂತಕ ದುಷ್ಕರ್ಮಿಗಳು ಈಗ ತಾಯಿ, ಕರು ದೂರ ಮಾಡಿರುವ ಅಮಾನವೀಯ ಘಟನೆ ಮಮ್ಮಲ ಮರಗುವಂತೆ ಮಾಡಿದೆ. ಸ್ಥಳಕ್ಕೆ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.