ಬೆಂಗಳೂರು: ಕೆಎಸ್‌ಆರ್‌ಟಿಸಿಯು ಕೋವಿಡ್ ಸಮಯದಲ್ಲಿ ಸಿಬ್ಬಂದಿಯಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಹಾಗೂ ಶ್ವಾಸಕೋಶವನ್ನು ಕಾಪಾಡುವ ‘ಸಿಂಹ ಕ್ರಿಯಾ ಯೋಗ’ ಕಾರ್ಯಕ್ರಮವನ್ನು ಈಶಾ ಫೌಂಡೇಶನ್ ಸಹಯೋಗದೊಂದಿಗೆ ಹಮ್ಮಿಕೊಂಡಿದೆ.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ, ನಿಗಮದ ಸಿಬ್ಬಂದಿ ಶ್ರಮ ಜೀವಿಗಳು, ಹಗಲು ರಾತ್ರಿಯನ್ನದೆ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಅತ್ಯಗತ್ಯವಾಗಿದೆ. ಆ ನಿಟ್ಟಿನಲ್ಲಿ ಸಾವಿರಾರು ವರುಷಗಳ ಇತಿಹಾಸವನ್ನು ಹೊಂದಿರುವ ಯೋಗ ಕಾರ್ಯಕ್ರಮವು ದೈಹಿಕ, ಮಾನಸಿಕ ಹಾಗೂ ಭೌತಿಕ ಆರೋಗ್ಯಕ್ಕೆ ಸಹಕಾರಿಯಾಗಲಿದೆ ಎಂದರು.
Advertisement
Advertisement
ಈಶಾ ಫೌಂಡೇಶನ್ ರವರ ಯೋಗ ಕಾರ್ಯಕ್ರಮವು ಅತ್ಯಂತ ಪರಿಣಾಮಕಾರಿಯಾಗಿದ್ದು, ಮನೆಯಲ್ಲಿಯೇ ಮಾಡಬಹುದಾದ ಸರಳ ಕ್ರಿಯೆ ಇದಾಗಿದೆ. ಕಾರ್ಯಕ್ರಮವು ಕನ್ನಡದಲ್ಲಿಯೇ ರೂಪಿಸಲಾಗಿದ್ದು, ಸಿಬ್ಬಂದಿಗಳಿಗೆ ಯಾವುದೇ ಪ್ರಶ್ನೆಗಳಿಗಿದ್ರೂ ಕಾರ್ಯಕ್ರಮದ ಕೊನೆಯಲ್ಲಿ ಉತ್ತರಿಸಲಾಗುತ್ತದೆ.
Advertisement
ಜುಲೈ 1ರಿಂದ ಪ್ರತಿ ದಿನ ಬೆಳಗ್ಗೆ 7 ಮತ್ತು ಸಂಜೆ 6 ಗಂಟೆಗೆ 30 ನಿಮಿಷ ಅವಧಿ ಯೋಗ ಕಾರ್ಯಕ್ರಮ ಇದಾಗಿದೆ. ಎಲ್ಲಾ ಅಧಿಕಾರಿ/ ಸಿಬ್ಬಂದಿಯ ವಾಟ್ಸಾಪ್ ಗುಂಪುಗಳಲ್ಲಿ ಕಾರ್ಯಕ್ರಮದ ಯೂಟ್ಯೂಬ್ ಲಿಂಕ್ ಅನ್ನು ರವಾನಿಸಿ, ಸಮಸ್ತ ಸಿಬ್ಬಂದಿ ಹಾಗೂ ಕುಟುಂಬದವರಿಗೆ ಅನುಕೂಲವಾದ ಸಮಯದಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳ ಬೇಕಾಗಿ ತಿಳಿಸಿದರು. ಇದನ್ನೂ ಓದಿ: ಯೋಗದಲ್ಲಿ ವಿಶೇಷ ಸಾಧನೆಗೈದ ಬಾಲಕ
Advertisement
ಕೋವಿಡ್ ನಿಂದಾಗಿ ಜನರ ಜೀವನಶೈಲಿ ಬದಲಾವಣೆಯಾಗಬೇಕಾಗಿರುವುದು ಅನಿವಾರ್ಯವಾಗಿದೆ. ಅದರಲ್ಲಿಯೂ ಯೋಗ ಪ್ರಮುಖವಾದ ಪಾತ್ರವನ್ನು ವಹಿಸುತ್ತಿದೆ. ಈಶಾ ಫೌಂಡೇಶನ್ ರವರು ನಮ್ಮ ಸಿಬ್ಬಂದಿಗಾಗಿ ಸಿದ್ಧಪಡಿಸಿರುವ ಈ ಯೋಗ ಕಾರ್ಯಕ್ರಮವು ಸಿಬ್ಬಂದಿಯ ಆರೋಗ್ಯ ಸ್ನೇಹಿ ಉಪಕ್ರಮವಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಈಶಾ ಫೌಂಡೇಶನ್ ರವರಿಂದ ಶ್ರೀಮತಿ ರಾಧಿಕ ಶ್ರೀನಾಥ್, ನಿಗಮದ ಹಿರಿಯ ಅಧಿಕಾರಿಗಳು ಸಿಬ್ಬಂದಿ ಭಾಗವಹಿಸಿದ್ದರು.