ಬೆಂಗಳೂರು: ರಾಜ್ಯದ 8 ಸ್ಥಳಗಳಿಗೆ ಕೆಎಸ್‌ಆರ್‌ಟಿಸಿ ಎಸಿ ಬಸ್‍ಗಳ ಸಂಚಾರವು ಗುರುವಾರದಿಂದ ಆರಂಭವಾಗಲಿದೆ.
ಬೆಂಗಳೂರಿನಿಂದ ಮೈಸೂರು, ಮಂಗಳೂರು, ಕುಂದಾಪುರ, ಚಿಕ್ಕಮಗಳೂರು, ಮಡಿಕೇರಿ, ದಾವಣಗೆರೆ, ಶಿವಮೊಗ್ಗ ಹಾಗೂ ವಿರಾಜಪೇಟೆಗೆ ಎಸಿ ಬಸ್‍ಗಳ ಓಡಾಟ ಆರಂಭಸಲಿವೆ. ಆದರೆ ತಾಪಮಾನ 24 ರಿಂದ 25 ಡಿಗ್ರಿ ಸೆಂಟಿಗ್ರೇಡ್‍ನಲ್ಲಿ ಎಸಿ ಬಸ್‍ಗಳನ್ನು ಓಡಿಸಲು ಸೂಚನೆ ನೀಡಲಾಗಿದೆ.
ಪ್ರಯಾಣಿಕರು www.Ksrtc.in ವೆಬ್‍ಸೈಟ್ ಮೂಲಕ ಎಸಿ ಬಸ್‍ಗಳ ಟಿಕೆಟ್‍ಗಳ್ನು ಕಾಯ್ದಿರಿಸಬಹುದು. ಆದರೆ ರಾತ್ರಿ ಬಸ್ ಸಂಚಾರದಲ್ಲಿ ಹೊದಿಕೆಗಳನ್ನು ನೀಡದಿರಲೂ ನಿರ್ಧಾರ ತೆಗೆದುಕೊಳ್ಳಲಾಗಿದೆ.