ಕೊಪ್ಪಳ: ಕೆಆರ್‌ಎಸ್ ವಿಷಯದಲ್ಲಿ ಯಾರೂ ಸಹ ರಾಜಕಾರಣ ಮಾಡಬಾರದು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು, ಕೆಆರ್‌ಎಸ್ ವಿಷಯದಲ್ಲಿ ರಾಜಕೀಯ ನಡೆಯುತ್ತಿದೆ. ಕೆಆರ್‌ಎಸ್‍ನಲ್ಲಿ ಬಿರುಕು ಇಲ್ಲ ಎಂದು ಕಾವೇರಿ ನೀರಾವರಿ ನಿಗಮದ ಇಂಜನೀಯರ್ ಹಾಗೂ ಸಚಿವರು ಹೇಳಿದ್ದಾರೆ. ಆದರೂ ಸಹ ಈ ವಿಷಯದಲ್ಲಿ ಇಲ್ಲಿ ರಾಜಕೀಯ ಮಾಡಲಾಗುತ್ತಿದೆ. ಕೆಆರ್‌ಎಸ್ ವಿಷಯದಲ್ಲಿ ಏನೋ ಆಗಿದೆ ಎಂಬಂತೆ ಬಿಂಬಸಲಾಗುತ್ತಿದೆ. ಯಾರಾದರೂ ಆಗಲಿ ಮಾತಿನ ಮೂಲಕ ರಾಜಕಾರಣ ಮಾಡಬಾರದು. ನಮ್ಮ ಕೆಲಸದ ಮೂಲಕ ರಾಜಕಾರಣ ಮಾಡಬೇಕು ಎಂದಿದ್ದಾರೆ. ಇದನ್ನೂ ಓದಿ: ಇಬ್ಬರನ್ನ ಜಗಳಕ್ಕೆ ಬಿಟ್ಟು ಸೇಫ್ ಆದಂತಿದೆ: ಸುಮಲತಾ, ಹೆಚ್‍ಡಿಕೆ ಸಮರಕ್ಕೆ ಚಲುವರಾಯಸ್ವಾಮಿ ಪ್ರತಿಕ್ರಿಯೆ
ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಬಾರದು. ಮಾಜಿ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರ ಬಗ್ಗೆ ಆ ರೀತಿ ಮಾತನಾಡಿದ್ದು ತಪ್ಪು ಎಂದು ಈ ಹಿಂದೆಯೇ ಹೇಳಿದ್ದೇನೆ. ಅಂಬರೀಷ್ ಅವರು ಈಗ ಇಲ್ಲ. ಅವರ ಹೆಸರನ್ನು ಎಳೆದು ತರಬಾರದು ಎಂದಿದ್ದಾರೆ. ಕೊಪ್ಪಳ ಜಿಲ್ಲೆಯಲ್ಲಿ ಅಕ್ರಮ ಚಟುವಟಿಕೆಗಳ ಕುರಿತು ಆಡಿಯೋ ಪ್ರಕರಣಗಳು ನಡೆಯುತ್ತಿವೆ. ಈ ಬಗ್ಗೆ ಚರ್ಚೆ ಮಾಡುತ್ತೇವೆ. ಅಕ್ರಮ ಮರಳದಂಧೆಯಲ್ಲಿ ಭಾಗಿಯಾದವರನ್ನೇ ತನಿಖಾಧಿಕಾರಿಯನ್ನಾಗಿ ಮಾಡಲಾಗಿದೆ ಎಂಬ ಆರೋಪದ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಿಂದ ಮಾಹಿತಿ ಪಡೆದುಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಖಾರವಾದ ಮೊಟ್ಟೆ ಚಿಲ್ಲಿ ನೀವೂ ಮಾಡಿ